ನಕಲಿ ಸರಕುಪಟ್ಟಿ ತಯಾರಿಸಿ 62,000 ಕೋಟಿ ಜಿಎಸ್ ಟಿ ವಂಚನೆ ಪತ್ತೆ!

ನಕಲಿ ಇನ್ವಾಯ್ಸ್ (ಸರಕುಪಟ್ಟಿ) ತಯಾರಿಸಿ ಒಟ್ಟು 62,000 ಕೋಟಿ ಜಿಎಸ್ ಟಿ ವಂಚನೆಯಾಗಿರುವುದನ್ನು ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. 
ಜಿಎಸ್ ಟಿ ಸಾಂದರ್ಭಿಕ ಚಿತ್ರ
ಜಿಎಸ್ ಟಿ ಸಾಂದರ್ಭಿಕ ಚಿತ್ರ

ನವದೆಹಲಿ: ನಕಲಿ ಇನ್ವಾಯ್ಸ್ (ಸರಕುಪಟ್ಟಿ) ತಯಾರಿಸಿ ಒಟ್ಟು 62,000 ಕೋಟಿ ಜಿಎಸ್ ಟಿ ವಂಚನೆಯಾಗಿರುವುದನ್ನು ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. 

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ಪ್ರಮಾಣದಲ್ಲಿ ಸರಕು ಮತ್ತು ಸೇವೆ ತೆರಿಗೆ ಕಳ್ಳತನ ನಡೆದಿದೆ ಎಂದು ಪರೋಕ್ಷ ತೆರಿಗೆಗಳು ಹಾಗೂ ಸೀಮಾಸುಂಕದ ಕೇಂದ್ರ ಮಂಡಳಿ (ಸಿಬಿಐಸಿ) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
 
ಸರ್ಕಾರ ಇತ್ತೀಚೆಗೆ ನಡೆದ ಜಿಎಸ್ ಟಿ ಪರಿಷತ್ ಸಭೆಯಲ್ಲಿ 2 ಕೋಟಿ (20 ಮಿಲಿಯನ್) ವಿತ್ತೀಯ ಮಿತಿಯನ್ನು ಹೆಚ್ಚಿಸಿದ್ದರಿಂದ ಇಂತಹ ಅಪರಾಧಗಳನ್ನು ಹೊರಗಿಟ್ಟಿದ್ದಕ್ಕೆ ಇದೇ ಪ್ರಾಥಮಿಕ ಕಾರಣವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

2020 ರಿಂದ ಜಿಎಸ್ ಟಿ ಅಧಿಕಾರಿಗಳು ಕೇಂದ್ರ ಮಟ್ಟದಲ್ಲಿ ಅಕ್ರಮವಾಗಿ ಇನ್ಪುಟ್ ತೆರಿಗೆ ಲಾಭ ಪಡೆಯಲು ನಕಲಿ ಇನ್ವಾಯ್ಸ್ ತಯಾರಿಸುತ್ತಿದ್ದ 1,030 ವ್ಯಕ್ತಿಗಳನ್ನು ಬಂಧಿಸಿದ್ದಾರೆ. 

ರಾಜ್ಯ ಮಟ್ಟದ ವಿಷಯಗಳು ಪ್ರತ್ಯೇಕವಾಗಿರುವುದರಿಂದ ಇಂತಹ ಪ್ರಕರಣಗಳು ಹಾಗೂ ತೆರಿಗೆ ವಂಚನೆಯ ಮೊತ್ತ ಇನ್ನೂ ಹೆಚ್ಚಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೋಗಸ್ ಸರಕುಗಳ ಚಲನೆ, ಇ-ವೇ ಬಿಲ್ ಗಳನ್ನು ತೋರಿಸುವ ಮೂಲಕ ನಕಲಿ ಇನ್ವಾಯ್ಸ್ ಗಳನ್ನು ಸೃಷ್ಟಿಸುವ ವರ್ತಕರಿದ್ದಾರೆ. ಸಂಸ್ಥೆಗಳು ವಿವಿಧ ರಾಜ್ಯಗಳಲ್ಲಿ ನೋಂದಣಿಯಾಗಿರುತ್ತವೆ ಹಾಗೂ ನಂಬರ್ ಗಳನ್ನು ಬದಲಾವಣೆ ಮಾಡುತ್ತಲೇ ಇದ್ದಿದ್ದರಿಂದ ಅವುಗಳ ಮೇಲೆ ನಿಗಾ ಇಡುವುದು ಕಷ್ಟವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಜಿಎಸ್ ಟಿ ಅಡಿಯಲ್ಲಿನ ವಿವಿಧ ರೀತಿಯ ಅಪರಾಧಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದಕ್ಕೆ ಜಿಎಸ್ ಟಿ ಕೌನ್ಸಿಲ್, ಈ ಹಿಂದೆ ವಿಧಿಸಲಾಗಿದ್ದ ಮಿತಿಯನ್ನು 2 ಕೋಟಿಗೆ ದ್ವಿಗುಣಗೊಳಿಸಿತ್ತು. ಈಗ ತೆರಿಗೆ ವಂಚನೆಯ ಮೊತ್ತ 2 ಕೋಟಿ ಯನ್ನು ದಾಟಿದರೆ 3 ವರ್ಷಗಳ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com