ಟ್ರೂ ಕಾಲರ್ ಮಾರುಕಟ್ಟೆಯನ್ನು ಕಸಿಯಲು ಭಾರತದ ಟೆಕ್ಕಿಗಳಿಂದ ಭಾರತ್ ಕಾಲರ್ ಐಡಿ ಆಪ್!

ಟ್ರೂ ಕಾಲರ್ ನ ಮಾರುಕಟ್ಟೆಯನ್ನು ಕಸಿಯುವ ಯೋಜನೆ ಹೊಂದಿರುವ ಭಾರತೀಯ ಯುವ ಟೆಕ್ಕಿಗಳು ಭಾರತ್ ಕಾಲರ್ ಐಡಿ ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ.
ಭಾರತ್ ಕಾಲರ್ ಐಡಿ ಆಪ್
ಭಾರತ್ ಕಾಲರ್ ಐಡಿ ಆಪ್

ನವದೆಹಲಿ: ಟ್ರೂ ಕಾಲರ್ ನ ಮಾರುಕಟ್ಟೆಯನ್ನು ಕಸಿಯುವ ಯೋಜನೆ ಹೊಂದಿರುವ ಭಾರತೀಯ ಯುವ ಟೆಕ್ಕಿಗಳು ಭಾರತ್ ಕಾಲರ್ ಐಡಿ ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ.

33 ವರ್ಷದ ಪಾಟ್ನಾದ ಯುವಕ ಪ್ರಜ್ವಲ್ ಸಿನ್ಹಾ ತನ್ನ ಸ್ನೇಹಿತರೊಂದಿಗೆ ದೇಶೀಯವಾಗಿ ಈ ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಹೊಸ ಆಪ್ ಬಗ್ಗೆ ಪ್ರಜ್ವಲ್ ಸಿನ್ಹಾ ಮಾತನಾಡಿದ್ದು, ಟ್ರೂ ಕಾಲರ್ ಸೇರಿದಂತೆ ಬೇರೆ ಯಾವುದೇ ಕಾಲರ್ ಐಡಿ ಆಪ್ ಗಳಿಗಿಂತಲೂ ಕಾಲರ್ ಗಳ ಡೇಟಾ ಹಾಗೂ ಸುರಕ್ಷತೆ, ಕಾಲರ್ ಗಳ ಡಿಜಿಟಲ್ ಪ್ರೈವೆಸಿಯ ದೃಷ್ಟಿಯಿಂದ ಭಾರತ್ ಕಾಲರ್ ಐಡಿ ಆಪ್ ಸುರಕ್ಷಿತವಾದದ್ದು ಎಂದು ಹೇಳಿದ್ದಾರೆ.

ಆಪ್ ನ್ನು ಇನ್ಸ್ಟಾಲ್ ಮಾಡುವಾಗ ಬಳಕೆದಾರರ ಮೆಸೇಜ್ ಗಳಿಗೆ ಪ್ರವೇಶವನ್ನು ಕೇಳುವುದಿಲ್ಲ ಎಂದೂ ಸಿನ್ಹಾ ಸ್ಪಷ್ಟಪಡಿಸಿದ್ದಾರೆ.

ಕಾಲ್ ಲಾಕ್ ಸೇವೆಗಳು ಹಾಗೂ ಇತರ ಸೇವೆಗಳ ಬಗ್ಗೆ ಮತ್ತಷ್ಟು ಸುಧಾರಣೆಗಳ ಅಗತ್ಯವಿದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ.

ಪ್ರಜ್ವಲ್ ಬೆಂಗಳೂರಿನಲ್ಲಿ ಬಿ.ಟೆಕ್ ಪದವಿ ಪಡೆದಿದ್ದು ಐಐಎಂ ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಪ್ರಜ್ವಲ್ ಸಿನ್ಹಾ ಹಾಗೂ ಆತನ ಇಂಜಿನಿಯರ್ ಸ್ನೇಹಿತರು ಕಿಕ್ ಹೆಡ್ ಸಾಫ್ಟ್ವೇರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು 15 ದಿನಗಳಲ್ಲಿ ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ.

"15 ದಿನಗಳಲ್ಲಿ ಆಪ್ ನ್ನು ಅಭಿವೃದ್ಧಿಪಡಿಸಿದ್ದು ಆ.15 ರಂದು ಲೋಕಾರ್ಪಣೆಗೊಂಡ ಆಪ್ ನ್ನು ಈವರೆಗೂ 1.70 ಲಕ್ಷಕ್ಕೂ ಹೆಚ್ಚು ಬಳಕೆದಾರರು ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಆಪ್ ನ ಸುರಕ್ಷತೆಯ ಕಾರಣದಿಂದ ಇನ್ನೂ ಹೆಚ್ಚು ಮಂದಿ ಆಪ್ ನ್ನು ಮುಂದಿನ ದಿನಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಲಿದ್ದಾರೆ ಎಂದು ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಟಾರ್ಟ್ ಅಪ್ ಗಳಿಗಾಗಿ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿರುವ ಪ್ರಜ್ವಲ್ ಗೆ ಕಳೆದ ವರ್ಷ ಸ್ವತಃ ಪ್ರಧಾನಿ ಮೋದಿ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಸಿನ್ಹಾ ಜೊತೆಗೆ ಆತನ ಸ್ನೇಹಿತರಾದ ಕುನಾಲ್ ಪಸ್ರಿಚ, ರಂಜಿತಾ ಸಿಂಗ್, ಅನು, ಅಪರಾಜಿತ ಪ್ರಸಾದ್, ಶಶಾಂಕ್ ಶೇಖರ್, ಶ್ಯಾಂತನ್, ವಿವೇಕ್, ಸೌರಭ್, ಸಗ್ನಿಕ್ ಅವರು ಆಪ್ ಅಭಿವೃದ್ಧಿಪಡಿಸಲು ಶ್ರಮಿಸಿದ್ದು, ಪ್ರಧಾನಿ ಮೋದಿ ಅವರ ಸ್ವಾವಲಂಬನೆಯ ಕನಸೇ ಇವರಿಗೆ ಸ್ಪೂರ್ತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com