ಚಿನ್ನದ ದರ 300 ರೂಪಾಯಿ ಏರಿಕೆ; ಬೆಳ್ಳಿ 800 ರೂ. ತುಟ್ಟಿ!

ಚಿನ್ನದ ದರ 300 ರೂಪಾಯಿ ಏರಿಕೆ ಕಂಡಿದ್ದು, ಪ್ರತಿ 10 ಗ್ರಾಮ್ ಚಿನ್ನಕ್ಕೆ 63,100 ರೂಪಾಯಿಯಾಗಿದೆ. 
ಏರಿಕೆ ಕಂಡ ಚಿನ್ನದ ದರ
ಏರಿಕೆ ಕಂಡ ಚಿನ್ನದ ದರ

ಚಿನ್ನದ ದರ 300 ರೂಪಾಯಿ ಏರಿಕೆ ಕಂಡಿದ್ದು, ಪ್ರತಿ 10 ಗ್ರಾಮ್ ಚಿನ್ನಕ್ಕೆ 63,100 ರೂಪಾಯಿಯಾಗಿದೆ. 

ಹೆಚ್ ಡಿಎಫ್ ಸಿ ಸೆಕ್ಯೂರಿಟೀಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಹಿಂದಿನ ದಿನ ಹಳದಿ ಲೋಹದ ಬೆಲೆ 10 ಗ್ರಾಮ್ ಗಳಿಗೆ 62,800 ರೂಪಾಯಿಗಳಷ್ಟಿತ್ತು. 

ಇದೇ ವೇಳೆ ಬೆಳ್ಳಿಯ ದರ 800 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಕೆ.ಜಿಗೆ 78,500 ರೂಪಾಯಿಗಳಾಗಿವೆ. ಬೆಳ್ಳಿಯ ಈ ಹಿಂದಿನ ದರ ಪ್ರತಿ ಕೆ.ಜಿಗೆ 77,700 ರೂಪಾಯಿಗಳಿತ್ತು. 

ಫ್ಯೂಚರ್ಸ್ ಟ್ರೇಡ್ ನಲ್ಲಿ MCX ನಲ್ಲಿ ಚಿನ್ನದ ಫೆಬ್ರವರಿ ಒಪ್ಪಂದವು 10 ಗ್ರಾಂಗೆ 112 ರೂ.ಗೆ ಏರಿಕೆಯಾಗಿದ್ದು 62,588 ರೂ ಗಳಷ್ಟಾಗಿವೆ. ಇದೇ ವಿಭಾಗದಲ್ಲಿ ಮಾರ್ಚ್ ನಲ್ಲಿನ ಬೆಳ್ಳಿ ದರ 110 ರೂಪಾಯಿಗಳಿಗೆ ಏರಿಕೆಯಾಗಿದ್ದು, ವಿನಿಮಯದಲ್ಲಿ ಪ್ರತಿ ಕೆ.ಜಿಗೆ 74,934 ರೂಪಾಯಿಗಳಷ್ಟಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಪ್ರತಿ ಔನ್ಸ್‌ಗೆ USD 2,040 ಮತ್ತು USD 24.07 ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com