ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ, ನೂತನ ದರ ಇಂದಿನಿಂದ ಅನ್ವಯ

ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆ 25 ರೂಪಾಯಿ 5 ಪೈಸೆ ಇಳಿಕೆಯಾಗಿದ್ದು ನೂತನ ಪರಿಷ್ಕೃತ ದರ ಅಕ್ಟೋಬರ್ 1 ಇಂದಿನಿಂದ ಅನ್ವಯವಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆ 25 ರೂಪಾಯಿ 5 ಪೈಸೆ ಇಳಿಕೆಯಾಗಿದ್ದು ನೂತನ ಪರಿಷ್ಕೃತ ದರ ಅಕ್ಟೋಬರ್ 1 ಇಂದಿನಿಂದ ಅನ್ವಯವಾಗಲಿದೆ.

ಭಾರತೀಯ ತೈಲ ಪ್ರಾಧಿಕಾರದ ಅಧಿಸೂಚನೆ ಪ್ರಕಾರ, ಪರಿಷ್ಕೃತ ದರ ಇಂದು ಜಾರಿಗೆ ಬರಲಿದೆ. ದರ ಇಳಿಕೆಯಿಂದಾಗಿ ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಸಾವಿರದ 859 ರೂಪಾಯಿಯಾಗಲಿದೆ. ಈ ಹಿಂದೆ ಅಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,885 ರೂಪಾಯಿಗಳಾಗಿದ್ದವು.

ರಾಜಧಾನಿ ಬೆಂಗಳೂರಿನಲ್ಲಿ ಇಂದು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,685 ರೂಪಾಯಿ 5 ಪೈಸೆಯಾಗಿದೆ. ಕಳೆದ ತಿಂಗಳು ಸೆಪ್ಟೆಂಬರ್ 1ರಂದು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಇಳಿಸಲಾಗಿತ್ತು. ಅದಕ್ಕೂ ಮೊದಲು ಜುಲೈ 6ರಂದು ದರ ಪರಿಷ್ಕರಣೆಗೊಂಡಿತ್ತು. 

ಗೃಹ ಬಳಕೆ ಎಲ್ ಪಿಜಿ ದರ ಯಥಾಸ್ಥಿತಿ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com