ಹೊಸ ಸಮವಸ್ತ್ರದಲ್ಲಿ ಏರ್ ಇಂಡಿಯಾ ಸಿಬ್ಬಂದಿ
ಹೊಸ ಸಮವಸ್ತ್ರದಲ್ಲಿ ಏರ್ ಇಂಡಿಯಾ ಸಿಬ್ಬಂದಿ

ಏರ್ ಇಂಡಿಯಾ ಸಿಬ್ಬಂದಿಗೆ ಮನೀಶ್ ಮಲ್ಹೋತ್ರಾ ವಿನ್ಯಾಸದ ಹೊಸ ಸಮವಸ್ತ್ರ! ವಿಡಿಯೋ

ಖಾಸಗಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮಂಗಳವಾರ ತನ್ನ ಕ್ಯಾಬಿನ್ ಮತ್ತು ಕಾಕ್‌ಪಿಟ್ ಸಿಬ್ಬಂದಿಗೆ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಹೊಸ ಸಮವಸ್ತ್ರಗಳ ಸಂಗ್ರಹವನ್ನು ಅನಾವರಣಗೊಳಿಸಿದೆ.

ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮಂಗಳವಾರ ತನ್ನ ಕ್ಯಾಬಿನ್ ಮತ್ತು ಕಾಕ್‌ಪಿಟ್ ಸಿಬ್ಬಂದಿಗೆ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಹೊಸ ಸಮವಸ್ತ್ರಗಳ ಸಂಗ್ರಹವನ್ನು ಅನಾವರಣಗೊಳಿಸಿದೆ. ಏರ್ ಇಂಡಿಯಾದ ಮೊದಲ ಏರ್‌ಬಸ್ A350 ವಿಮಾನದ ಸೇವೆಯಲ್ಲಿ ಹೊಸ ಸಮವಸ್ತ್ರವನ್ನು ಆರಂಭಿಸಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ  ಹಂತ ಹಂತವಾಗಿ ಪರಿಚಯಿಸಲಾಗುವುದು ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಮನೀಶ್ ಮಲ್ಹೋತ್ರಾ ಅವರ ನವೀನ ವಿನ್ಯಾಸವು ಏರ್ ಇಂಡಿಯಾದ ಭವಿಷ್ಯದ ನಿರೂಪಣೆಗೆ ಅತ್ಯಾಕರ್ಷಕ ಹೊಸ ಅಧ್ಯಾಯ ಬರೆಯಲಿದೆ ಎಂದು ದೃಢವಾಗಿ ನಂಬುತ್ತೇವೆ ಎಂದು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್ಬೆಲ್ ವಿಲ್ಸನ್ ಹೇಳಿದ್ದಾರೆ. 

ಮಹಿಳಾ ಕ್ಯಾಬಿನ್ ಸಿಬ್ಬಂದಿಯ ಉಡುಪುಗಳು ಭಾರತೀಯ ಪರಂಪರೆಯ ವಾಸ್ತುಶೈಲಿ (ಜರೋಖಾ) ಮತ್ತು ವಿಸ್ಟಾ (ಹೊಸ ಏರ್ ಇಂಡಿಯಾ ಲೋಗೋ ಐಕಾನ್) ನೆನಪಿಸುವ ಸಂಕೀರ್ಣವಾದ ಮಾದರಿಗಳೊಂದಿಗೆ ಸೀರೆಯನ್ನು ಹೊಂದಿದ್ದು,ಆರಾಮದಾಯಕವಾದ ಕುಪ್ಪಸ ಮತ್ತು ಬ್ಲೇಜರ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.

ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವ ಸಮವಸ್ತ್ರಗಳ ವಿನ್ಯಾಸ, ಅತ್ಯಾಧುನಿಕ ನೋಟ ನನ್ನ ಉದ್ದೇಶವಾಗಿತ್ತು. ಈ ಸಮವಸ್ತ್ರಗಳು ಸಿಬ್ಬಂದಿಗೆ ಹೆಮ್ಮೆಯ ಭಾವನೆಯನ್ನು ಉಂಟುಮಾಡುತ್ತದೆ ಎಂದು ಭಾವಿಸುವುದಾಗಿ ಮಲ್ಹೋತ್ರಾ ಹೇಳಿದರು.

ಮಲ್ಹೋತ್ರಾ ವಿನ್ಯಾಸಗೊಳಿಸಿರುವ ಸಮವಸ್ತ್ರಕ್ಕೆ ತಕ್ಕಂತೆ ಪಾದರಕ್ಷೆಗಳನ್ನು ಕೂಡಾ ವ್ಯವಸ್ಥೆ ಮಾಡಿದ್ದಾರೆ. ಮಹಿಳಾ ಕ್ಯಾಬಿನ್ ಸಿಬ್ಬಂದಿ (ಕಪ್ಪು ಮತ್ತು ಬರ್ಗಂಡಿ) ಬ್ಲಾಕ್ ಹೀಲ್ಸ್ ಮತ್ತು ಪುರುಷ  ಸಿಬ್ಬಂದಿ ಆರಾಮದಾಯಕವಾದ ಕಪ್ಪು ಶೂಗಳನ್ನು ಧರಿಸುತ್ತಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com