ಕೆಲಸ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವ ಮೂರ್ಖ ಸಿಕ್ಕ ತಕ್ಷಣ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜಿನಾಮೆ: ಎಲಾನ್ ಮಸ್ಕ್

ಆದರೆ ತಾವು ಕೆಳಗಿಳಿಯಲು ಒಂದು ಷರತ್ತನ್ನೂ ನೀಡಿದ್ದಾರೆ. ನನ್ನ ಜವಾಬ್ದಾರಿ ತೆಗೆದುಕೊಳ್ಳಲು ಯಾರಾದರೂ ಮೂರ್ಖ ಸಿಕ್ಕ ತಕ್ಷಣವೇ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಬಳಿಕ ಕಂಪನಿಯ ಸಾಫ್ಟ್‌ವೇರ್ ಹಾಗೂ ಸರ್ವರ್ ತಂಡಗಳನ್ನು ಮುನ್ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ಎಲಾನ್ ಮಸ್ಕ್
ಎಲಾನ್ ಮಸ್ಕ್

ವಾಷಿಂಗ್ಟನ್: ಟ್ವಿಟ್ಟರ್ ಸಿಇಒ  ಎಲಾನ್ ಮಸ್ಕ್ ಇತ್ತೀಚೆಗೆ ತಾವು ತಮ್ಮ ಹುದ್ದೆಯನ್ನು ತೊರೆಯಬೇಕೇ ಅಥವಾ ಹೀಗೇ ಮುಂದುವರಿಯಬೇಕೇ ಎಂಬ ಬಗ್ಗೆ ಸಮೀಕ್ಷೆಯೊಂದರ ಮೂಲಕ ಬಳಕೆದಾರರ ಅಭಿಪ್ರಾಯವನ್ನು ಪಡೆದುಕೊಂಡಿದ್ದರು. ಸಮೀಕ್ಷೆಯಲ್ಲಿ ಮಸ್ಕ್‌ಗೆ ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಲು ಹೆಚ್ಚಿನ ಬಳಕೆದಾರರು ಸೂಚಿಸಿದ್ದು, ಇದೀಗ ಮಸ್ಕ್ ತಾವು ಟ್ವಿಟ್ಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದಾರೆ.

ಎಲಾನ್ ಮಸ್ಕ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ ತಾವು ಕೆಳಗಿಳಿಯಲು ಒಂದು ಷರತ್ತನ್ನೂ ನೀಡಿದ್ದಾರೆ. ನನ್ನ ಜವಾಬ್ದಾರಿ ತೆಗೆದುಕೊಳ್ಳಲು ಯಾರಾದರೂ ಮೂರ್ಖ ಸಿಕ್ಕ ತಕ್ಷಣವೇ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಬಳಿಕ ಕಂಪನಿಯ ಸಾಫ್ಟ್‌ವೇರ್ ಹಾಗೂ ಸರ್ವರ್ ತಂಡಗಳನ್ನು ಮುನ್ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

ಮಸ್ಕ್‌ ಸಿಇಒ ಸ್ಥಾನದಿಂದ ಕೆಳಗಿಳಿಯುವುದು ಸೂಕ್ತವೆಂದು ಹೆಚ್ಚಿನ ಬಳಕೆದಾರರು ಸಮೀಕ್ಷೆಯಲ್ಲಿ ಮತ ಚಲಾಯಿಸಿರುವುದರಿಂದ ಅವರು ಈ ನಿರ್ಧಾರ ಮಾಡಿದ್ದಾರೆ. ಟ್ವಿಟರ್‌ನ ಮಾಲೀಕತ್ವ ಪಡೆದ ‌ಎರಡು ತಿಂಗಳಲ್ಲೇ ಕೋಟ್ಯಧಿಪತಿ ಮಸ್ಕ್‌ ಅವರಿಗೆ ಇದೊಂದು ಭಾರಿ ಹಿನ್ನಡೆ ಎನ್ನಲಾಗುತ್ತಿದೆ.

ಭಾನುವಾರ ಸಂಜೆ ಆರಂಭವಾದ ಈ ಸಮೀಕ್ಷೆಯಲ್ಲಿ 1.75 ಕೋಟಿ ಬಳಕೆದಾರರು ಪಾಲ್ಗೊಂಡು ಮತ ಚಲಾಯಿಸಿದ್ದಾರೆ. ಟ್ವಿಟರ್‌ ಸಿಇಒ ಸ್ಥಾನವನ್ನು ಮಸ್ಕ್‌ ತೊರೆಯಬೇಕೆಂಬುದರ ಪರವಾಗಿ ಶೇ 57.5ರಷ್ಟು ಬಳಕೆದಾರರು ಮತ ಚಲಾಯಿಸಿದರೆ, ಶೇ 42.5ರಷ್ಟು ಬಳಕೆದಾರರು ಸಿಇಒ ಸ್ಥಾನ ತೊರೆಯಬಾರದೆಂದು ಮತ ಚಲಾಯಿಸಿದ್ದರು. 17,502,391 ಬಳಕೆದಾರರು ಮತ ಚಲಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com