ಎಲಾನ್ ಮಸ್ಕ್
ಎಲಾನ್ ಮಸ್ಕ್

ಟ್ವಿಟರ್ ಕೇಂದ್ರ ಕಚೇರಿಗೆ ಭೇಟಿ ನೀಡುವವರನ್ನು ಗಂಟೆಗಟ್ಟಲೆ ಕಾಯಿಸುವ ಮಸ್ಕ್, ಸಭೆಗಳಲ್ಲಿ ಯೂಟ್ಯೂಬ್ ವೀಡಿಯೋ ವೀಕ್ಷಣೆ! 

ಇತ್ತೀಚೆಗಷ್ಟೇ ಟ್ವಿಟರ್ ನ್ನು ಖರೀದಿಸಿದ ಬಳಿಕ ಉದ್ಯಮವನ್ನು ನಡೆಸುವ ರೀತಿಯ ವಿಷಯವಾಗಿ ಎಲಾನ್ ಮಸ್ಕ್ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. 

ನವದೆಹಲಿ: ಇತ್ತೀಚೆಗಷ್ಟೇ ಟ್ವಿಟರ್ ನ್ನು ಖರೀದಿಸಿದ ಬಳಿಕ ಉದ್ಯಮವನ್ನು ನಡೆಸುವ ರೀತಿಯ ವಿಷಯವಾಗಿ ಎಲಾನ್ ಮಸ್ಕ್ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. 

ಒಂದು ಉದ್ಯಮವನ್ನು ನಡೆಸುವ ವಿಷಯದಲ್ಲಿ ಮಸ್ಕ್ ತೀರಾ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂಬುದು ಚರ್ಚೆಯ ಪ್ರಮುಖ ವಿಷಯ ಇದರ ಜೊತೆಗೆ ಟ್ವಿಟರ್ ನ ಕೇಂದ್ರ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಲು ಬರುವವರನ್ನು ಮಸ್ಕ್ ಗಂಟೆಗಟ್ಟಲೆ ಕಾಯಿಸುತ್ತಿದ್ದಾರೆ ಹಾಗೂ ಸಭೆಗಳ ನಡುವೆ ಯೂಟ್ಯೂಬ್ ವೀಡಿಯೋಗಳನ್ನು ವೀಕ್ಷಿಸುತ್ತಾರೆ ಎಂಬ ವಿಲಕ್ಷಣವಾದ ಅಂಶ ಇಂಟರ್ ನೆಟ್ ನಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. 

ಟ್ವಿಟರ್ 2.0 ನ್ನು ಲಾಭದಾಯಕವಾಗಿಸಲು ವಿಲಕ್ಷಣ ಹಾದಿಯನ್ನು ತುಳಿಯುತ್ತಿರುವ ಮಸ್ಕ್, ಟ್ವಿಟರ್ ಕಚೇರಿಯ ಪ್ರದೇಶವನ್ನು ಬೆಡ್ ರೂಮ್ ಗಳಂತೆ ಮಾರ್ಪಾಡು ಮಾಡಿದ್ದಾರೆ.  ಟ್ವಿಟರ್ ನ್ನು ಲಾಭದ ಹಾದಿಯಲ್ಲಿ ನಡೆಸುವ ನಿಟ್ಟಿನಲ್ಲಿ ಉದ್ಯೋಗಿಗಳು ದಿನವಿಡೀ ಕೆಲಸ ಮಾಡುವಂತೆ ಮಾಡುವುದು ಈ ರೀತಿಯ ಬದಲಾವಣೆಯ ಹಿಂದಿನ ಉದ್ದೇಶವಾಗಿದೆ.
 
ಈಗ ಪ್ರಕಟವಾಗಿರುವ ಹೊಸ ವರದಿಗಳ ಪ್ರಕಾರ, ಮಸ್ಕ್ ಜೊತೆ ಟ್ವಿಟರ್ ಕೇಂದ್ರ ಕಚೇರಿಯಲ್ಲಿ ಮಾತನಾಡಲು ಬರುವವರನ್ನು ಗಂಟೆಗಟ್ಟಲೆ ಕಾಯಿಸುತ್ತಿದ್ದಾರೆ ಹಾಗೂ ಮಸ್ಕ್ ಮಾತನಾಡುವವರೆಗೂ ಅವರ್ಯಾರೂ ಮಾತನಾಡುವಂತಿಲ್ಲವಂತೆ. ಅಷ್ಟೇ ಅಲ್ಲದೇ ಮಸ್ಕ್ ಸಭೆಗಳಲ್ಲಿ ಯೂಟ್ಯೂಬ್ ವೀಕ್ಷಿಸುತ್ತಿರುತ್ತಾರೆ ಎಂಬುದು ಮತ್ತೊಂದು ವಿಲಕ್ಷಣ ಸಂಗತಿ.

ಸಣ್ಣಪುಟ್ಟ ವಿಷಯಕ್ಕೂ ಮಸ್ಕ್ ಟ್ವಿಟರ್ ನೌಕರರನ್ನು ಹೊರದಬ್ಬುತ್ತಿದ್ದಾರೆ. ತಮ್ಮನ್ನು ಯಾರೇ ಪ್ರಶ್ನಿಸಿದರೂ ಮಸ್ಕ್ ಅಂತಹವರಿಗೆ ಗೇಟ್ ಪಾಸ್ ನೀಡುವುದು ಖಾತ್ರಿ. ಇದಷ್ಟೇ ಅಲ್ಲ ತಮ್ಮ ನಿರ್ಧಾರವನ್ನು ಯಾರೇ ಪ್ರಶ್ನಿಸಿ ಅಥವಾ ವಿರೋಧಿಸಿ ಚಾಟ್ ಮಾಡಿದರೂ ಸಹ ಅವರಿಗೂ ಇದೇ ಗತಿ ಕಾದಿರಲಿದೆ. 

ಟ್ವಿಟರ್ ನ್ನು ಮಸ್ಕ್ ಖರೀದಿಸಿದ ನಂತರ ಅಲ್ಲಿನ ನೌಕರರಿಗೆ ಸಿಗುತ್ತಿದ್ದ ಉಚಿತ ಊಟದ ವ್ಯವಸ್ಥೆಯನ್ನು ಕಡಿತಗೊಳಿಸಿದ್ದಾರೆ. ಅಡುಗೆಗೆ ಬಳಕೆಯಾಗುತ್ತಿದ್ದ ವಸ್ತುಗಳು, ಚೇರ್, ಟೇಬಲ್ ಮುಂತಾದ ವಸ್ತುಗಳನ್ನು ಟ್ವಿಟರ್ ಕೇಂದ್ರ ಕಚೇರಿಯಿಂದ ಹರಾಜು ಹಾಕುತ್ತಿದ್ದಾರೆ. ಪ್ಯಾಂಡಮಿಕ್ ಅವಧಿಯಲ್ಲಿ ಮನೆಯಿಂದ ಕೆಲಸ ಮಾಡಲು ನೀಡಿದ್ದ ಅವಕಾಶವನ್ನು ಮಸ್ಕ್ ವಾಪಸ್ ಪಡೆದಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com