ಫೋನ್ ಪೇ: ಮೊಬೈಲ್ ರೀಚಾರ್ಜ್ ಮಾಡಿದ್ರೆ ಬಳಕೆದಾರರು ಕೊಡಬೇಕು ಎಕ್ಸ್ ಟ್ರಾ ಚಾರ್ಚ್!

ವಾಲ್ಮಾರ್ಟ್​ ಒಡೆತನದ ಡಿಜಿಟಲ್​ ಪಾವತಿಗಳ ಆ್ಯಪ್​​ ಫೋನ್​ ಪೇ ಇದೀಗ ವಹಿವಾಟುದಾರರಿಗೆ ಎಕ್ಸ್ ಟ್ರಾ ಚಾರ್ಜ್ ಮಾಡಲಿದೆ. ಸದ್ಯ ಮೊಬೈಲ್ ರೀಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ ಹಣವನ್ನು ಪಾವತಿ ಮಾಡಬೇಕಿದೆ.
ಫೋನ್ ಪೇ ಸಾಂದರ್ಭಿಕ ಚಿತ್ರ
ಫೋನ್ ಪೇ ಸಾಂದರ್ಭಿಕ ಚಿತ್ರ

ನವದೆಹಲಿ: ವಾಲ್ಮಾರ್ಟ್​ ಒಡೆತನದ ಡಿಜಿಟಲ್​ ಪಾವತಿಗಳ ಆ್ಯಪ್​​ ಫೋನ್​ ಪೇ ಇದೀಗ ವಹಿವಾಟುದಾರರಿಗೆ ಎಕ್ಸ್ ಟ್ರಾ ಚಾರ್ಜ್ ಮಾಡಲಿದೆ. ಸದ್ಯ ಮೊಬೈಲ್ ರೀಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ ಹಣವನ್ನು ಪಾವತಿ ಮಾಡಬೇಕಿದೆ.

50 ರೂಪಾಯಿಗಿಂತ ಹೆಚ್ಚು ಮೊಬೈಲ್ ರಿಚಾರ್ಜ್ ಮಾಡಿದರೆ ಆ ವಹಿವಾಟಿನ ಮೇಲೆ 1 ರಿಂದ 2 ರೂಪಾಯಿ ಪ್ರೊಸೆಸಿಂಗ್ ಶುಲ್ಕ ವಿಧಿಸಲಾಗುವುದು ಎಂದು ಕಂಪನಿ ಹೇಳಿದೆ.

50 ರೂ.ಗಿಂತ ಕಡಿಮೆ ರೀಚಾರ್ಜ್ ಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ. ರೂ 50 ರಿಂದ ರೂ. 100 ರ ನಡುವಿನ ರೀಚಾರ್ಜ್ ಗಳಿಗೆ ರೂ. 1 ಮತ್ತು ರೂ. 100 ಕ್ಕಿಂತ ಹೆಚ್ಚಕ್ಕೆ ಎರಡು ರೂ. ವಿಧಿಸಲಾಗುತ್ತದೆ.

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ವ್ಯಾಲೆಟ್​ನಿಂದ ರೂ. 50 ಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟು ಮಾಡಿದ್ರೆ, ಫೋನ್​ ಪೇ ಶುಲ್ಕವನ್ನು ವಿಧಿಸುತ್ತಿದೆ. ಸದ್ಯ ಇದು ಸಣ್ಣ ಪ್ರಮಾಣದ ಪ್ರಯೋಗ ಎಂದು ಕಂಪೆನಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com