ನಾನು ಯೆಮೆನ್ ನಲ್ಲಿ ಜನಿಸಿದವ, ನನ್ನ ತಂದೆ ನನ್ನಲ್ಲಿ ಅರೇಬಿಕ್ ರಕ್ತವಿದೆ ಎಂದು ಹೇಳುತ್ತಿದ್ದರು: ಮುಖೇಶ್ ಅಂಬಾನಿ

ಕತಾರ್ ಎಕನಾಮಿಕ್ ಫೋರಂನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ತಮ್ಮ ಮತ್ತು ಅರಬ್ ದೇಶದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು “ನಾನು ಯೆಮೆನ್ ನಲ್ಲಿ ಜನಿಸಿದವನು, ಏಕೆಂದರೆ ನನ್ನ ತಂದೆ ಯುವಕರಾಗಿದ್ದಾಗ ಯೆಮೆನ್ ಗೆ ಬಂದಿದ್ದರು" ಎಂದಿದ್ದಾರೆ.
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ

ನವದೆಹಲಿ: ಕತಾರ್ ಎಕನಾಮಿಕ್ ಫೋರಂನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ತಮ್ಮ ಮತ್ತು ಅರಬ್ ದೇಶದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು “ನಾನು ಯೆಮೆನ್ ನಲ್ಲಿ ಜನಿಸಿದವನು, ಏಕೆಂದರೆ ನನ್ನ ತಂದೆ ಯುವಕರಾಗಿದ್ದಾಗ ಯೆಮೆನ್ ಗೆ ಬಂದಿದ್ದರು" ಎಂದಿದ್ದಾರೆ. ಅಲ್ಲದೆ ಇದೇ ವಿಚಾರವಾಗಿ ಮುಂದುವರಿದು ತನ್ನಲ್ಲಿ ಅರೇಬಿಕ್ ರಕ್ತವಿದೆ ಎಂದು ಹೇಳಿದರು.

"ಅವರು (ತಂದೆ ಧೀರೂಭಾಯಿ ಅಂಬಾನಿ) ಯಾವಾಗಲೂ ನನ್ನಲ್ಲಿ ಅರೇಬಿಕ್ ರಕ್ತವಿದೆ ಎಂದು ಹೇಳುತ್ತಿದ್ದರು" ಎಂದು ಅವರು ಹೇಳಿದರು. "ಭಾರತ ಮತ್ತು ಎಲ್ಲಾ ಅರಬ್ ರಾಷ್ಟ್ರಗಳ ನಡುವಿನ ಸಂಬಂಧಗಳ ಮಹತ್ವ ನನಗೆ ತಿಳಿದಿದೆ" ಎಂದು ಅವರು ಹೇಳಿದರು.

ಕತಾರ್ ನಲ್ಲಿ ಸುಮಾರು ಏಳು ಲಕ್ಷ ಭಾರತೀಯರಿದ್ದಾರೆ. ಅವರೆಲ್ಲರೂ ಕತಾರ್ ನಲ್ಲಿ ಭಾರತದ ವಕ್ತಾರರಾಗಿದ್ದಾರೆ. ವಿಶ್ವಸಂಸ್ಥೆಯ ಸಹಸ್ರಮಾನದ ಅಭಿವೃದ್ಧಿ ಗುಂಪಿನಲ್ಲಿ ಶೇಖಾ ಮೋಝಾ ಅವರೊಡನೆ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು. ನನ್ನ ಪತ್ನಿ ಅವರ ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯ ಅಭಿಮಾನಿ, ಕತಾರ್ ರಾಜಕುಟುಂಬದಿಂದ ನಾವು ಕಲಿಯುವ ಮೂಲಕ, ಪ್ರೇರಣ ಪಡೆಯುವ ಮೂಲಕ ಭಾರತ ಹಾಗೂ ಕತಾರ್ ನಡುವೆ ಗಾಢ ಸಂಬಂಧ ಬೆಳೆಸಬಹುದು ಎಂದು ಅಂಬಾನಿ ಹೇಳಿದ್ದಾರೆ.

ಏಪ್ರಿಲ್ 19, 1957 ರಂದು ಮುಖೇಶ್ ಅಂಬಾನಿ ಯೆಮೆನ್ ನ ಅಡೆನ್‌ನಲ್ಲಿ ಜನಿಸಿದರು. ಮುಖೇಶ್ ಅಂಬಾನಿ ಇಂದು 2,718 ಶತಕೋಟಿಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಅಮೆರಿಕದ ಟೈಮ್ ನಿಯತಕಾಲಿಕವು ಮುಖೇಶ್ ಅಂಬಾನಿಯನ್ನು 2019 ರ ಅತ್ಯಂತ ಪ್ರಭಾವಶಾಲಿ 100 ಜನರ ಪಟ್ಟಿಯಲ್ಲಿ ಸೇರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com