ಏರ್ ಇಂಡಿಯಾಗೆ ಮತ್ತಷ್ಟು ಬಲ: ಏರ್ ಏಷ್ಯಾ ಸಂಪೂರ್ಣ ಒಡೆತನ ಟಾಟಾ ಪಾಲು!

ಮಲೇಷ್ಯಾದ ಕ್ಯಾಪಿಟಲ್ ಎ ವಿಮಾನಯಾನ ಸಂಸ್ಥೆಯಾದ ಏರ್ ಏಷ್ಯಾ ಲಿಮಿಟೆಡ್ ತನ್ನ ಉಳಿದ ಪಾಲನ್ನು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಗೆ ಮಾರಾಟ ಮಾಡಿದ್ದು ಇದೀಗ ವಿಮಾನಯಾನ ಸಂಪೂರ್ಣ ಒಡೆತನ ಟಾಟಾ ಕಂಪನಿಯ ಪಾಲಾಗಿದೆ.
ಏರ್ ಇಂಡಿಯಾಗೆ ಮತ್ತಷ್ಟು ಬಲ: ಏರ್ ಏಷ್ಯಾ ಸಂಪೂರ್ಣ ಒಡೆತನ ಟಾಟಾ ಪಾಲು!

ನವದೆಹಲಿ: ಮಲೇಷ್ಯಾದ ಕ್ಯಾಪಿಟಲ್ ಎ ವಿಮಾನಯಾನ ಸಂಸ್ಥೆಯಾದ ಏರ್ ಏಷ್ಯಾ ಲಿಮಿಟೆಡ್ ತನ್ನ ಉಳಿದ ಪಾಲನ್ನು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಗೆ ಮಾರಾಟ ಮಾಡಿದ್ದು ಇದೀಗ ವಿಮಾನಯಾನ ಸಂಪೂರ್ಣ ಒಡೆತನ ಟಾಟಾ ಕಂಪನಿಯ ಪಾಲಾಗಿದೆ.

ಬಹುಪಾಲು ಪಾಲನ್ನು ಹೊಂದಿದ್ದ ಟಾಟಾ ಕಂಪನಿಗೆ ಏರ್‌ಏಷಿಯಾ ಇಂಡಿಯಾದ ಸಂಪೂರ್ಣ ಷೇರು ಬಂಡವಾಳವನ್ನು ಖರೀದಿಸುವ ಏರ್ ಇಂಡಿಯಾದ ಪ್ರಸ್ತಾವನೆಯನ್ನು ಜೂನ್‌ನಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗವು(CCI) ಅನುಮೋದಿಸಿತು.

ಟಾಟಾ ಸಮೂಹವು ಏರ್ ಏಷ್ಯಾ ಇಂಡಿಯಾದಲ್ಲಿ 83.67 ಪ್ರತಿಶತ ಪಾಲನ್ನು ಹೊಂದಿತ್ತು. ಉಳಿದ ಪಾಲನ್ನು ಮಲೇಷ್ಯಾದ ಏರ್ ಏಷ್ಯಾ ಗ್ರೂಪ್‌ನ ಭಾಗವಾಗಿರುವ ಏರ್ ಏಷ್ಯಾ ಇನ್ವೆಸ್ಟ್‌ಮೆಂಟ್ ಲಿಮಿಟೆಡ್ (ಎಎಐಎಲ್) ಹೊಂದಿತ್ತು. ಈ ವರ್ಷದ ಜನವರಿಯಿಂದ ಏರ್ ಏಷ್ಯಾ 1,71,000ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸಿದೆ. ಈ ಅವಧಿಯಲ್ಲಿ 23 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿ ಪ್ರಯಾಣಿಸಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಟಾಟಾ ಸನ್ಸ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಟ್ಯಾಲೇಸ್ ಮೂಲಕ ಏರ್ ಇಂಡಿಯಾವನ್ನು 18,000 ಕೋಟಿ ರೂಪಾಯಿಗೆ ಖರೀದಿಸಿತ್ತು. ಇನ್ನು ಏರ್ ಏಷ್ಯಾ ಇಂಡಿಯಾ ಭಾರತದಲ್ಲಿ ಐದನೇ ಅತಿದೊಡ್ಡ ವಿಮಾನಯಾನ ಕಂಪನಿಯಾಗಿದೆ. ಇದು ಮಾರುಕಟ್ಟೆ ಪಾಲನ್ನು ಒಟ್ಟು 5.7% ದಷ್ಟು ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com