ಸಂಗ್ರಹ ಚಿತ್ರ
ವಾಣಿಜ್ಯ
Nykaa ಷೇರುಗಳಲ್ಲಿ ನಿರಂತರ ಕುಸಿತ: ಕಂಪನಿಯ CFO ಅರವಿಂದ್ ಅಗರವಾಲ್ ರಾಜೀನಾಮೆ!
ಆನ್‌ಲೈನ್ ಸೌಂದರ್ಯ ಉತ್ಪನ್ನಗಳ ಚಿಲ್ಲರೆ ಕಂಪನಿ Nykaaದ ಷೇರುಗಳಲ್ಲಿ ನಿರಂತರ ಕುಸಿತ ಕಾಣುತ್ತಿರುವುದರಿಂದ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಅರವಿಂದ್ ಅಗರವಾಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಆನ್‌ಲೈನ್ ಸೌಂದರ್ಯ ಉತ್ಪನ್ನಗಳ ಚಿಲ್ಲರೆ ಕಂಪನಿ Nykaaದ ಷೇರುಗಳಲ್ಲಿ ನಿರಂತರ ಕುಸಿತ ಕಾಣುತ್ತಿರುವುದರಿಂದ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಅರವಿಂದ್ ಅಗರವಾಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
2022ರ ನವೆಂಬರ್ 25 ಅರವಿಂದ್ ಅಗರ್ವಾಲ್ ಅವರ ಕಂಪನಿಯಲ್ಲಿ ಕೊನೆಯ ದಿನವಾಗಿರುತ್ತದೆ ಎಂದು Nykaa ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.
ಡಿಜಿಟಲ್ ಆರ್ಥಿಕತೆ ಮತ್ತು ಸ್ಟಾರ್ಟ್‌ಅಪ್‌ಗಳ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲಿದ್ದು ಹೊಸ ಸಿಎಫ್‌ಒ ನೇಮಕ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿ ತಿಳಿಸಿದೆ.
Nykaa ಲಿಸ್ಟೆಡ್ ಕಂಪನಿಯಾಗಿ ಗುರುತಿಸಿಕೊಳ್ಳುವಲ್ಲಿ ಮತ್ತು ಲಾಭದಾಯಕ ಸ್ಟಾರ್ಟಪ್ ಆಗಿ ಹೊರಹೊಮ್ಮಲು ಅರವಿಂದ್ ಅಗರ್ವಾಲ್ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ ಬೀಳ್ಕೊಡುವುದಕ್ಕೆ ವಿಷಾದವಿದೆ. ಆದರೆ ಅವರ ಭವಿಷ್ಯಕ್ಕೆ ಶುಭ ಹಾರೈಸುತ್ತೇವೆ ಎಂದು ಕಂಪನಿಯ ಸ್ಥಾಪಕಿ ಮತ್ತು ಅಧ್ಯಕ್ಷೆ ಫಲ್ಗುಣಿ ನಾಯರ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ