ಟ್ವಿಟರ್ ಬ್ಲೂ ಟಿಕ್ ಗೆ ಹೊಸ ವ್ಯವಸ್ಥೆಗೆ ತಾತ್ಕಾಲಿಕ ಬ್ರೇಕ್ ಹಾಕಿದ ಎಲಾನ್ ಮಸ್ಕ್

ಟ್ವಿಟರ್ ನ ಹೊಸ ಮಾಲಿಕ ಎಲಾನ್ ಮಸ್ಕ್ ಜಾಲತಾಣದಲ್ಲಿನ ಬ್ಲೂ ಟಿಕ್ ಗೆ ಉದ್ದೇಶಿಸಿದ್ದ ಹೊಸ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಎಲಾನ್ ಮಸ್ಕ್
ಎಲಾನ್ ಮಸ್ಕ್

ನ್ಯೂಯಾರ್ಕ್: ಟ್ವಿಟರ್ ನ ಹೊಸ ಮಾಲಿಕ ಎಲಾನ್ ಮಸ್ಕ್ ಜಾಲತಾಣದಲ್ಲಿನ ಬ್ಲೂ ಟಿಕ್ ಗೆ ಉದ್ದೇಶಿಸಿದ್ದ ಹೊಸ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. 

ಬ್ಲೂ ಟಿಕ್ ಬದಲಾಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಪ್ರತ್ಯೇಕವಾದ ಕಲರ್ ಬಣ್ಣದ ದೃಢೀಕರಣವನ್ನು ಪರಿಚಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 44 ಬಿಲಿಯನ್ ಗೆ ಟ್ವಿಟರ್ ನ್ನು ಖರೀದಿಸಿದ್ದ ಉದ್ಯಮಿ ಮಸ್ಕ್, ಟ್ವಿಟರ್ ನಲ್ಲಿ ದೃಢೀಕರಣ ಬ್ಯಾಡ್ಜ್ ನ್ನು ಪಡೆಯಬೇಕಾದಲ್ಲಿ ಮಾಸಿಕ ಶುಲ್ಕ ಪಾವತಿಸಬೇಕೆಂಬ ನಿರ್ಧಾರವನ್ನು ಪ್ರಕಟಿಸಿದ್ದರು.

 
ಹೊಸ ಬ್ಲೂ ಟಿಕ್ ಯೋಜನೆಗೆ ಈಗ ಸದ್ಯಕ್ಕೆ ತಡೆಹಿಡಿಯಲಾಗಿದೆ. ವ್ಯಕ್ತಿಗಳಿಗೆ ಬೇರೆ ಬಣ್ಣ ಹಾಗೂ ಸಂಘಟನೆಗಳಿಗೇ ಬೇರೆ ಬಣ್ಣ ನೀಡುವ ಯೋಜನೆ ಇದೆ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. 

ಬ್ಲೂ ಟಿಕ್ ಗೆ ಶುಲ್ಕ ಪಾವತಿಸಿ ಗ್ರಾಹಕರು ರಾಜಕಾರಣಿಗಳು, ಕಾನೂನಿಗೆ ಸಂಬಂಧಿಸಿದವರು, ಸಂಘಟನೆಗಳ ಹೆಸರಿನಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗುತ್ತವೆ, ಈ ಮೂಲಕ ತಪ್ಪು ಮಾಹಿತಿ ಹರಡುವ ಸಾಧ್ಯತೆ ಇರುವ ಕಾರಣ ಬ್ಲೂ ಟಿಕ್ ಗೆ ಸಂಬಂಧಿಸಿದ ಹೊಸ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ.
 
ಬ್ಲೂ ಟಿಕ್ ಗೆ ಮಾಸಿಕ 8 ಡಾಲರ್ ಶುಲ್ಕ ವಿಧಿಸುವ ಪ್ರಕ್ರಿಯೆಯನ್ನು ಅಮೇರಿಕಾದ ಮಧ್ಯಂತರ ಚುನಾವಣೆಗಳ ಹಿನ್ನೆಲೆಯಲ್ಲಿ ನ.08 ವರೆಗೆ ವಿಳಂಬ ಮಾಡಲಾಗುತ್ತಿದೆ ಎಂದು ಈ ಹಿಂದೆ ವಿಶ್ಲೇಷಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com