ಜಾಗತಿಕ ಮಟ್ಟದಲ್ಲಿ 2ನೇ ದೊಡ್ಡ ಮೈಕ್ರೋಬ್ಲಾಗ್ ಸ್ಥಾನ ಅಲಂಕರಿಸಿದ "ಕೂ" 

ದೇಶೀಯವಾಗಿ ಅಭಿವೃದ್ಧಿಯಾಗಿರುವ ಮೈಕ್ರೋ ಬ್ಲಾಗ್ ಕೂ ಎರಡನೇ ಅತಿ ದೊಡ್ಡ ಮೈಕ್ರೋಬ್ಲಾಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 
ಕೂ'ಸಾಮಾಜಿಕ ಜಾಲತಾಣ
ಕೂ'ಸಾಮಾಜಿಕ ಜಾಲತಾಣ

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಯಾಗಿರುವ ಮೈಕ್ರೋ ಬ್ಲಾಗ್ ಕೂ ಎರಡನೇ ಅತಿ ದೊಡ್ಡ ಮೈಕ್ರೋಬ್ಲಾಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಸ್ವತಃ ಕೂ ಈ ಬಗ್ಗೆ ಬುಧವಾರ ಘೋಷಣೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಕೂ ಎರಡನೇ ಅತಿ ದೊಡ್ಡ ಮೈಕ್ರೋಬ್ಲಾಗ್ ಸ್ಥಾನ ಅಲಂಕರಿಸಿದೆ ಎಂದು ಹೇಳಿದೆ. 

ಮಾ.2020 ರಲ್ಲಿ ಉದ್ಘಾಟನೆಯಾದ ಸಾಮಾಜಿಕ ಜಾಲತಾಣ ವೇದಿಕೆ ಕೂ, ಈ ವರೆಗೂ 50 ಮಿಲಿಯನ್ ಡೌನ್ ಲೋಡ್ ಅಗಿದ್ದು, ಬೆಳವಣಿಗೆ ವಿಷಯದಲ್ಲಿ ಮೇಲ್ಮುಖ ಪಥದಲ್ಲಿದೆ. ನಮ್ಮ ಬಳಕೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆ ಹರಿದುಬರುತ್ತಿದ್ದು, ಕೇವಲ 2.5 ವರ್ಷಗಳಲ್ಲಿ ಜಾಗತಿಕವಾಗಿ ಎರಡನೇ ಅತಿ ದೊಡ್ಡ ಮೈಕ್ರೋಬ್ಲಾಗ್ ಸ್ಥಾನ ಅಲಂಕರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ, ನಮ್ಮ ಗ್ರಾಹಕರು ನಮ್ಮಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಸಿಇಒ ಹಾಗೂ ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.

ಜಾಗತಿಕ ಮಟ್ಟದ ಮೈಕ್ರೋ ಬ್ಲಾಗಿಂಗ್ ವೇದಿಕೆಗಳಾದ ಟ್ವಿಟರ್, ಗೆಟ್ರ್, ಟ್ರೂತ್ ಸೋಶಿಯಲ್, ಮಾಸ್ಟೋಡಾನ್, ಪಾರ್ಲರ್ ಮುಂತಾದವುಗಳಿಗೆ ಪೈಪೋಟಿ ನೀಡಿ 2 ನೇ ಸ್ಥಾನ ಅಲಂಕರಿಸಿರುವ ಏಕೈಕ ಭಾರತೀಯ ಸಂಸ್ಥೆಯಾಗಿದೆ ಎಂದು ಕೂ ತಿಳಿಸಿದೆ.

ನಾವು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತಾರಗೊಳ್ಳುವುದಕ್ಕೆ ಚಿಂತಿಸುತ್ತಿದ್ದೆವೆ ಎಂದು ಕೂ ಸಹ ಸಂಸ್ಥಾಪಕ ಮಯಾಂಕ್ ಬಿಡವಟ್ಕ ತಿಳಿಸಿದ್ದಾರೆ. ಪ್ರಸ್ತುತ ಕೂ 10 ಭಾಷೆಗಳಲ್ಲಿ ಲಭ್ಯವಿದ್ದು, ಅಮೇರಿಕ, ಬ್ರಿಟನ್, ಸಿಂಗಪೂರ್, ಕೆನಡಾ, ನೈಜೀರಿಯಾ, ಯುಎಇ, ಅಲ್ಜೀರಿಯಾ, ನೇಪಾಳ, ಇರಾನ್, ಭಾರತ್ ಸೇರಿ 100 ದೇಶಗಳಲ್ಲಿ ಲಭ್ಯವಿದೆ. ಕೂ ಪ್ರಖ್ಯಾತ ವ್ಯಕ್ತಿಗಳಿಗೆ ಉಚಿತವಾಗಿ ಹಳದಿ ಎಮಿನೆನ್ಸ್ ಟಿಕ್ ನೀಡುತ್ತಿದ್ದು, ಇದನ್ನು ಮುಂದುವರೆಸಲಿದೆ ಎಂದು ಸಂಸ್ಥೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com