ಕರ್ನಾಟಕದ ಹೆಮ್ಮೆ, ಮೈಸೂರು ಸ್ಯಾಂಡಲ್ ಸೋಪ್: ಮಾಸಿಕ ರೂ.133 ಕೋಟಿಗೂ ಅಧಿಕ ವಹಿವಾಟು

ಕರ್ನಾಟಕದ ಹೆಮ್ಮೆ, ಐತಿಹಾಸಿಕ ಮೈಸೂರು ಸ್ಯಾಂಡಲ್ ಸೋಪ್ ಉತ್ತಮವಾಗಿ ಮಾರಾಟವಾಗುತ್ತಿದ್ದು, ಮಾಸಿಕ ರೂ. 133 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ.
ಮೈಸೂರು ಸ್ಯಾಂಡಲ್ ಸೋಪ್
ಮೈಸೂರು ಸ್ಯಾಂಡಲ್ ಸೋಪ್

ಬೆಂಗಳೂರು: ಕರ್ನಾಟಕದ ಹೆಮ್ಮೆ, ಐತಿಹಾಸಿಕ ಮೈಸೂರು ಸ್ಯಾಂಡಲ್ ಸೋಪ್ ಉತ್ತಮವಾಗಿ ಮಾರಾಟವಾಗುತ್ತಿದ್ದು, ಮಾಸಿಕ ರೂ. 133 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್,  ಕಂಪನಿಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಈ ವರ್ಷದ ನವೆಂಬರ್ ನಲ್ಲಿ ಮಾಸಿಕ ಉತ್ಪಾದನೆ 4,144 ಮೆಟ್ರಿಕ್ ಟನ್ ದಾಟಿರುವುದಾಗಿ ತಿಳಿಸಿದ್ದಾರೆ. 

ಮಾಸಿಕ ರೂ.133 ಕೋಟಿಗೂ ಅಧಿಕ ವಹಿವಾಟು ನಡೆದಿದೆ.ಯಾವುದೇ ಹೆಚ್ಚುವರಿ ಹೂಡಿಕೆಯಿಲ್ಲದೆ, ಸುಧಾರಿತ ದಕ್ಷತೆಯಿಂದ ಈ ಸಾಧನೆ ಸಾಧ್ಯವಾಗಿದೆ. ಈ ವರ್ಷ ಕೆಎಸ್ ಡಿಎಲ್ ವಾರ್ಷಿಕ ಆದಾಯ 2,000 ಕೋಟಿ ದಾಟಬೇಕು.ಮುಂದಿನ ಐದು ವರ್ಷಗಳಲ್ಲಿ, ವಾರ್ಷಿಕ ಆದಾಯ 1 ಬಿಲಿಯನ್ ಡಾಲರ್ ಗೆ  ತಲುಪಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com