ಟ್ವಿಟರ್ ಖರೀದಿ ಮಾಡಿದಾಗಿನಿಂದ ಹಲವು ತಪ್ಪುಗಳಾಗಿವೆ: ಎಲಾನ್ ಮಸ್ಕ್ 

ಸಾಮಾಜಿಕ ಜಲಾತಾಣ ಸಂಸ್ಥೆ ನಡೆಸುವುದು ಒಂದು ರೀತಿಯ "ರೋಲರ್ ಕೋಸ್ಟರ್" ಎಂಬುದನ್ನು ಟ್ವಿಟರ್ ನ ಮಾಲಿಕ ಎಲಾನ್ ಮಸ್ ಹೇಳಿದ್ದು, ಟ್ವಿಟರ್ ಖರೀದಿಯ ಬಳಿಕ ಹಲವು ತಪ್ಪುಗಳು ಆಗಿವೆ ಎಂದು ಹೇಳಿದ್ದಾರೆ. 
ಎಲಾನ್ ಮಸ್ಕ್
ಎಲಾನ್ ಮಸ್ಕ್

ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ಜಲಾತಾಣ ಸಂಸ್ಥೆ ನಡೆಸುವುದು ಒಂದು ರೀತಿಯ "ರೋಲರ್ ಕೋಸ್ಟರ್" ಎಂಬುದನ್ನು ಟ್ವಿಟರ್ ನ ಮಾಲಿಕ ಎಲಾನ್ ಮಸ್ ಹೇಳಿದ್ದು, ಟ್ವಿಟರ್ ಖರೀದಿಯ ಬಳಿಕ ಹಲವು ತಪ್ಪುಗಳು ಆಗಿವೆ ಎಂದು ಹೇಳಿದ್ದಾರೆ. 

6 ತಿಂಗಳ ಹಿಂದೆ ಎಲಾನ್ ಮಸ್ಕ್ ಟ್ವಿಟರ್ ನ್ನು 44 ಬಿಲಿಯನ್ ಡಾಲರ್ ಗೆ ಖರೀದಿಸಿದ್ದರು. ಬಿಬಿಸಿಯೊಂದಿಗಿನ ನೇರಪ್ರಸಾರದ ಸಂದರ್ಶನದಲ್ಲಿ ಮಾತನಾಡಿರುವ ಎಲಾನ್ ಮಸ್ಕ್, ಬಿಬಿಸಿಗೆ ಟ್ವಿಟರ್ ನಲ್ಲಿ ಸರ್ಕಾರದ ಹಣ ಪಡೆದ ಮಾಧ್ಯಮ ಎಂದು ಹಣೆ ಪಟ್ಟಿ ನೀಡಿರುವುದು ಈ ವರೆಗೂ ಆಗಿರುವ ತಪ್ಪುಗಳಲ್ಲಿ ಒಂದು ಎಂದು ಮಸ್ಕ್ ಒಪ್ಪಿಕೊಂಡಿದ್ದಾರೆ.

ಬಿಬಿಸಿ ಟ್ವಿಟರ್ ಹ್ಯಾಂಡಲ್ ಗೆ ನೀಡಿರುವ ಪದನಾಮವನ್ನು ಪ್ರಸಾರ ಸಂಸ್ಥೆ ವಿರೋಧಿಸಿದ ಬಳಿಕ ತಾವು ಅದನ್ನು ಬದಲಾಯಿಸುವುದಾಗಿ ಮಸ್ಕ್ ತಿಳಿಸಿದ್ದಾರೆ. "ನಾವು ಟ್ವಿಟರ್ ನ್ನು ಸಾಧ್ಯವಾದಷ್ಟು ಸತ್ಯ ಮತ್ತು ನಿಖರವಾಗಿಡಲು ಬಯಸುತ್ತೇವೆ- ನಾವು ಲೇಬಲ್ ಅನ್ನು 'ಸಾರ್ವಜನಿಕರ ಧನಸಹಾಯದಿಂದ ನಡೆಯುತ್ತಿರುವ ಸಂಸ್ಥೆ' ಎಂದು ಬದಲಿಸುತ್ತೇವೆ" ಎಂದು ಮಸ್ಕ್ ಹೇಳಿದ್ದಾರೆ.

ಮಸ್ಕ್ ಅವರು ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ನ ಉಸ್ತುವಾರಿಯನ್ನು ನಿರ್ಣಯಿಸುವಲ್ಲಿ, "ಕಳೆದ ಹಲವಾರು ತಿಂಗಳುಗಳಿಂದ ಒತ್ತಡದ ಪರಿಸ್ಥಿತಿ"ಯನ್ನು ಎದುರಿಸುತ್ತಿದ್ದೇನೆ ಎಂದು ಹೇಳಿದರು.

ಸೈಟ್‌ನಲ್ಲಿನ ಸಮೀಕ್ಷೆಗೆ ಪ್ರತಿಕ್ರಿಯೆಯಾಗಿ ಅವರು ಕೆಳಗಿಳಿದ ನಂತರ Twitter ನ ಹೊಸ CEO ಯಾರು ಎಂದು ಕೇಳಿದಾಗ, ಅವರು ತಮ್ಮ ನಾಯಿ ಫ್ಲೋಕಿ Floki ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com