ಮಾಸ್ಕೋದಿಂದ ಗೋವಾಗೆ ಏರೋಫ್ಲೋಟ್ ಸೇವೆಗಳು ನವೆಂಬರ್ 2 ರಿಂದ ಪ್ರಾರಂಭ

ರಷ್ಯಾದ ಏರೋಫ್ಲೋಟ್ ನ.02 ರಿಂದ ಮಾಸ್ಕೋದಿಂದ ಗೋವಾಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಏರೋಫ್ಲೋಟ್
ಏರೋಫ್ಲೋಟ್
Updated on

ಗೋವಾ: ರಷ್ಯಾದ ಏರೋಫ್ಲೋಟ್ ನ.02 ರಿಂದ ಮಾಸ್ಕೋದಿಂದ ಗೋವಾಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಮಾಸ್ಕೋ-ದೆಹಲಿ, ದೆಹಲಿ-ಮಾಸ್ಕೋ ನಡುವೆ ಈಗ ಏರೋಫ್ಲೋಟ್ ಸೇವೆ ಒದಗಿಸುತ್ತಿದ್ದು, ವಾರದಲ್ಲಿ ಎರಡು ದಿನ ಕಾರ್ಯನಿರ್ವಹಣೆ ಮಾಡಲಿವೆ.
 
ಏರೋಫ್ಲೋಟ್ ತನ್ನ ಏರ್ ಬಸ್ ಎ330 ವಿಮಾನವನ್ನು ಪ್ರತಿ ಬುಧವಾರ, ಶನಿವಾರ ಹಾಗೂ ಭಾನುವಾರ ಮಾಸ್ಕೋದಿಂದ ಗೋವಾಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದ್ದು, 28 ಆಸನಗಳನ್ನು business class ನಲ್ಲಿ ಕಲ್ಪಿಸಿದರೆ, ಎಕಾನಮಿ ಕ್ಲಾಸ್ ನಲ್ಲಿ 268 ಆಸನಗಳ ವ್ಯವಸ್ಥೆ ಇರಲಿದೆ.
 
ಹೊಸ ಸೇವೆಗಳಿಂದ, ಭಾರತದಿಂದ ರಷ್ಯಾಗೆ ಹಾಗೂ ಸಿಐಎಸ್ ದೇಶಗಳಿಗೆ 30 ಟನ್ ಗಳ ಸರಕು ಸಾಗಣೆಗೂ ಅವಕಾಶ ಸಿಗಲಿದೆ. ರಷ್ಯನ್ನರಿಗೆ ಗೋವಾ ನೆಚ್ಚಿನ ಪ್ರವಾಸಿ ತಾಣವಾಗಿದೆ.

ಗೋವಾಗೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಹೆಚ್ಚಿನವರು ರಷ್ಯಾದವರಾಗಿದ್ದು, ಪ್ರವಾಸೋದ್ಯಮ ಋತು ಹತ್ತಿರದಲ್ಲಿರುವುದರಿಂದ ಭಾರತ ಹೆಚ್ಚಿನ ರಷ್ಯನ್ ಪ್ರವಾಸಿಗರನ್ನು ಎದುರುನೋಡುತ್ತಿದೆ. 

ಮಾಸ್ಕೋ-ಗೋವಾ ನಡುವಿನ ವಿಮಾನ ಸೇವೆಗಳಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಡೆಲ್ಮೋಸ್ ಏವಿಯೇಷನ್ ನ ನಿರ್ದೇಶಕ ನವೀನ್ ರಾವ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com