'ಫ್ಯೂಚರ್ ರೀಟೇಲ್' ಭವಿಷ್ಯ ಯಾರ ಕೈಲಿ? ಅಂಬಾನಿಯೋ... ಅದಾನಿಯೋ?

ಸಾಲದ ಸುಳಿಯಲ್ಲಿ ಸಿಲುಕಿರುವ ಫ್ಯೂಚರ್ ರೀಟೇಲ್ ನ್ನು ಖರೀದಿಸಲು ಪೈಪೋಟಿ ಪ್ರಾರಂಭವಾಗಿದೆ. 
ಅದಾನಿ-ಅಂಬಾನಿ (ಸಂಗ್ರಹ ಚಿತ್ರ
ಅದಾನಿ-ಅಂಬಾನಿ (ಸಂಗ್ರಹ ಚಿತ್ರ

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಫ್ಯೂಚರ್ ರೀಟೇಲ್ ನ್ನು ಖರೀದಿಸಲು ಪೈಪೋಟಿ ಪ್ರಾರಂಭವಾಗಿದೆ. 

ಏಷ್ಯಾದ ಇಬ್ಬರು ಶ್ರೀಮಂತ ಬಿಲಿಯನೇರ್ ಗಳಾದ-ಗೌತಮ್ ಅದಾನಿ, ಮುಖೇಶ್ ಅಂಬಾನಿ ನಡುವೆ ಫ್ಯೂಚರ್ ರೀಟೇಲ್ ನ್ನು ಖರೀದಿಸುವುದಕ್ಕಾಗಿ ಪೈಪೋಟಿ ಏರ್ಪಟ್ಟಿದ್ದು ಸಂಸ್ಥೆಯೊಂದನ್ನು ಖರೀದಿಸುವುದಕ್ಕಾಗಿ ಇಬ್ಬರು ಬಿಲಿಯನೇರ್ ಗಳ ನಡುವೆ ಪೈಪೋಟಿ ಏರ್ಪಟ್ಟಿರುವುದು ಬಹುಶಃ ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ. 

ರಿಲಾಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿಎಲ್) ಹಾಗೂ ಅದಾನಿ ಸಮೂಹದ ಏಪ್ರಿಲ್ ಮೂಲ್ ರೀಟೆಲ್ ಪ್ರೈವೆಟ್ ಲಿಮಿಟೆಡ್ ಹಾಗೂ ಫ್ಲೆಮಿಂಗೋ ಸಮೂಹ ಸೇರಿದಂತೆ 13 ಸಂಸ್ಥೆಗಳು ಫ್ಯೂಚರ್ ರೀಟೇಲ್ ಖರೀದಿಗೆ (ಇಒಐಎಸ್)ಗಳನ್ನು ಸಲ್ಲಿಸಿವೆ. 

ಈ ಸಂಸ್ಥೆಯನ್ನು ಖರೀದಿಸಲು ಇನ್ನೂ ಎಷ್ಟು ಸಂಸ್ಥೆಗಳು ಉತ್ಸುಕವಾಗಿವೆ ಎಂಬುದು ನಂ.20 ರಂದು ಅಂತಿಮ ಪಟ್ಟಿಯಲ್ಲಿ ತಿಳಿಯಲಿದೆ. ಈ ಬಳಿಕ ಡಿ.15 ರ ವೇಳೆಗೆ ರೆಸೆಲ್ಯೂಷನ್ ಯೋಜನೆಯನ್ನು ಸಲ್ಲಿಸಬೇಕಾಗುತ್ತದೆ. 2023 ರ ವೇಳೆಗೆ ಭಾರತದ ರೀಟೇಲರ್ಸ್ ಗಳ ಪೈಕಿ ಅತಿ ದೊಡ್ಡ ಸಂಸ್ಥೆಯೊಂದಕ್ಕೆ ಹೊಸ ಮಾಲಿಕರು ಲಭ್ಯವಾಗುವ ಸಾಧ್ಯತೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com