ಟಾಟಾ ಟೆಕ್ನಾಲಜಿಯಲ್ಲಿ ಬಂಡವಾಳ ಹಿಂತೆಗೆತಕ್ಕೆ ಐಪಿಒ ದಾರಿ ಆಯ್ಕೆ ಮಾಡಿಕೊಳ್ಳಲಿರುವ ಟಾಟಾ ಮೋಟಾರ್ಸ್

ದೇಶೀಯ ಆಟೋಮೊಬೈಲ್ ದೈತ್ಯ ಟಾಟಾ ಮೋಟಾರ್ಸ್ ಮಂಡಳಿ ಟಾಟಾ ಟೆಕ್ನಾಲಜೀಸ್ ನಿಂದ ಬಂಡವಾಳ ಹಿಂತೆಗೆತಕ್ಕೆ ಐಪಿಒ ದಾರಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದೆ.
ಟಾಟಾ ಸ್ಟೀಲ್
ಟಾಟಾ ಸ್ಟೀಲ್

ನವದೆಹಲಿ: ದೇಶೀಯ ಆಟೋಮೊಬೈಲ್ ದೈತ್ಯ ಟಾಟಾ ಮೋಟಾರ್ಸ್ ಮಂಡಳಿ ಟಾಟಾ ಟೆಕ್ನಾಲಜೀಸ್ ನಿಂದ ಬಂಡವಾಳ ಹಿಂತೆಗೆತಕ್ಕೆ ಐಪಿಒ ದಾರಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದೆ.

ಟಾಟಾ ಮೋಟಾರ್ಸ್ ಮಂಡಳಿಯಲ್ಲಿ ಈ ತಿರ್ಮಾನ ಕೈಗೊಳ್ಳಲಾಗಿದೆ. ಟಾಟಾ ಟೆಕ್ನಾಲಜೀಸ್ ಜಾಗತಿಕ ಉತ್ಪನ್ನ ಇಂಜಿನಿಯರಿಂಗ್ ಹಾಗೂ ಡಿಜಿಟಲ್ ಸೇವೆಗಳ ಸಂಸ್ಥೆಯಾಗಿದೆ.

"ಡಿ.12 ರಂದು ನಡೆದ ಐಪಿಒ ಸಮಿತಿ ಟಾಟಾ ಟೆಕ್ನಾಲಜೀಸ್ ನಲ್ಲಿನ ಬಂಡವಾಳವನ್ನು ಐಪಿಒ ಮೂಲಕ ಭಾಗಶಃ ಹಿಂಪಡೆಯಲು ತಾತ್ವಿಕ ಒಪ್ಪಿಗೆ ನೀಡಿದೆ. ಸೂಕ್ತ ಸಮಯದಲ್ಲಿ ಮಾರುಕಟ್ಟೆಯ ಸ್ಥಿತಿಗಳನ್ನು ನೋಡಿಕೊಂಡು ಜಾರಿಗೆ ತರಲಾಗುವುದು ಎಂದು ಟಾಟಾ ಮೋಟರ್ಸ್ ಸ್ಟಾಕ್ ಎಕ್ಸ್ ಚೇಂಜ್ ಫೈಲಿಂಗ್ ನಲ್ಲಿ ಹೇಳಿದೆ.

ಐಪಿಒಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಾಗುವುದು, ಎಲ್ಲವೂ ಅಂದುಕೊಂಡಂತೆ ನಡೆದರೆ, 18 ವರ್ಷಗಳಲ್ಲಿ ಟಾಟಾ ಸಮೂಹದ ಮೊದಲ ಐಪಿಒ ಇದಾಗಲಿದೆ ಎಂದು ಸಂಸ್ಥೆ ಹೇಳಿದೆ. ಈಗಿನ ಅಧ್ಯಕ್ಷ ಎನ್ ಚಂದ್ರಶೇಖರನ್ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಐಪಿಒ ಜಾರಿಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com