ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಓಯೋದಲ್ಲಿಯೂ ನೌಕರರ ವಜಾ: 600 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ಭಾರತದ ಅತಿದೊಡ್ಡ ಟ್ರಾವೆಲ್ ಟೆಕ್ ಸಂಸ್ಥೆ ಓಯೋ ತನ್ನ 3700-ಉದ್ಯೋಗಿಗಳಲ್ಲಿ ಸುಮಾರು ಶೇ. 10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಶನಿವಾರ ಪ್ರಕಟಿಸಿದೆ.
Published on

ನವದೆಹಲಿ: ಭಾರತದ ಅತಿದೊಡ್ಡ ಟ್ರಾವೆಲ್ ಟೆಕ್ ಸಂಸ್ಥೆ ಓಯೋ ತನ್ನ 3700-ಉದ್ಯೋಗಿಗಳಲ್ಲಿ ಸುಮಾರು ಶೇ. 10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಶನಿವಾರ ಪ್ರಕಟಿಸಿದೆ.

ಈ ಕ್ರಮದಿಂದಾಗಿ ತಂತ್ರಜ್ಞಾನ ಮತ್ತು ಕಾರ್ಪೊರೇಟ್ ವರ್ಟಿಕಲ್‌ಗಳಲ್ಲಿ 600 ಉದ್ಯೋಗಿಗಳು ಪಿಂಕ್ ಸ್ಲಿಪ್ ಪಡೆಯಲಿದ್ದಾರೆ. ಕಂಪನಿಯು 600 ಉದ್ಯೋಗಿಗಳನ್ನು ವಜಾಗೊಳಿಸುವುದರೊಂದಿಗೆ ಹೊಸದಾಗಿ 250  ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದೆ.

ಇದು ಕಂಪನಿಯ ಸಾಂಸ್ಥಿಕ ರಚನೆಯಲ್ಲಿನ ವ್ಯಾಪಕ ಬದಲಾವಣೆಗಳ ಭಾಗವಾಗಿದೆ ಎಂದು ಓಯೋ ಹೇಳಿದೆ.

ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡವನ್ನು ಕಡಿಮೆಗೊಳಿಸಲಾಗುತ್ತಿದೆ. ಅಲ್ಲದೆ ಕಾರ್ಪೊರೇಟ್ ಪ್ರಧಾನ ಕಛೇರಿ ಮತ್ತು ಓಯೋ ವೆಕೇಶನ್ ಹೋಮ್‌ಗಳಲ್ಲಿನ ಉದ್ಯೋಗಿಗಳ ಸಂಖ್ಯೆಯನ್ನು ಸಹ ಕಡಿಮೆಗೊಳಿಸಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಸುಗಮ ಕಾರ್ಯನಿರ್ವಹಣೆಗಾಗಿ ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳನ್ನು ವಿಲೀನಗೊಳಿಸಲಾಗುತ್ತಿದೆ ಎಂದು ಸಹ ಓಯೋ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com