ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ, ಹೊಸ ವರ್ಷಕ್ಕೆ ಸುಧಾರಣೆ, ಹೊಸ ವ್ಯವಸ್ಥೆ ಜಾರಿ ಸಾಧ್ಯತೆ

ತೆರಿಗೆ ಸಂಗ್ರಹದಲ್ಲಿ ಶೇ.26 ರಷ್ಟು ಏರಿಕೆಯಾಗಿದ್ದು, ಸರ್ಕಾರ ತೆರಿಗೆಗೆ ಸಂಬಂಧಿಸಿದಂತೆ ಹಲವು ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದೆ. 
ತೆರಿಗೆ ಇಲಾಖೆ
ತೆರಿಗೆ ಇಲಾಖೆ
Updated on

ನವದೆಹಲಿ: ತೆರಿಗೆ ಸಂಗ್ರಹದಲ್ಲಿ ಶೇ.26 ರಷ್ಟು ಏರಿಕೆಯಾಗಿದ್ದು, ಸರ್ಕಾರ ತೆರಿಗೆಗೆ ಸಂಬಂಧಿಸಿದಂತೆ ಹಲವು ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದೆ. 

ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದರಲ್ಲಿನ ಸಮಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆಯನ್ನು ಹಾಗೂ ಫಾರ್ಮ್ ಗಳನ್ನು ಕಡಿತಗೊಳಿಸುವುದೂ ಸುಧಾರಣೆಗಳ ಪಟ್ಟಿಯಲ್ಲಿದೆ.

ತೆರಿಗೆ ಸೋರಿಕೆಯನ್ನು ತಡೆಗಟ್ಟುವಲ್ಲಿ ಸರ್ಕಾರ  2022 ರಲ್ಲಿ ನೇರ ಹಾಗೂ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿದ್ದು, ಪ್ಯಾಂಡಮಿಕ್ ನಂತರದ ದಿನಗಳಲ್ಲಿ ಆರ್ಥಿಕ ಪುನಶ್ಚೇತನದ ಸ್ಪಷ್ಟ ಲಕ್ಷಣ ಇದಾಗಿದೆ. 

ತೆರಿಗೆ ಕಟ್ಟದೇ ತಪ್ಪಿಸಿಕೊಳ್ಳುವವರಿಗೂ ಮೂಗುದಾರ ಹಾಕಲು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುವ ನಿರೀಕ್ಷೆ ಇದೆ. ಇದರ ಭಾಗವಾಗಿ ಇ-ಕಾಮರ್ಸ್ ಗೆ ಹಾಗೂ ಆನ್ ಲೈನ್ ಸೇವೆ ಪೂರೈಕೆದಾರರಿಗೆ, ಆನ್ ಲೈನ್ ಗೇಮಿಂಗ್ ಗೆ  ಸರ್ಕಾರ ಕಠಿಣ ತೆರಿಗೆ ಕಡಿತ ನೀತಿ ಜಾರಿಗೊಳಿಸಲು ಚಿಂತನೆ ನಡೆಸಿದೆ.

ಭಾರತ ಮುಂದಿನ ವರ್ಷ ಜಿ-20 ನಾಯಕರಿಗೆ ಆತಿಥ್ಯ ನೀಡಲಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳು ತೆರಿಗೆಯಲ್ಲಿ ಅವರ ನ್ಯಾಯಯುತ ಪಾಲನ್ನು ಪಡೆಯುವ ನಿಟ್ಟಿನಲ್ಲಿ ಡಿಜಿಟಲ್ ಎಕಾನಮಿಗೆ ತೆರಿಗೆ ಹಾಕುವುದು ಹಾಗೂ ಕ್ರಿಪ್ಟೋ ಕರೆನ್ಸಿಗೆ ತೆರಿಗೆ ಹಾಕುವ ಅಂಶವೂ ಆದ್ಯತೆಯ ಪಟ್ಟಿಯಲ್ಲಿದೆ.
 
ದೀರ್ಘಾವಧಿಯ ಬಂಡವಾಳ ಗಳಿಕೆಗೆ ಸಂಬಂಧಿಸಿದ ತೆರಿಗೆ ನೀತಿಯಲ್ಲೂ ಸರ್ಕಾರ ಸುಧಾರಣೆ ಮಾಡುವ ಸಾಧ್ಯತೆ ಇದ್ದು, ಪ್ರಸ್ತುತ ಒಂದು ವರ್ಷಕ್ಕಿಂತಲೂ ಹೆಚ್ಚು ಅವಧಿಗೆ ಇಟ್ಟುಕೊಳ್ಳುವ ಷೇರುಗಳಿಗೆ ದೀರ್ಘಾವಧಿ ಬಂಡವಾಳ ಗಳಿಕೆಯ ಮೇಲೆ ಶೇ.10 ರಷ್ಟು ತೆರಿಗೆ ಬೀಳುತ್ತಿದೆ.

ಮುಂದಿನ ವರ್ಷದಲ್ಲಿ ಸರ್ಕಾರ ವಿನಾಯಿತಿ ಮುಕ್ತ ತೆರಿಗೆ ವ್ಯವಸ್ಥೆಯನ್ನು ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ಹೆಚ್ಚು ಆಕರ್ಷದಾಯಕವಾಗಿಸಲು ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಯೂ ಇದೆ. ಇದಷ್ಟೇ ಅಲ್ಲದೇ ದೀರ್ಘಾವಧಿಯಲ್ಲಿ ಹಳೆಯ ತೆರಿಗೆ ವ್ಯವಸ್ಥೆಯನ್ನು ತೆಗೆದುಹಾಕಿ, ವಿನಾಯಿತಿಗಳು ಮತ್ತು ಕಡಿತಗಳಿಂದ ರಹಿತ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಸರ್ಕಾರ ಯೋಜನೆ ರೂಪಿಸಿದೆ.

ಈ ನಿಟ್ಟಿನಲ್ಲಿ ಅದಾಗಲೇ ಕೆಲಸಗಳು ಪ್ರಾರಂಭವಾಗಿದ್ದು 2020-21 ರಲ್ಲಿ ಕೇಂದ್ರ ಬಜೆಟ್ ನಲ್ಲಿ ತೆರಿಗೆದಾರರಿಗೆ ಹಳೆಯ ವ್ಯವಸ್ಥೆ ಹಾಗೂ ಹೊಸ ವ್ಯವಸ್ಥೆಗೆ ಪೂರಕವಾಗಿರುವ ಅಂಶಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಅಂದರೆ ಹಲವು ಕಡಿತಗಳು ಹಾಗೂ ವಿನಾಯ್ತಿಗಳೊಂದಿಗೆ ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ದುಕೊಳ್ಳುವುದು ಅಥವಾ ಯಾವುದೇ ಕಡಿತ, ವಿನಾಯ್ತಿಗಳಿಲ್ಲದೇ ಕಡಿಮೆ ತೆರಿಗೆ ದರವನ್ನು ಹೊಂದಿರುವ ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ದುಕೊಳ್ಳುವ ಆಯ್ಕೆಯನ್ನು ನೀಡಲಾಗಿತ್ತು.

ಇದಾಗಿ ಎರಡು ವರ್ಷಗಳೇ ಕಳೆದರೂ ಹೊಸ ತೆರಿಗೆ ವ್ಯವಸ್ಥೆ ಇನ್ನೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಹಾಗೂ ಹೊಸ ವರ್ಷಕ್ಕೆ ಐಟಿ ಇಲಾಖೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಮತ್ತಷ್ಟು ಬದಲಾವಣೆ ಹಾಗೂ ಸುಧಾರಣೆಗಳನ್ನು ಜಾರಿಗೆ ತರುವುದರ ಮೂಲಕ ಹೆಚ್ಚು ಜನರನ್ನು ಅತ್ತ ಆಕರ್ಷಿಸಲು ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com