ಗಗನಮುಖಿಯಾದ ಯುಎಸ್ ಡಾಲರ್ ಮೌಲ್ಯ, ವಿಶ್ವದಾದ್ಯಂತ ಹದಗೆಟ್ಟ ಪರಿಸ್ಥಿತಿ!

ಅಮೆರಿಕದ ಡಾಲರ್ ಮೌಲ್ಯ ಗಗನಮುಖಿಯಾಗಿ ಏರಿಕೆಯಾಗುತ್ತಿದ್ದು, ಸ್ಥಳೀಯ ಕರೆನ್ಸಿ ಮೌಲ್ಯ ಕುಸಿತ ಕಾಣುತ್ತಿರುವುದರಿಂದ ವಿಶ್ವದಾದ್ಯಂತ ಜನರು ತೀವ್ರ ನೋವು ಮತ್ತು ಹತಾಶೆ ಪರಿಸ್ಥಿತಿಯಲ್ಲಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕದ ಡಾಲರ್ ಮೌಲ್ಯ ಗಗನಮುಖಿಯಾಗಿ ಏರಿಕೆಯಾಗುತ್ತಿದ್ದು, ಸ್ಥಳೀಯ ಕರೆನ್ಸಿ ಮೌಲ್ಯ ಕುಸಿತ ಕಾಣುತ್ತಿರುವುದರಿಂದ ವಿಶ್ವದಾದ್ಯಂತ ಜನರು ತೀವ್ರ ನೋವು ಮತ್ತು ಹತಾಶೆ ಪರಿಸ್ಥಿತಿಯಲ್ಲಿದ್ದಾರೆ. ಕರೆನ್ಸಿ ಮೌಲ್ಯ ಕುಸಿತ ದೈನಂದಿನ ಸರಕಗಳು ಮತ್ತು ಸೇವೆಗಳ ಬೆಲೆಗಳು ಹೆಚ್ಚಾಗಲು ಕೊಡುಗೆ ನೀಡುತ್ತಿವೆ. ಉಕ್ರೇನ್‌ ವಿರುದ್ಧ ರಷ್ಯಾ ಆಕ್ರಮಣಕ್ಕೆ ಸಂಬಂಧಿಸಿದಂತೆ  ಜನರು ಈಗಾಗಲೇ ಆಹಾರ ಮತ್ತು ಶಕ್ತಿಯ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಇದು ಆರ್ಥಿಕ ಮತ್ತಷ್ಟು ಸಂಕಷ್ಟವನ್ನು ಹೆಚ್ಚಿಸುತ್ತಿದೆ.

ನೈರೋಬಿಯಲ್ಲಿನ ವಾಹನ ಬಿಡಿಭಾಗಗಳ ವ್ಯಾಪಾರಿ, ಇಸ್ತಾನ್‌ಬುಲ್‌ನಲ್ಲಿ ಮಕ್ಕಳ ಬಟ್ಚೆ ಮಾರಾಟ ಮಾಡುವವರು ಮತ್ತು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವೈನ್ ಆಮದುದಾರರು ಹೀಗೆ ಎಲ್ಲಾ ಕಡೆಯೂ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಬಲವಾದ ಡಾಲರ್ ಪ್ರಪಂಚದ ಉಳಿದ ಭಾಗಗಳಲ್ಲಿ ಕೆಟ್ಟ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ವ್ಯಾಪಾರ ನೀತಿಯ ಪ್ರಾಧ್ಯಾಪಕ ಈಶ್ವರ್ ಪ್ರಸಾದ್ ಹೇಳುತ್ತಾರೆ.

ಡಾಲರ್‌ ತೀವ್ರ ಏರಿಕೆಯು ಮುಂದಿನ ವರ್ಷ ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆಯನ್ನು ಹೆಚ್ಚಿಸಲಿದೆ ಎಂಬುದು ಅನೇಕ ಅರ್ಥಶಾಸ್ತ್ರಜ್ಞರ ಚಿಂತನೆಯಾಗಿದೆ. ಈ ವರ್ಷ ಡಾಲರ್ ಮೌಲ್ಯ ಶೇ. 18 ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು 20 ವರ್ಷಗಳಲ್ಲೇ ಅತ್ಯಂತ ಹೆಚ್ಚು ಎನ್ನಬಹುದಾದ ರೀತಿಯಲ್ಲಿ ಡಾಲರ್ ಮೌಲ್ಯ ಹೆಚ್ಚಾಗಿತ್ತು. ಡಾಲರ್ ಏರಿಕೆಗೆ ಕಾರಣಗಳು ನಿಗೂಢವಾಗಿಲ್ಲ. ಹೆಚ್ಚುತ್ತಿರುವ ಅಮೆರಿಕದ ಹಣದುಬ್ಬರ  ಎದುರಿಸಲು, ಫೆಡರಲ್ ರಿಸರ್ವ್  ಅಲ್ಪಾವಧಿಯ ಬಡ್ಡಿದರವನ್ನು ಈ ವರ್ಷ ಐದು ಬಾರಿ ಹೆಚ್ಚಿಸಿದೆ.

ಇದು ಅಮೆರಿಕ ಸರ್ಕಾರ ಮತ್ತು ಕಾರ್ಪೊರೇಟ್ ಬಾಂಡ್‌ಗಳ ವ್ಯಾಪಕ ಶ್ರೇಣಿಯ ಮೇಲಿನ ಹೆಚ್ಚಿನ ದರಗಳಿಗೆ ಕಾರಣವಾಗಿದ್ದು, ಹೂಡಿಕೆದಾರರನ್ನು ಆಕರ್ಷಿಸಿದೆ ಮತ್ತು ಅಮೆರಿಕದ ಕರೆನ್ಸಿ ಮೌಲ್ಯವನ್ನು ಹೆಚ್ಚಿಸಿದೆ. ಅಮೆರಿಕದ ಡೌಲರ್ ಮೌಲ್ಯಕ್ಕೆ ಹೋಲಿಸಿದಾಗ ಇತರ ಕರೆನ್ಸಿಗಳ ಮೌಲ್ಯ ಹೆಚ್ಚು ದುರ್ಬಲವಾಗಿದೆ. ವಿಶೇಷವಾಗಿ ಈ ವರ್ಷ ಡಾಲರ್ ಎದುರು ಭಾರತೀಯ ರೂಪಾಯಿ ಸುಮಾರು ಶೇ. 10, ಈಜಿಪ್ಟ್ ಪೌಂಡ್ ಶೇ.20, ಟರ್ಕಿಶ್ ಲಿರಾ ಶೇ. 28 ರಷ್ಟು ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com