ಉದ್ಯಮ, ಹೂಡಿಕೆದಾರರಿಗೆ ಏಕ ಗವಾಕ್ಷಿ ವ್ಯವಸ್ಥೆಗೆ ಕೇಂದ್ರ ಸಚಿವ ಪಿಯೂಷ್ ಗೊಯಲ್ ಚಾಲನೆ; ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ

ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೆ.22 ರಂದು ಉದ್ಯಮ ಹಾಗೂ ಹೂಡಿಕೆದಾರರಿಗೆ ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. 
ಪಿಯೂಷ್ ಗೋಯಲ್
ಪಿಯೂಷ್ ಗೋಯಲ್

ನವದೆಹಲಿ: ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆಯ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೆ.22 ರಂದು ಉದ್ಯಮ ಹಾಗೂ ಹೂಡಿಕೆದಾರರಿಗೆ ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. 

ಈ ಪೋರ್ಟಲ್ ಮೂಲಕ ಅನುಮೋದನೆಗಳು ಮತ್ತು ನೋಂದಣಿಗಳನ್ನು ಪಡೆಯುವುದಕ್ಕಾಗಿ ಸರ್ಕಾರಿ ಕಚೇರಿಗೆ ಅಲೆಯುವ ಪದ್ಧತಿಯಿಂದ ಮುಕ್ತಿ ದೊರೆಯಲಿದೆ ಎಂದು ಗೋಯಲ್ ತಿಳಿಸಿದ್ದಾರೆ.

ಈ ಪೋರ್ಟಲ್ ನಲ್ಲಿ ಇಂದಿನ ಮಟ್ಟಿಗೆ 18 ಕೇಂದ್ರ ಇಲಾಖೆಗಳು ಹಾಗೂ 9 ರಾಜ್ಯಗಳ ಅನುಮೋದನೆ ಪಡೆಯಬಹುದಾಗಿದೆ ಹಾಗೂ ಡಿಸೆಂಬರ್ ಅಂತ್ಯದ ವೇಳೆಗೆ ಇನ್ನೂ 14 ಕೇಂದ್ರ ಇಲಾಖೆಗಳು, 5 ರಾಜ್ಯಗಳ ಅನುಮೋದನೆಯನ್ನು ಪಡೆಯಬಹುದಾದ ವ್ಯವಸ್ಥೆ ಜಾರಿಯಾಗಲಿದೆ ಎಂದು ಗೋಯಲ್ ಮಾಹಿತಿ ನೀಡಿದ್ದಾರೆ.

"ಅಧಿಕಾರಿಗಳಿಂದ ಮುಕ್ತಿ ಪಡೆಯುವುದಕ್ಕೆ, ಕಚೇರಿಯಿಂದ ಕಚೇರಿಗೆ ಅಲೆಯುವುದಕ್ಕೆ ಈ ವ್ಯವಸ್ಥೆ ಸಹಕಾರಿಯಾಗಲಿದ್ದು, ಉದ್ಯಮ ಸರಳೀಕರಣದೆಡೆಗೆ ಬಹುದೊಡ್ಡ ಹೆಜ್ಜೆಯಾಗಿದೆ" ಎಂದು ಗೋಯಲ್ ಹೇಳಿದ್ದಾರೆ.

ಉದ್ಯಮವನ್ನು ಹಾನಿ ಮಾಡುವುದಕ್ಕಾಗಿ ಯಾರೂ ಬಯಸುವುದಿಲ್ಲ. ಇದು ಭಾರತವನ್ನು ನಿಜವಾಗಿಯೂ ಆತ್ಮನಿರ್ಭರ ಮಾಡುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಎಂದು ಗೋಯಲ್ ಏಕಗವಾಕ್ಷಿ ಪದ್ಧತಿಯನ್ನು ಬಣ್ಣಿಸಿದ್ದಾರೆ. ಈ ಪೋರ್ಟಲ್ ಮೂಲಕ ಪಾರದರ್ಶಕತೆ ಹಾಗೂ ಹೊಣೆಗಾರಿಕೆ, ಸ್ಪಂದನೆಯನ್ನು ಜಾರಿಗೆ ತರಬಹುದಾಗಿದೆ, ಒಂದೇ ಡ್ಯಾಶ್ ಬೋರ್ಡ್ ನಲ್ಲಿ ಎಲ್ಲಾ ಮಾಹಿತಿಯೂ ಲಭ್ಯವಾಗಲಿದೆ ಎಂದು ಗೋಯಲ್ ಹೇಳಿದ್ದಾರೆ.

ಅರ್ಜಿ ಸಲ್ಲಿಸುವುದಕ್ಕೆ, ಸ್ಥಿತಿಯನ್ನು ಪರಿಶೀಲಿಸುವುದಕ್ಕೆ ಹಾಗೂ ವಿಚಾರಣೆಗಾಗಿ ಸ್ಪಂದಿಸುವುದಕ್ಕೆ ಅಪ್ಲಿಕೆಂಟ್ ಡ್ಯಾಬೋರ್ಡ್ ಲಭ್ಯವಿರಲಿದ್ದು, ಕಾಗದ ಪತ್ರಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ಕಡಿಮೆಯಾಗಲಿದೆ ಎಂದು ಗೋಯಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com