ಐ ಲವ್ ಯು ರಸ್ನಾ: ಜನಪ್ರಿಯ ಪಾನೀಯ ‘ರಸ್ನಾ’ ಸಂಸ್ಥಾಪಕ ಅರೀಜ್ ಪಿರೋಜ್‌ಶಾ ಖಂಬಟ್ಟ ನಿಧನ

ದೇಶದ ಖ್ಯಾತ  ಪಾನೀಯ ಬ್ರ್ಯಾಂಡ್ ರಸ್ನಾವನ್ನು ಜನರಿಗೆ ಪರಿಚಯಿಸಿದ್ದ ರಸ್ನಾ ಸಮೂಹದ  ಸಂಸ್ಥಾಪಕ ಅರೀಜ್ ಫಿರೋಜ್​ಶಾ ಖಂಬಾಟ್  ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ರಸ್ನಾ ಸಂಸ್ಥಾಪಕ
ರಸ್ನಾ ಸಂಸ್ಥಾಪಕ

ನವದೆಹಲಿ: ದೇಶದ ಖ್ಯಾತ  ಪಾನೀಯ ಬ್ರ್ಯಾಂಡ್ ರಸ್ನಾವನ್ನು ಜನರಿಗೆ ಪರಿಚಯಿಸಿದ್ದ ರಸ್ನಾ ಸಮೂಹದ  ಸಂಸ್ಥಾಪಕ ಅರೀಜ್ ಫಿರೋಜ್​ಶಾ ಖಂಬಾಟ್ಟ  ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಅವರು ‘ಅರೀಜ್ ಖಂಬಾಟ್ ಬೆನಿವೊಲೆಂಟ್​ ಟ್ರಸ್ಟ್’ನ ಅಧ್ಯಕ್ಷರೂ ಆಗಿದ್ದರು. ‘ಪಾರ್ಸಿ ಇರಾನಿ ಝಾರ್ಥೋಸ್ಟಿಸ್‌’ನ ವಿಶ್ವ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ದೀರ್ಘ ಕಾಲದಿಂದ ಅನಾರೋಗ್ಯಕ್ಕೆ ಈಡಾಗಿದ್ದರು.

ಖಂಬಟ್ಟ ಅವರು ರಸ್ನಾ ಪೇಯದ ಪೊಟ್ಟಣಗಳನ್ನು ಕೈಗೆಟಕುವ ಬೆಲೆಗೆ 1970ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಆಗ ಮಾರುಕಟ್ಟೆಯಲ್ಲಿ ಇದ್ದ ದುಬಾರಿ ಬೆಲೆಯ ತಂಪುಪಾನೀಯಗಳಿಗೆ ಪರ್ಯಾಯವಾಗಿ ಅವರು ರಸ್ನಾ ಪೊಟ್ಟಣವನ್ನು ಮಾರುಕಟ್ಟೆಗೆ ತಂದರು. ರಸ್ನಾ ಪೊಟ್ಟಣಗಳು ದೇಶದ 18 ಲಕ್ಷ ಅಂಗಡಿಗಳಲ್ಲಿ ಸಿಗುತ್ತಿವೆ. 1980 ಹಾಗೂ 1990ರ ದಶಕದಲ್ಲಿ ಜನಪ್ರಿಯವಾಗಿದ್ದ ‘ಐ ಲವ್ ಯೂ ರಸ್ನಾ’ ಜಾಹೀರಾತು ಜನರ ಮನಸ್ಸಿನಲ್ಲಿ ಈಗಲೂ ಅಚ್ಚೊತ್ತಿದೆ.

ಅರೀಜ್ ಫಿರೋಜ್​ಶಾ ಅವರು ಭಾರತೀಯ ಕೈಗಾರಿಕೆ, ಉದ್ಯಮ, ಸಾಮಾಜಿಕ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸಮಾಜ ಸೇವೆಯ ಮೂಲಕವೂ ಪ್ರಸಿದ್ಧರಾಗಿದ್ದರು’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com