ಪೆಟ್ರೋಲ್, ಡೀಸೆಲ್ ಮೇಲೆ ರಫ್ತು ತೆರಿಗೆ ವಿಧಿಸಿದ ಕೇಂದ್ರ ಸರ್ಕಾರ; ಸ್ಥಳೀಯ ಕಚ್ಚಾ ತೈಲದ ಮೇಲೆ ಅನಿರೀಕ್ಷಿತ ತೆರಿಗೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಂತಹ ಸಂಸ್ಥೆಗಳು ವಿದೇಶಕ್ಕೆ ಸಾಗಿಸುವ ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನ (ಎಟಿಎಫ್) ಮೇಲೆ ಕೇಂದ್ರ ಸರ್ಕಾರ ರಫ್ತು ತೆರಿಗೆ ವಿಧಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಂತಹ ಸಂಸ್ಥೆಗಳು ವಿದೇಶಕ್ಕೆ ಸಾಗಿಸುವ ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನ (ಎಟಿಎಫ್) ಮೇಲೆ ಕೇಂದ್ರ ಸರ್ಕಾರ ರಫ್ತು ತೆರಿಗೆ ವಿಧಿಸಿದೆ. ಒಎನ್‌ಜಿಸಿ ಮತ್ತು ವೇದಾಂತ ಲಿಮಿಟೆಡ್‌ನಂತಹ ಕಂಪನಿಗಳಿಗೆ ಸ್ಥಳೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲೆ ಅನಿರೀಕ್ಷಿತ ತೆರಿಗೆಯನ್ನು (Windfall tax) ವಿಧಿಸಿದೆ.

ಸರ್ಕಾರವು ಪೆಟ್ರೋಲ್ ಮತ್ತು ಎಟಿಎಫ್ ರಫ್ತಿನ ಮೇಲೆ ಲೀಟರ್‌ಗೆ 6 ರೂಪಾಯಿ ತೆರಿಗೆ ಮತ್ತು ಡೀಸೆಲ್ ರಫ್ತಿನ ಮೇಲೆ 13 ರೂಪಾಯಿ ತೆರಿಗೆಯನ್ನು ವಿಧಿಸಿದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆಗಳು ತೋರಿಸಿವೆ.

ಹೆಚ್ಚುವರಿಯಾಗಿ, ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲೆ ಪ್ರತಿ ಟನ್‌ಗೆ 23,250 ರೂಪಾಯಿ ಹೆಚ್ಚುವರಿ ತೆರಿಗೆಯನ್ನು ವಿಧಿಸಿದೆ. 

ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ (OIL) ಮತ್ತು ವೇದಾಂತ ಲಿಮಿಟೆಡ್‌ನ ಖಾಸಗಿ ವಲಯದ ಕೇರ್ನ್ ಆಯಿಲ್ ಮತ್ತು ಗ್ಯಾಸ್‌ನ ದಾಖಲೆಯ ಆದಾಯವನ್ನು ಕಚ್ಚಾ ತೈಲದ ಮೇಲಿನ ತೆರಿಗೆಯು ವಾರ್ಷಿಕ 29 ಮಿಲಿಯನ್ ಟನ್ ಕಚ್ಚಾ ತೈಲದ ಮೇಲೆ 67,425 ಕೋಟಿ ರೂಪಾಯಿಗಳಷ್ಟು ಆದಾಯವನ್ನು ತರಲಿದೆ.

ರಫ್ತು ತೆರಿಗೆಯು ತೈಲ ಸಂಸ್ಕರಣಾಗಾರಗಳನ್ನು ವಿಶೇಷವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರೋಸ್ನೆಫ್ಟ್-ಬೆಂಬಲಿತ ನಯಾರಾ ಎನರ್ಜಿಯಂತಹ ಕಂಪೆನಿಗಳನ್ನು ಅನುಸರಿಸುತ್ತವೆ. ಉಕ್ರೇನ್‌ ರಷ್ಯಾದ ಆಕ್ರಮಣದ ನಂತರ ಯುರೋಪ್ ಮತ್ತು ಯುಎಸ್‌ನಂತಹ ಇಂಧನ ಕೊರತೆಯ ಪ್ರದೇಶಗಳಿಗೆ ಇಂಧನವನ್ನು ರಫ್ತು ಮಾಡುತ್ತಿವೆ.

ರಿಫೈನರ್‌ಗಳು ರಷ್ಯಾದ ಕಚ್ಚಾ ತೈಲವನ್ನು ಪಶ್ಚಿಮದಿಂದ ದೂರವಿಟ್ಟ ನಂತರ ರಿಯಾಯಿತಿಯಲ್ಲಿ ಸಂಸ್ಕರಿಸಿ, ಅದರಿಂದ ಉತ್ಪಾದಿಸಿದ ಇಂಧನವನ್ನು ಯುರೋಪ್ ಮತ್ತು ಯುಎಸ್‌ಗೆ ರಫ್ತು ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ರಫ್ತಿನ ಮೇಲಿನ ನಿರ್ಬಂಧವು ಪೆಟ್ರೋಲ್ ಪಂಪ್‌ಗಳಲ್ಲಿ ದೇಶೀಯ ಸರಬರಾಜುಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಖಾಸಗಿ ಸಂಸ್ಕರಣಾಗಾರರು ಸ್ಥಳೀಯವಾಗಿ ಮಾರಾಟ ಮಾಡುವುದಕ್ಕಿಂತ ಇಂಧನವನ್ನು ರಫ್ತು ಮಾಡಲು ಆದ್ಯತೆ ನೀಡುವುದರಿಂದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್‌ನಂತಹ ರಾಜ್ಯಗಳಲ್ಲಿ ಕೊರತೆ ಉಂಟಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com