ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಹೊಸ ಎಲ್ ಪಿಜಿ ಸಂಪರ್ಕ ಮತ್ತಷ್ಟು ದುಬಾರಿ

ಈಗಾಗಲೇ ಎಲ್ ಪಿಜಿ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಮತ್ತೊಂದು ಶಾಕ್ ನೀಡಲಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು ಹೊಸ ಎಲ್‌ಪಿಜಿ ಸಂಪರ್ಕಗಳಿಗೆ ನೀಡುವ ಒಂದು ಬಾರಿಯ ಭದ್ರತಾ ಠೇವಣಿಯ ಮೊತ್ತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಈಗಾಗಲೇ ಎಲ್ ಪಿಜಿ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಮತ್ತೊಂದು ಶಾಕ್ ನೀಡಲಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು ಹೊಸ ಎಲ್‌ಪಿಜಿ ಸಂಪರ್ಕಗಳಿಗೆ ನೀಡುವ ಒಂದು ಬಾರಿಯ ಭದ್ರತಾ ಠೇವಣಿಯ ಮೊತ್ತ ಹೆಚ್ಚಿಸಿದ್ದು, ಗ್ರಾಹಕರು ಜೂನ್ 16 ರಿಂದ ಹೆಚ್ಚುವರಿ 750 ರೂ. ನೀಡಬೇಕು.

ಠೇವಣಿ ಮೊತ್ತವು ಪ್ರತಿ ಸಿಲಿಂಡರ್‌ಗೆ 1,450 ರೂ.ನಿಂದ 2,200 ರೂ.ಗೆ ಏರಿಕೆಯಾಗಿದೆ ಮತ್ತು ರೆಗುಲೇಟರ್ ಬೆಲೆಯನ್ನು ಈಗಿರುವ 150 ರೂ.ನಿಂದ 250 ರೂ.ಗೆ ಏರಿಸಲಾಗಿದೆ. ಈಶಾನ್ಯ ರಾಜ್ಯಗಳ ಗ್ರಾಹಕರಿಗೆ ಪ್ರತಿ ಸಿಲಿಂಡರ್‌ಗೆ ರೂ.2,000 ಮತ್ತು ರೂ. ರೆಗುಲೇಟರ್ ಗೆ 200 ರೂ. ನಿಗದಿಪಡಿಸಲಾಗಿದೆ.

ಈ ಹಿಂದೆ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಬೆಲೆ 1450 ರೂ. ನೀಡಬೇಕಾಗಿತ್ತು. ಈಗ ಹೊಸ ಎಲ್ ಪಿಜಿ ಸಂಪರ್ಕ ಪಡೆಯಲು ಎರಡು ಸಿಲಿಂಡರ್‌ಗಳಿಗೆ ಭದ್ರತಾ ಠೇವಣಿಯಾಗಿ 4,400 ರೂ. ನೀಡಬೇಕು.

5 ಕೆಜಿ ಸಿಲಿಂಡರ್‌ಗೆ ಭದ್ರತಾ ಹಣ 800 ರೂ.ನಿಂದ 1150 ರೂ.ಗೆ ಏರಿಕೆಯಾಗಿದ್ದು, ಪೈಪ್ ಮತ್ತು ಪಾಸ್‌ಬುಕ್‌ಗೆ ಕ್ರಮವಾಗಿ 150 ಮತ್ತು 25 ರೂ. ನಿಗದಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com