5ಜಿ ನೆಟ್ವರ್ಕ್ ಹೊಂದಿರಲಿರುವ "ಜಿಯೋ ಫೋನ್ ನೆಕ್ಸ್ಟ್" ಸೆಪ್ಟೆಂಬರ್ ನಲ್ಲಿ ಬಿಡುಗಡೆ
ಗೂಗಲ್ ಹಾಗೂ ಜಿಯೋ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ ಜಿಯೋಫೋನ್ ನೆಕ್ಸ್ಟ್-5 ಜಿ ಸ್ಮಾರ್ಟ್ ಫೋನ್ ಸೆಪ್ಟೆಂಬರ್ ನಲ್ಲಿ ಬಿಡುಗಯಾಗಲಿದೆ ಎಂದೌ ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಜೂ.24 ರಂದು ಘೋಷಿಸಿದ್ದಾರೆ.
Published: 24th June 2021 05:42 PM | Last Updated: 24th June 2021 09:47 PM | A+A A-

ಜಿಯೋ
ಮುಂಬೈ: ಗೂಗಲ್ ಹಾಗೂ ಜಿಯೋ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ "ಜಿಯೋ ಫೋನ್ ನೆಕ್ಸ್ಟ್"-5 ಜಿನೆಟ್ವ್ ಸ್ಮಾರ್ಟ್ ಫೋನ್ ಸೆಪ್ಟೆಂಬರ್ ನಲ್ಲಿ ಬಿಡುಗಯಾಗಲಿದೆ ಎಂದೌ ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಜೂ.24 ರಂದು ಘೋಷಿಸಿದ್ದಾರೆ.
ಜಿಯೋಫೋನ್ ನೆಕ್ಸ್ಟ್ ಸೆ.10 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದ್ದು ಜಗತ್ತಿನಲ್ಲಿಯೇ ಕೈಗೆಟುಕುವ ಸ್ಮಾರ್ಟ್ ಫೋನ್ ಆಗಿರಲಿದೆ ಎಂದು ಅಂಬಾನಿ ಆರ್ ಐಎಲ್ ನ ವಾರ್ಷಿಕ ಸಭೆಯಲ್ಲಿ ಅಂಬಾನಿ ಹೇಳಿದ್ದಾರೆ.
ಧ್ವನಿ ಸಹಾಯಕ ಜಾಗೂ ಭಾಷಾಂತರ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಸ್ಮಾರ್ಟ್ ಫೋನ್ ಹೊಂದಿರಲಿದ್ದು, ರಿಲಾಯನ್ಸ್ ಜಿಯೋ 5 ಜಿ ಗಾಗಿ ಗೂಗಲ್ ಕ್ಲೌಡ್ ನ್ನು ಬಳಕೆ ಮಾಡಲಿದೆ ಎಂದು ಅಂಬಾನಿ ಹೇಳಿದ್ದಾರೆ. ಕಳೆದ ವರ್ಷ ರಿಲಾಯನ್ಸ್ ನಲ್ಲಿ ಶೇ.7.7 ರಷ್ಟು ಪಾಲನ್ನು ಹೊಂದಲು 33,737 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿ ಹೇಳಿತ್ತು.