ದೀಪಾವಳಿ ಸಡಗರ: ಗ್ರಾಹಕರು ಹಾಲ್ ಮಾರ್ಕ್ ಇರುವ ಚಿನ್ನಾಭರಣ ಖರೀದಿಸಿ- ಕೇಂದ್ರ ಸರ್ಕಾರ

ದೀಪಾವಳಿ ಮತ್ತು ಧಂತೇರಸ್ ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಹಾಲ್ ಮಾರ್ಕ್ ಇರುವ ಚಿನ್ನಾಭರಣಗಳನ್ನು ಖರೀದಿಸುವಂತೆ ಕೇಂದ್ರ ಸರ್ಕಾರ ಮಂಗಳವಾರ ಸಲಹೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೀಪಾವಳಿ ಮತ್ತು ಧಂತೇರಸ್ ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಹಾಲ್ ಮಾರ್ಕ್ ಇರುವ ಚಿನ್ನಾಭರಣಗಳನ್ನು ಖರೀದಿಸುವಂತೆ ಕೇಂದ್ರ ಸರ್ಕಾರ ಮಂಗಳವಾರ ಸಲಹೆ ನೀಡಿದೆ.

ಬಿಐಎಸ್ ಮಾನ್ಯತೆ ಪಡೆದ ನೋಂದಾಯಿತ ಆಭರಣಕಾರರಿಂದ ಹಾಲ್ ಮಾರ್ಕ್ ಇರುವ ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಖರೀದಿಸುವಂತೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್ ) ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜನರಿಗೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಹಾಲ್‌ಮಾರ್ಕ್ ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸದಿದ್ದರೆ, ಆಭರಣ ವ್ಯಾಪಾರಿಗಳಿಂದ ಭೂತಗನ್ನಡಿಯನ್ನು ಕೇಳಿ ಎಂದು ಸಲಹೆ ನೀಡಲಾಗಿದೆ. ಜೂನ್ 23, 2021 ರಿಂದ ಜಾರಿಗೆ ಬರುವಂತೆ ದೇಶದ 256 ಜಿಲ್ಲೆಗಳಲ್ಲಿ 14, 18 ಮತ್ತು 22 ಕ್ಯಾರೆಟ್ ಚಿನ್ನದ ಆಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಲಾಗಿದೆ. 

ಹಾಲ್ ಮಾರ್ಕ್ ಆಭರಣಗಳನ್ನು ಬಿಐಎಸ್ ನೋಂದಾಯಿತ ಆಭರಣಗಾರರಿಂದ ಮಾತ್ರ ಮಾರಾಟ ಮಾಡಬಹುದಾಗಿದೆ. ಆಭರಣ ಖರೀದಿಸಿದ ಬಿಲ್ ನ್ನು ಗ್ರಾಹಕರು ಪಡೆಯುವಂತೆ ಸರ್ಕಾರ ಒತ್ತಾಯಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com