Online Desk
ನವದೆಹಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕುವ ನಿರ್ಧಾರ ಸರಿ ಎಂದ ಸುಪ್ರೀಂ ಕೋರ್ಟ್ ತೀರ್ಪಿಗೆ ರತನ್ ಟಾಟಾ ಪ್ರತಿಕ್ರಿಯಿಸಿದ್ದಾರೆ.
ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರಾಗಿರುವ ರತನ್ ಟಾಟಾ ಈ ಸಂಬಂಧ ಟ್ವೀಟ್ ಮಾಡಿದ್ದು "ಗೌರವಾನ್ವಿತ ಸುಪ್ರೀಂ ಕೋರ್ಟ್ ಇಂದು ನೀಡಿದ ತೀರ್ಪನ್ನು ನಾನು ಪ್ರಶಂಸಿಸುತ್ತೇನೆ ಮತ್ತು ಅದಕ್ಕಾಗಿ ಕೃತಜ್ಞನಾಗಿದ್ದೇನೆ.
"ಇದು ಗೆಲುವು ಅಥವಾ ಸೋಲಿನ ವಿಷಯವಲ್ಲ. ಸಮಗ್ರತೆ ಮತ್ತು ಗುಂಪಿನ ನೈತಿಕ ನಡವಳಿಕೆಯ ಮೇಲೆನಡೆದ ದಾಳಿಯ ನಂತರ, ಟಾಟಾ ಸನ್ಸ್‌ನ ಎಲ್ಲಾ ಮೇಲ್ಮನವಿಗಳನ್ನು ಎತ್ತಿಹಿಡಿಯುವ ತೀರ್ಪು ಯಾವಾಗಲೂ ಸಮೂಹದ ಮಾರ್ಗದರ್ಶಿ ಸೂತ್ರಗಳಾಗಿರುವ ಮೌಲ್ಯಗಳು ಮತ್ತು ನೈತಿಕತೆಯ ಮೌಲ್ಯಮಾಪನವಾಗಿದೆ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಬಲಪಡಿಸುತ್ತದೆ. " ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿರುವ ತೀರ್ಪಿನಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ಪುನಃ ನೇಮಿಸಲು ಆದೇಶಿಸಿದ 2019 ರ ಡಿಸೆಂಬರ್ 17 ರ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ ಆದೇಶಕ್ಕೆ ಅಸಮ್ಮತಿ ಸೂಚಿಸಿದೆ.