ಕೃಷಿ ಉದ್ದೇಶಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯಲು ಬೇಕಾದ ಅರ್ಹತೆ ಮಾನದಂಡಗಳು ಇವು 

ಬ್ಯಾಂಕುಗಳು ಸಾಲ ನೀಡಲು ಷರತ್ತುಗಳನ್ನು ವಿಧಿಸುತ್ತವೆ. ಮಾನದಂಡಗಳನ್ನು ಅನುಸರಿಸುತ್ತವೆ. ಎಲ್ಲರಿಗೂ ಏಕಪ್ರಕಾರವಾದ ಸಾಲ ದೊರೆಯುವುದಿಲ್ಲ. ಇತ್ತೀಚೆಗೆ ಕೃಷಿಯತ್ತ ಮುಖ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅವರೆಲ್ಲರ ಪ್ರಶ್ನೆ ಕೃಷಿ ಉದ್ದೇಶಕ್ಕೆ ಸಾಲ ಪಡೆಯಲು ಯಾವ ಅರ್ಹತೆ ಇರಬೇಕು ಎಂಬುದಾಗಿದೆ. ಮುಂದೆ ನೀಡಲಾದ ಮಾಹಿತಿ ಆಸಕ್ತರಿಗೆ ಅನುಕೂಲವಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬ್ಯಾಂಕುಗಳು ಸಾಲ ನೀಡಲು ಷರತ್ತುಗಳನ್ನು ವಿಧಿಸುತ್ತವೆ. ಮಾನದಂಡಗಳನ್ನು ಅನುಸರಿಸುತ್ತವೆ. ಎಲ್ಲರಿಗೂ ಏಕಪ್ರಕಾರವಾದ ಸಾಲ ದೊರೆಯುವುದಿಲ್ಲ. ಇತ್ತೀಚೆಗೆ ಕೃಷಿಯತ್ತ ಮುಖ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅವರೆಲ್ಲರ ಪ್ರಶ್ನೆ ಕೃಷಿ ಉದ್ದೇಶಕ್ಕೆ ಸಾಲ ಪಡೆಯಲು ಯಾವ ಅರ್ಹತೆ ಇರಬೇಕು ಎಂಬುದಾಗಿದೆ. ಮುಂದೆ ನೀಡಲಾದ ಮಾಹಿತಿ ಆಸಕ್ತರಿಗೆ ಅನುಕೂಲವಾಗುತ್ತದೆ.

ಸಹಕಾರ ಇಲಾಖೆಯ ಅಡಿಯಲ್ಲಿ ಪ್ರಮುಖವಾಗಿ ಕೃಷಿ ಉದ್ದೇಶಕ್ಕೆ ಸಾಲ ನೀಡುವ ಬ್ಯಾಂಕುಗಳು ಬರುತ್ತವೆ. ಸಾಲ ನೀಡುವುದಕ್ಕಾಗಿ ಇಲಾಖೆ ಕೆಲವು ಮಾನದಂಡಗಳನ್ನು ರೂಪಿಸಿದೆ. ಈ ಬ್ಯಾಂಕುಗಳಲ್ಲಿ ರೂ. 3 ಲಕ್ಷಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಲಾವಧಿ ಬೆಳೆ ಸಾಲ ಮತ್ತು ಪಶುಸಂಗೋಪನೆ/ಮೀನುಗಾರಿಕ ಉದ್ದೇಶಗಳಿಗೆ ದುಡಿಯುವ ಬಂಡವಾಳವಾಗಿ ರೂ.2.00 ಲಕ್ಷಗಳವರೆಗೆ ಶೂನ್ಯ ಬಡ್ಡಿದರದ ಸಾಲದ ಯೋಜನೆಗಳಿವೆ.

ಸಾಲ ಪಡೆಯಲು ಅರ್ಜಿ ಸಲ್ಲಿಸುವ ರೈತ  ಅಥವಾ ರೈತ ಮಹಿಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್‌ ಬ್ಯಾಂಕ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರಬೇಕು. ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಸಂಘಗಳಿಗೆ ಅರ್ಜಿ ಸಲ್ಲಿಸಬೇಕು.

ರೈತ ವಾಸವಿರುವ ಸ್ಥಳದ ಸಂಘ ಅಥವಾ ಭೂಮಿ ಹೊಂದಿರುವ ಸ್ಥಳದ ಸಂಘ ಇವುಗಳಲ್ಲಿ ಯಾವುದಾದರೂ ಒಂದು ಸಂಘದ ವ್ಯಾಪ್ತಿಯಲ್ಲಿ ಮಾತ್ರ ಸಾಲ ಪಡೆಯಬಹುದು. ಸದರಿ ಆರ್‌ಟಿಸಿ ಮೇಲೆ ಇತರೇ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡಬರಬಾರದು. ರೈತನು ಸಂಘವು ನಿಗದಿಪಡಿಸಿದ ಗಡುವಿನ ವಿನಾಂಕದೊಳಗೆ ಅಸಲು ಮರುಪಾವತಿಸಬೇಕು.

10.00 ಲಕ್ಷಗಳವರೆಗೆ ಸಾಲ ಪಡೆಯಲು ಮಾನದಂಡವೇನು: ಇದು  ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲಗಳನ್ನು ಶೇಕಡ 3 ರ ಬಡ್ಡಿ ದರದಲ್ಲಿ ನೀಡುವ  ಯೋಜನೆಯಾಗಿದೆ. ಇದರಡಿಯಲ್ಲಿ ಸಾಲ ಪಡೆಯಲು  ಅರ್ಜಿ ಸಲ್ಲಿಸುವ ರೈತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಏಕಾರ್ಡ್ ಬ್ಯಾಂಕ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲ ಸದಸ್ಯತ್ವ ಹೊಂದಿರಬೇಕು.

ಭೂಮಿ ದಾಖಲೆಗಳು, ಭದ್ರತೆಗೆ ಬೇಕಾದ ದಾಖಲೆಗಳು ಮತ್ತು ಯೋಜನಾ ವರದಿಯೊಂದಿಗೆ ನಿಗದಿತ ನಮೂನೆಯಲ್ಲಿ  ಸಂಬಂಧಿಸಿದ ಸಂಘಗಳಿಗೆ ಅರ್ಜಿ ಸಲ್ಲಿಸಬೇಕು. ರೈತ ವಾಸವಿರುವ ಸ್ಥಳದಲ್ಲಿರುವ  ವಾಸವಿರುವ ಸಂಘ ಅಥವಾ ಭೂಮಿ ಹೊಂದಿರುವ ಸ್ಥಳದ ಸಂಘ ಇವುಗಳಲ್ಲಿ ಯಾವುದಾದರೊಂದು  ಸಂಘದ ವ್ಯಾಪ್ತಿಯಲ್ಲಿ ಮಾತ್ರ ಸಾಲ ಪಡೆಯಬಹುದು.  ಸಂಘವು ನಿಗದಿಪಡಿಸಿದ ಗಡುಬಿನ ಏನಾಂಕದ ಒಳಗೆ ಅಸಲು ಮತ್ತು ಶೇ.3 ರ ಬಡ್ಡಿಯನ್ನು ಪಾವತಿಸಬೇಕು.

ನಬಾರ್ಡ್ ಗುರುತಿಸಿದ ಕೃಷಿ,  ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಪೈಕಿ ಲಘು ನೀರಾವರಿ, ಭೂ ಅಭಿವೃದ್ಧಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್ ಹಾಗೂ ತೋಟಗಾರಿಕೆ ಅಭಿವೃದ್ಧಿ, ಸಾವಯವ ಕೃಷಿ ಪಶುಸಂಗೋಪನೆ ಹಾಗೂ ಹೈನುಗಾಲಕ, ಮೀನು ಕೃಷಿ, ರೇಷ್ಮೆ ಕೃಷಿ, ಜೇನು ಸಾಕಾಣಿಕೆ ಉದ್ದೇಶಗಳಗ ರೈತಲಿಗೆ ನೀಡಲಾಗುವ ಸಾಲಗಳಗೆ ಮಾತ್ರ ಅನ್ವಯವಾಗುತ್ತದೆ.

ಈ ಯೋಜನೆಯು ಕೊಯ್ಲುವರೆಗಿನ ಮತ್ತು ಕೊಯ್ಲು ನಂತರದ ಕೃಷಿ ಚಟುವಟಿಕೆಗಳಿಗೆ ಅಂದರೆ ಮಾರುಕಟ್ಟೆಗೆ ಕೃಷಿ ಉತ್ಪನ್ನ ಸಿದ್ಧವಾಗುವ ಹಂತದ ವರೆಗೆ (threshing, winnowing, cleaning, grading drying) ಅವಶ್ಯವಿರುವ ಕೃಷಿ ಯಂತ್ರೋಪಕರಣ ಘಟಕಗಳನ್ನು ಹೊಂದಲು ನೀಡುವ ಸಾಲಗಳಗೂ ಸಹ ಅನ್ವಯವಾಗುತ್ತದೆ.

ದ್ವಿಚಕ್ರ ವಾಹನ, ಜೀಪು, ಪಿಕಪ್ ವ್ಯಾನ್ ಹಾಗೂ ಇನ್ನು ಮುಂತಾದ ಯಾವುದೇ ಕೃಷಿ ಸಾಗಾಣಿಕೆಗೆ ಬಳಸುವ ವಾಹನ ಸಾಲಗಳಗ, ಕೂಟದ ಮನೆ, ಗ್ರಾಮೀಣ ಗೋದಾಮುಗಳಿಗೆ, ದ್ವಿತೀಯ ಸಂಸ್ಕರಣೆ, ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ/ಆಹಾರ ಸಂಸ್ಕರಣೆ, ಕೃಷಿ ಕ್ಲಿನಿಕ್‌ಗೆ ನೀಡುವ ಸಾಲಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com