ಪೇಟಿಎಂಗೆ ದೊಡ್ಡ ಹೊಡೆತ, 571 ಕೋಟಿ ರೂ. ನಷ್ಟ: ಮುಂದಿನ ವರ್ಷದೊಳಗೆ ಮತ್ತೆ ಲಾಭಕ್ಕೆ ಮರಳುವ ವಿಶ್ವಾಸ

ಮೊಬೈಲ್ ಆ್ಯಪ್ ಪೇಟಿಎಂಗೆ ದೊಡ್ಡ ಹೊಡೆತ ಬಿದ್ದಿದೆ. ಸೆಪ್ಟೆಂಬರ್ 2022ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ರೂ. 571 ಕೋಟಿ ರೂ. ನಷ್ಟವಾಗಿರುವುದಾಗಿ ಸೋಮವಾರ ವರದಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 473 ಕೋಟಿ ರೂ. ನಷ್ಟವಾಗಿತ್ತು.  
ಪೇಟಿಎಂ ಸಾಂದರ್ಭಿಕ ಚಿತ್ರ
ಪೇಟಿಎಂ ಸಾಂದರ್ಭಿಕ ಚಿತ್ರ

ನವದೆಹಲಿ: ಮೊಬೈಲ್ ಆ್ಯಪ್ ಪೇಟಿಎಂಗೆ ದೊಡ್ಡ ಹೊಡೆತ ಬಿದ್ದಿದೆ. ಸೆಪ್ಟೆಂಬರ್ 2022ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ರೂ. 571 ಕೋಟಿ ರೂ. ನಷ್ಟವಾಗಿರುವುದಾಗಿ ಸೋಮವಾರ ವರದಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 473 ಕೋಟಿ ರೂ. ನಷ್ಟವಾಗಿತ್ತು.  

ಜೂನ್ ಅಂತ್ಯದ ವೇಳೆಗೆ ರೂ. 644. 4 ಕೋಟಿ ರೂಪಾಯಿಷ್ಟು ನಷ್ಟವಾಗಿರುವುದಾಗಿ ಪೇಟಿಎಂ ಪೋಸ್ಟ್ ಮಾಡಿತ್ತು. ಆದರೆ, ಈ ತ್ರೈಮಾಸಿಕ ಅವಧಿಯಲ್ಲಿ ರೂ. 571 ಕೋಟಿ ನಷ್ಟವಾಗಿರುವುದಾಗಿ ತಿಳಿಸಿದೆ. ಮುಂದಿನ ವರ್ಷದ ಸೆಪ್ಟೆಂಬರ್ ಅವಧಿಯೊಳಗೆ ಮತ್ತೆ ಲಾಭ ಗಳಿಸುವುದಾಗಿ ಪೇಟಿಎಂ ವಿಶ್ವಾಸ ವ್ಯಕ್ತಪಡಿಸಿದೆ.

ಬಡ್ಡಿ, ತೆರಿಗೆ, ಭೋಗ್ಯ ಮತ್ತಿತರಗಳಿಂದ ರೂ. 201 ಕೋಟಿ ರೂ. ಲಾಭ ಗಳಿಸುವ ಸಾಮರ್ಥ್ಯವಿದೆ. ಸೆಪ್ಟೆಂಬರ್ 2023ರೊಳಗೆ ಮತ್ತೆ ಲಾಭ ಗಳಿಸಲು ಮಾರ್ಗಸೂತ್ರವನ್ನು ನಿರಂತವಾಗಿ ಮುಂದುವರೆಸಲಾಗುವುದು ಎಂದು ಕಂಪನಿ ಹೇಳಿದೆ.

ಸಂಸ್ಥೆಯ ಕಾರ್ಯಾಚರಣೆಯಿಂದ ಬಂದ ಆದಾಯ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ. 76ಕ್ಕೆ ಏರಿಕೆಯಾಗಿದೆ. ಅಂದರೆ ಕಳೆದ ವರ್ಷವಿದ್ದ ರೂ. 1,086 ಕೋಟಿ ರೂ.ನಿಂದ ರೂ. 1.914 ಗೆ ಏರಿಕೆಯಾಗಿದೆ. ಆದಾಯ ಶೇ. 14 ರಷ್ಟು ವೃದ್ಧಿಯಾಗಿದೆ. ಸೋಮವಾರ ಕಂಪನಿಯ ಷೇರುಗಳು ಅತ್ಯಧಿಕ ಶೇ. 0.25 ರಲ್ಲಿ ರೂ.652 ನಲ್ಲಿ ಮುಕ್ತಾಯವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com