ಶಾರ್ಟ್ ಸೆಲ್ಲರ್ ವಿವಾದದ ನಡುವೆ ಎಫ್ ಪಿಒ ಮುಂದುವರೆಸಲು ಅದಾನಿ ನಿರ್ಧಾರ

ಬಿಲಿಯನೇರ್ ಗೌತಮ್ ಅದಾನಿ ಸಮೂಹ ರೂ.20,000 ಕೋಟಿ ರೂಗಳ ಫಾಲೋ ಆನ್ ಷೇರುಗಳ ಮಾರಾಟದ ಬೆಲೆ ಹಾಗೂ ದಿನಾಂಕದಲ್ಲಿ ಯಾವುದೇ ಬದಲಾವಣೆಯನ್ನೂ ನಿರಾಕರಿಸಿದೆ. 
ಗೌತಮ್ ಅದಾನಿ
ಗೌತಮ್ ಅದಾನಿ

ಮುಂಬೈ: ಬಿಲಿಯನೇರ್ ಗೌತಮ್ ಅದಾನಿ ಸಮೂಹ ರೂ.20,000 ಕೋಟಿ ರೂಗಳ ಫಾಲೋ ಆನ್ ಷೇರುಗಳ ಮಾರಾಟದ ಬೆಲೆ ಹಾಗೂ ದಿನಾಂಕದಲ್ಲಿ ಯಾವುದೇ ಬದಲಾವಣೆಯನ್ನೂ ನಿರಾಕರಿಸಿದೆ. ಅಮೇರಿಕದ ಶಾರ್ಟ್ ಸೆಲ್ಲರ್ ಅದಾನಿ ಸಮೂಹದ ಬಗ್ಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತ ಕಂಡಿತ್ತು.
 
ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ನ ಫ್ಯೂಚರ್ ಪಬ್ಲಿಕ್ ಆಫರ್ (ಎಫ್ ಪಿಒ) ನಿಗದಿಯಂತೆಯೇ ಮಾರುಕಟ್ಟೆ ಪ್ರವೇಶಿಸಲಿದೆ. ಬೆಲೆ ಅಥವಾ ದಿನಾಂಕದಲ್ಲಿ ಯಾವುದೇ ಬದಲಾವಣೆಗಳೂ ಇಲ್ಲ ಎಂದು ಸಮೂಹದ ವಕ್ತಾರರು ತಿಳಿಸಿದ್ದಾರೆ.

ಎಫ್ ಪಿಒ 4.55 ಕೋಟಿ ಷೇರುಗಳ ಪೈಕಿ ಶುಕ್ರವಾರದಂದು ಶೇ.1 ರಷ್ಟು (4.7 ಲಕ್ಷ ಷೇರುಗಳು) ಚಂದಾದಾರರನ್ನು ಪಡೆದಿತ್ತು ಎಂಬ ಮಾಹಿತಿ ಬಿಎಸ್ ಇ ಮೂಲಕ ತಿಳಿದುಬಂದಿದೆ. ಹಿಂಡನ್ ಬರ್ಗ್ ನ ವರದಿಯ ನಂತರ ಅದಾನಿ ಎಂಟರ್ ಪ್ರೈಸಸ್ ತನ್ನ ಸೆಕೆಂಡರಿ ಸೇಲ್ ನ ಆಫರ್ ಪ್ರೈಸ್ ಗಿಂತಲೂ ಶೇ.20 ರಷ್ಟು ಕುಸಿತ ಕಂಡಿತ್ತು, ಹಿಂಡನ್ ಬರ್ಗ್ ವರದಿಯನ್ನು ಅದಾನಿ ಸಮೂಹ ತಿರಸ್ಕರಿಸಿದ್ದು ಇದು ಬೋಗಸ್ ವರದಿ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com