8 ವಾರಗಳ ಕಾಲ ಶೇ. 50 ರಷ್ಟು ವಿಮಾನ ಕಾರ್ಯ ನಿರ್ವಹಿಸುವಂತೆ ಸ್ಪೈಸ್‍ಜೆಟ್‍ಗೆ ಡಿಜಿಸಿಎ ಆದೇಶ

ತಾಂತ್ರಿಕ ದೋಷ ಕಾರಣದಿಂದಾಗಿ ಪದೇ ಪದೇ ತುರ್ತು ಭೂಸ್ಪರ್ಶ ಮಾಡುತ್ತಿದ್ದ ಸ್ಪೈಸ್‍ಜೆಟ್ ಏರ್‌ಲೈನ್ಸ್‌ಗೆ 8 ವಾರಗಳವರೆಗೆ ಶೇ. 50ರಷ್ಟು ವಿಮಾನಗಳನ್ನು ಮಾತ್ರ ಕಾರ್ಯನಿರ್ವಹಿಸುವಂತೆ ನಾಗರಿಕ ವಿಮಾನಯಾನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತಾಂತ್ರಿಕ ದೋಷ ಕಾರಣದಿಂದಾಗಿ ಪದೇ ಪದೇ ತುರ್ತು ಭೂಸ್ಪರ್ಶ ಮಾಡುತ್ತಿದ್ದ ಸ್ಪೈಸ್‍ಜೆಟ್ ಏರ್‌ಲೈನ್ಸ್‌ಗೆ 8 ವಾರಗಳವರೆಗೆ ಶೇ. 50ರಷ್ಟು ವಿಮಾನಗಳನ್ನು ಮಾತ್ರ ಕಾರ್ಯನಿರ್ವಹಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ಆದೇಶಿಸಿದೆ.

ಜೂನ್ 19 ರಿಂದ ಕನಿಷ್ಠ ಎಂಟು ಬಾರಿ ತಾಂತ್ರಿಕ ದೋಷ ಘಟನೆಗಳು ವರದಿಯಾದ ನಂತರ ಜುಲೈ 6 ರಂದು ಡಿಜಿಸಿಎ ಸ್ಪೈಸ್‌ಜೆಟ್‌ಗೆ ಶೋಕಾಸ್ ನೋಟಿಸ್ ನೀಡಿತ್ತು.

ವಿವಿಧ ಸ್ಪಾಟ್ ಚೆಕ್‍ಗಳು ಮತ್ತು ತಪಾಸಣೆಗಳ ಕುರಿತು ಸ್ಪೈಸ್‍ಜೆಟ್ ನೋಟಿಸ್ ಗೆ ಉತ್ತರ ಸಲ್ಲಿಸಿದ ನಂತರ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆ ಸೇವೆಗಾಗಿ ಸ್ಪೈಸ್‍ಜೆಟ್‍ನ ವಿಮಾನ ಹಾರಾಟ ಸಂಖ್ಯೆಯನ್ನು ಶೇ.50ಕ್ಕೆ ನಿರ್ಬಂಧಿಸಲಾಗಿದೆ. ಇದನ್ನು 8 ವಾರಗಳ ಅವಧಿಗೆ ಅನುಮೋದನೆ ನೀಡಲಾಗಿದೆ ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಿದೆ.

ಸ್ಪೈಸ್ ಜೆಟ್ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ಸೇವೆ ನೀಡುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಏರ್‌ಲೈನ್ ಪ್ರವೃತ್ತಿಯನ್ನು ತಡೆಯಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಸ್ಪೈಸ್ ಜೆಟ್ ಇನ್ನೂ 8 ವಾರಗಳಲ್ಲಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆಗಾಗಿ ತನ್ನ ಪ್ರಯತ್ನಗಳನ್ನು ಮಾಡುವ ಅಗತ್ಯವಿದೆ ಎಂದು ಡಿಜಿಸಿಎ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com