ಮುಂದುವರಿದ ಟೆಕ್ ಕಂಪೆನಿಗಳ Layoff ಪ್ರಕ್ರಿಯೆ: ಜಾಗತಿಕವಾಗಿ 6,650 ಉದ್ಯೋಗಿಗಳ ವಜಾಕ್ಕೆ ಡೆಲ್ ನಿರ್ಧಾರ

ಇತ್ತೀಚೆಗೆ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುತ್ತಿದೆ. ಅವುಗಳ ಸಾಲಿಗೆ ಡೆಲ್ ಟೆಕ್ನಾಲಜಿಸ್ ಕಂಪೆನಿ ಸೇರಿದೆ. ಡೆಲ್ ಕಂಪನಿಯು ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದೆ.
ಡೆಲ್ ಟೆಕ್ನಾಲಜಿಸ್
ಡೆಲ್ ಟೆಕ್ನಾಲಜಿಸ್
Updated on

ಬೆಂಗಳೂರು: ಇತ್ತೀಚೆಗೆ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುತ್ತಿದೆ. ಅವುಗಳ ಸಾಲಿಗೆ ಡೆಲ್ ಟೆಕ್ನಾಲಜಿಸ್ ಕಂಪೆನಿ ಸೇರಿದೆ. ಡೆಲ್ ಕಂಪನಿಯು ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಟೆಕ್ ಕಂಪನಿಗಳು ಅನಿಶ್ಚಿತ ಜಾಗತಿಕ ಆರ್ಥಿಕ ವಾತಾವರಣವನ್ನು ಎದುರಿಸುತ್ತಿರುವ ಕಾರಣ ಜಾಗತಿಕವಾಗಿ ಸುಮಾರು 6,650 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಸೋಮವಾರ ಟೆಕ್ ಕಂಪನಿ ಡೆಲ್ ಟೆಕ್ನಾಲಜಿಸ್ ಹೇಳಿದೆ.

ಇದರಿಂದ ಭಾರತದಲ್ಲಿ ಎಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಜನವರಿ 28, 2022 ರಂತೆ, ಕಂಪನಿಯು ಜಾಗತಿಕವಾಗಿ ಸುಮಾರು 1,33,000 ಜನರನ್ನು ನೇಮಿಸಿಕೊಂಡಿತ್ತು. ಅದರಲ್ಲಿ ಶೇಕಡಾ 32ರಷ್ಟು ಮಂದಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಕಂಪನಿಯು ಯುಎಸ್, ಭಾರತ ಮತ್ತು ಇತರ ದೇಶಗಳಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ.

ಭಾರತದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಬಗ್ಗೆ ಕೇಳಿದಾಗ, ನಮ್ಮ ಗ್ರಾಹಕರು ಮತ್ತು ಪಾಲುದಾರರಿಗೆ ಅತ್ಯುತ್ತಮ ನಾವೀನ್ಯತೆ, ಮೌಲ್ಯ ಮತ್ತು ಸೇವೆಯನ್ನು ತಲುಪಿಸಲು ನಾವು ಮುಂದೆಯೂ ಸಿದ್ಧವಿದೆ, ಅದೇ ರೀತಿ ಮಾರುಕಟ್ಟೆಯಲ್ಲಿ ನಮ್ಮ ವ್ಯವಹಾರಗಳನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ. ಆರ್ಥಿಕ ಅನಿಶ್ಚಿತತೆಯು ಮುಂದುವರಿದಿರುವುದರಿಂದ ಈ ಕ್ರಮ ಸದ್ಯಕ್ಕೆ ನಮಗೆ ಮುಖ್ಯವಾಗಿದೆ. ಜೂನ್‌ನಿಂದ, ನಾವು ಸವಾಲಿನ ಜಾಗತಿಕ ಪರಿಸರವನ್ನು ಎದುರಿಸಲು ಬಾಹ್ಯ ನೇಮಕಾತಿ ಮತ್ತು ವೆಚ್ಚವನ್ನು ಕಡಿಮೆಗೊಳಿಸಿದ್ದೇವೆ ಎಂದಿದೆ. 

ವಿಭಾಗಗಳ ಮರುಸಂಘಟನೆಗಳ ಮೂಲಕ ದಕ್ಷತೆಯನ್ನು ಹೆಚ್ಚಿಸಲು ನಮಗೆ ಹೆಚ್ಚಿನ ಅವಕಾಶವಿದೆ, ಇದು ಜಗತ್ತಿನಾದ್ಯಂತ ತಂಡದ ಸದಸ್ಯರನ್ನು ಕಡಿಮೆ ಮಾಡಲು ಕಾರಣವಾಗಿದೆ. ಇದು ಕಷ್ಟಕರವಾದ ನಿರ್ಧಾರವಾಗಿದ್ದು ಅದನ್ನು ಲಘುವಾಗಿ ತೆಗೆದುಕೊಳ್ಳಲಾಗಿಲ್ಲ, ಮುಂದಿನ ದಿನಗಳಲ್ಲಿ ಪ್ರಭಾವಿತ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾದರೆ ತೆಗೆದುಕೊಳ್ಳುತ್ತೇವೆ ಎಂದರು. 

ಉದ್ಯೋಗಿಗಳಿಗೆ ನೀಡಿದ ಸಂದೇಶದಲ್ಲಿ, ಕಂಪನಿಯ ಉಪಾಧ್ಯಕ್ಷ ಮತ್ತು ಸಹ-ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಕ್ಲಾರ್ಕ್, ಮಾರುಕಟ್ಟೆ ಪರಿಸ್ಥಿತಿಗಳು ಅನಿಶ್ಚಿತ ಭವಿಷ್ಯದೊಂದಿಗೆ ಮುಂದುವರಿಯುತ್ತಿವೆ. ಕಂಪನಿಯು ಈಗಾಗಲೇ ಬಾಹ್ಯ ನೇಮಕಾತಿಗೆ ವಿರಾಮ ಹಾಕಿದ್ದು ಸವಾಲುಗಳನ್ನು ಎದುರಿಸಲು ಹೊರಗಿನ ಸೇವೆಗಳನ್ನು ಕಡಿಮೆ ಮಾಡುವುದು ಸೇರಿದಂತೆ ಹಲವಾರು ನಿರ್ಧಾರಗಳನ್ನು ಕೈಗೊಂಡಿದ್ದೇವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆ ನೀಡಿದೆ. 

ಮುಂಬರುವ ವಾರಗಳಲ್ಲಿ, ಕಂಪನಿಯು ಅನೇಕ ಬದಲಾವಣೆಗಳನ್ನು ಮತ್ತು ಕೆಲವು ಮರುಹೊಂದಿಕೆಗಳನ್ನು ಮಾಡುತ್ತದೆ. ನವೆಂಬರ್ 2022 ರಲ್ಲಿ, ಡೆಲ್ ತನ್ನ ಮೂರನೇ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿತ್ತು. ಆಗ ಆದಾಯವು ಶೇಕಡಾ 6ರಷ್ಟು ಕಡಿಮೆಯಾಗಿ 24.7 ಶತಕೋಟಿ ಡಾಲರ್ ಮತ್ತು ಕಾರ್ಯಾಚರಣೆಯ ಆದಾಯವು 1.8 ಶತಕೋಟಿ ಡಾಲರ್ ಕಂಡು ಶೇಕಡಾ 68ರಷ್ಟು ಹೆಚ್ಚಾಗಿದೆ.

ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕಾರ, 292 ಟೆಕ್ ಕಂಪನಿಗಳು 2023 ರಲ್ಲಿ 88,138 ಉದ್ಯೋಗಿಗಳನ್ನು ವಜಾಗೊಳಿಸಿವೆ. ಹೆಚ್ ಪಿ ಕಂಪೆನಿ ಕಳೆದ ನವೆಂಬರ್‌ನಲ್ಲಿ 6 ಸಾವಿರ ಉದ್ಯೋಗಿಗಳನ್ನು ಕಡಿತ ಮಾಡುವುದಾಗಿ ಘೋಷಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com