ನವದೆಹಲಿ: ಕಚ್ಚಾ ಪೆಟ್ರೋಲ್ ಮೇಲಿನ ವಿಂಡ್ ಫಾಲ್ ತೆರಿಗೆಯನ್ನು ಕೇಂದ್ರ ಸರ್ಕಾರ ಪ್ರತಿ ಟನ್ ಗೆ 7,100 ರೂಪಾಯಿಗಳಿಗೆ ಏರಿಕೆ ಮಾಡಿದೆ.
ಆ.15 ರಿಂದ ಈ ಪರಿಷ್ಕೃತ ತೆರಿಗೆ ಜಾರಿಗೆ ಬರಲಿದ್ದು, ದೇಶೀಯವಾಗಿ ಉತ್ಪಾದನೆಯಾಗುವ ಕಚ್ಚಾತೈಲಕ್ಕೆ 4,250 ರೂಪಾಯಿಗಳ ವಿಂಡ್ ಫಾಲ್ ತೆರಿಗೆಯನ್ನು ನಿಗದಿಪಡಿಸಲಾಗಿದೆ.
ಇದಷ್ಟೇ ಅಲ್ಲದೇ, ಅಲ್ಲದೆ, ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ಅಥವಾ ಡೀಸೆಲ್ ರಫ್ತಿನ ಮೇಲಿನ ಸುಂಕವನ್ನು ಪ್ರಸ್ತುತ ಲೀಟರ್‌ಗೆ 1 ರಿಂದ 5.50 ರೂ.ಗೆ ಹೆಚ್ಚಿಸಲಾಗುತ್ತದೆ.
ಆಗಸ್ಟ್ 15 ರಿಂದ ಜಾರಿಗೆ ಬರುವಂತೆ ಜೆಟ್ ಇಂಧನ ಅಥವಾ ಎಟಿಎಫ್ ಮೇಲೆ ಪ್ರತಿ ಲೀಟರ್‌ಗೆ ರೂ 2 ಸುಂಕವನ್ನು ವಿಧಿಸಲಾಗುತ್ತದೆ. ಪ್ರಸ್ತುತ, ಜೆಟ್ ಇಂಧನದ ಮೇಲೆ ಯಾವುದೇ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಇಲ್ಲ. ಪೆಟ್ರೋಲ್ ಮೇಲಿನ ಎಸ್ಇಡಿಯೂ ಶೂನ್ಯದಲ್ಲಿಯೇ ಮುಂದುವರೆಯಲಿದೆ.
Advertisement