2500 ಉದ್ಯೋಗಿಗಳ ವಜಾಗೊಳಿಸಲು ಬೈಜುಸ್ ಮುಂದು, 10 ಸಾವಿರ ಶಿಕ್ಷಕರ ನೇಮಕ

ಮಾರ್ಚ್ 2023 ರೊಳಗೆ ಲಾಭದಾಯಕವಾಗಲು ಯೋಜನೆ ರೂಪಿಸಿರುವ ಜನಪ್ರಿಯ ಶೈಕ್ಷಣಿಕ ಆಪ್ ಬೈಜುಸ್ ಮುಂದಿನ ಆರು ತಿಂಗಳಲ್ಲಿ 2,500 ಅಥವಾ ಶೇ. 5 ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಯೋಜಿಸಿದೆ.
ಬೈಜುಸ್ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್
ಬೈಜುಸ್ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್

ನವದೆಹಲಿ: ಮಾರ್ಚ್ 2023 ರೊಳಗೆ ಲಾಭದಾಯಕವಾಗಲು ಯೋಜನೆ ರೂಪಿಸಿರುವ ಜನಪ್ರಿಯ ಶೈಕ್ಷಣಿಕ ಆಪ್ ಬೈಜುಸ್ ಮುಂದಿನ ಆರು ತಿಂಗಳಲ್ಲಿ 2,500 ಅಥವಾ ಶೇ. 5 ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಯೋಜಿಸಿದೆ.

ವೆಚ್ಚ ಕಡಿಮೆ ಮಾಡಲು ಮತ್ತು ಉತ್ತಮ ಲಾಭಗಳಿಸಲು 50,000- ಉದ್ಯೋಗಿಗಳ ಪೈಕಿ ಸುಮಾರು ಶೇ 5 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ ಎಂದು ಬೈಜುಸ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

“ಹೂಡಿಕೆದಾರರು ಮತ್ತು ಮಧ್ಯಸ್ಥಗಾರರ ಕಡೆಗೆ ತನ್ನ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುವ ಪ್ರಬುದ್ಧ ಸಂಸ್ಥೆಯಾಗಿ, ಬಲವಾದ ಆದಾಯದ ಬೆಳವಣಿಗೆಯೊಂದಿಗೆ ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಕ್ರಮಗಳು ಲಾಭದಾಯಕತೆಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತವೆ ಎಂದು ಬೈಜುಸ್ ಇಂಡಿಯಾ ಸಿಇಒ(ವ್ಯವಹಾರ) ಮೃಣಾಲ್ ಮೋಹಿತ್ ಅವರು ಹೇಳಿದ್ದಾರೆ.

ಉದ್ಯೋಗಿಗಳ ಕಡಿತಗೊಳಿಸುವಿಕೆಯ ಹೊರತಾಗಿ, ಕಂಪನಿಯು ತನ್ನ ಭಾರತ ಮಾರುಕಟ್ಟೆ ವೆಚ್ಚವನ್ನು ಕಡಿತಗೊಳಿಸುವ ಸುಳಿವು ನೀಡಿದೆ. ಕಂಪನಿಯು ಹೊಸ ಪಾಲುದಾರಿಕೆಗಳ ಮೂಲಕ ಸಾಗರೋತ್ತರ ಬ್ರ್ಯಾಂಡ್ ಜಾಗೃತಿಯನ್ನು ನಿರ್ಮಿಸಲು ಗಮನಹರಿಸುತ್ತಿದೆ. ಮುಂದಿನ ವರ್ಷಗಳಲ್ಲಿ ಭಾರತ ಮತ್ತು ಸಾಗರೋತ್ತರ ವ್ಯಾಪಾರಕ್ಕಾಗಿ 10,000 ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com