ಅಭಿವೃದ್ಧಿಶೀಲ ದೇಶಗಳಿಗೆ ಲಸಿಕೆ ಲಭ್ಯತೆ ಹೆಚ್ಚಿಸಲು ಬಯೋಕಾನ್ ಮತ್ತು ಸೆರಮ್ ಇನ್ಸ್ಟಿಟ್ಯೂಟ್ ಸಹಯೋಗ

ಎರಡು ಪ್ರಮುಖ ಬಯೋಟೆಕ್ ಕಂಪನಿಗಳಾದ ಬೆಂಗಳೂರು ಮೂಲದ ಬಯೋಕಾನ್ ಬಯಾಲಜಿಕ್ಸ್ ಲಿಮಿಟೆಡ್(ಬಿಬಿಎಲ್) ಮತ್ತು ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್...
ಅದಾರ್ ಪೂನಾವಾಲಾ
ಅದಾರ್ ಪೂನಾವಾಲಾ

ಬೆಂಗಳೂರು: ಎರಡು ಪ್ರಮುಖ ಬಯೋಟೆಕ್ ಕಂಪನಿಗಳಾದ ಬೆಂಗಳೂರು ಮೂಲದ ಬಯೋಕಾನ್ ಬಯಾಲಜಿಕ್ಸ್ ಲಿಮಿಟೆಡ್ (ಬಿಬಿಎಲ್) ಮತ್ತು ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ (ಎಸ್ಐಎಲ್ಎಸ್) ಕೋವಿಡ್ -19, ಡೆಂಗ್ಯೂ, ಎಚ್ಐವಿ ಮತ್ತು ಇತರೆ ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ಮತ್ತು ಆಂಟಿಬಾಡಿ ಥೆರಪಿಟಿಕ್ಸ್ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಕಾರ್ಯತಂತ್ರದ ಪಾಲುದಾರಿಕೆ ಮಾಡಿಕೊಂಡಿವೆ. 

ಈ ಒಪ್ಪಂದದ ಭಾಗವಾಗಿ, ಬಿಬಿಎಲ್ 15 ವರ್ಷಗಳವರೆಗೆ ವಾರ್ಷಿಕ 100 ಮಿಲಿಯನ್ ಡೋಸ್ ಲಸಿಕೆಗಳನ್ನು ಪಡೆಯಲು ಬದ್ಧವಾಗಿದ್ದು, ಇದಕ್ಕಾಗಿ ಎಸ್ಐಎಲ್ಎಸ್ ಗೆ 4.9 ಶತಕೋಟಿ ಮೌಲ್ಯದ ಶೇ. 15 ರಷ್ಟು ಪಾಲು ನೀಡಿದೆ.

ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಮತ್ತು ಎಸ್‌ಐಐ ಮುಖ್ಯ ಕಾರ್ಯನಿರ್ವಾಹಕ ಅದಾರ್ ಪೂನಾವಾಲಾ, ಈ ಪಾಲುದಾರಿಕೆಯು ಎರಡು ಪ್ರಮುಖ ಕಂಪನಿಗಳ ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಪೂರಕೆ, ಲಸಿಕೆಗಳು ಹಾಗೂ ಜೀವಶಾಸ್ತ್ರದ ಮೂಲಕ ಜಾಗತಿಕ ಆರೋಗ್ಯ ರಕ್ಷಣೆಯ ಮೇಲೆ ಮಹತ್ವದ ಪ್ರಭಾವ ಬೀರುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.

ಬಿಬಿಎಲ್ ಜಾಗತಿಕ ಮಾರುಕಟ್ಟೆಗಳಿಗೆ ಕೋವಿಡ್-19 ಲಸಿಕೆ ಸೇರಿದಂತೆ ಸೆರಮ್ ಸಂಸ್ಥೆಯ ಲಸಿಕೆ ಬಂಡವಾಳವನ್ನು ವಾಣಿಜ್ಯೀಕರಣಗೊಳಿಸುತ್ತದೆ. ಇದು ಬಿಬಿಎಲ್‌ಗೆ ಹೆಚ್ಚುವರಿ ಬೆಳವಣಿಗೆಯಾಗಿದೆ ಎಂದು ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com