ಮಾರ್ಚ್ 2023 ರಂತೆ ಕೇಂದ್ರ ಸರ್ಕಾರದ ಒಟ್ಟು ಸಾಲ 156 ಲಕ್ಷ ಕೋಟಿಗೂ ಅಧಿಕ: ಹಿಂದಿನ ವರ್ಷಕ್ಕಿಂತ ಶೇ.11ರಷ್ಟು ಹೆಚ್ಚಳ

2022-23 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಒಟ್ಟು ಸಾಲ (ತಾತ್ಕಾಲಿಕ) 156 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 11.5 ರಷ್ಟು  ಹೆಚ್ಚಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸಿವೆ. ಕಳೆದ ವರ್ಷ ಡಿಸೆಂಬರ್ ನಲ್ಲಿದ್ದ ಸಾಲಕ್ಕಿಂತ ಶೇ. 5 ರಷ್ಟು  ಹೆಚ್ಚಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2022-23 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಒಟ್ಟು ಸಾಲ (ತಾತ್ಕಾಲಿಕ) 156 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 11.5 ರಷ್ಟು  ಹೆಚ್ಚಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸಿವೆ. ಕಳೆದ ವರ್ಷ ಡಿಸೆಂಬರ್ ನಲ್ಲಿದ್ದ ಸಾಲಕ್ಕಿಂತ ಶೇ. 5 ರಷ್ಟು  ಹೆಚ್ಚಾಗಿದೆ. 

ಮಾರ್ಚ್ 2023 ರ ಅಂತ್ಯದಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಾಲಗಳಲ್ಲಿ ಶೇ.  95.2 ರಷ್ಟು ದೇಶೀಯ ಕರೆನ್ಸಿಯಲ್ಲಿ ಗುರುತಿಸಲ್ಪಟ್ಟಿದ್ದರೆ,  ಬಾಹ್ಯ ಸಾಲವು ಶೇ.4.8 ರಷ್ಟಿದೆ. ಮಾರ್ಚ್ 2023 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಬಾಹ್ಯ ಸಾಲವು ಪ್ರಸ್ತುತದಲ್ಲಿನ ವಿನಿಮಯ ದರದಲ್ಲಿ ರೂ. 7.5 ಲಕ್ಷ ಕೋಟಿಗಳಷ್ಟಿತ್ತು.

ಕೇಂದ್ರ ಸರ್ಕಾರದ ಒಟ್ಟು ಸಾಲವು ಆಂತರಿಕ ಸಾಲ, ಬಾಹ್ಯ ಸಾಲ ಮತ್ತು ಸಣ್ಣ ಉಳಿತಾಯ ಠೇವಣಿಗಳು, ರಾಜ್ಯ ಭವಿಷ್ಯ ನಿಧಿ ಇನ್ನಿತರ ಸಾಲವನ್ನು ಒಳಗೊಂಡಂತೆ 156 ಲಕ್ಷ ಕೋಟಿಯಾಗಿದೆ.  ಕೇಂದ್ರ ಸರ್ಕಾರದ ಸಾಲ, ಜಿಡಿಪಿ ಅನುಪಾತವು ಸುಮಾರು ಶೇ. 57 ರಷ್ಟಾಗಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕಿಂತ ಶೇ. 59 ರಷ್ಟು ಕಡಿಮೆಯಾಗಿದೆ.  2020-21 ರಲ್ಲಿ ಶೇ.60ಕ್ಕೆ ಏರಿದ ನಂತರ  ಕೇಂದ್ರ ಸರ್ಕಾರದ ಸಾಲದ ಅನುಪಾತ ಕುಸಿಯಲು ಪ್ರಾರಂಭಿಸಿದೆ.

2020-21ರಲ್ಲಿ ಸರ್ಕಾರದ ಸಾಲವು (ಕೇಂದ್ರ ಮತ್ತು ರಾಜ್ಯ ಸರ್ಕಾರ) ಶೇ. 90 ರಷ್ಟಿದೆ ಎಂದು ಒಂದೆರಡು ವರ್ಷಗಳ ಹಿಂದೆ ಕಳವಳ ವ್ಯಕ್ತಪಡಿಸಲಾಗಿತ್ತು. ಆದರೆ ಎರಡು ವರ್ಷಗಳ ನಂತರ ಜಿಡಿಪಿ ಹೆಚ್ಚಳದಿಂದ ಸಾಲದ ಪ್ರಮಾಣ ಕುಸಿದಿದೆ ಎನ್ನಲಾಗಿತ್ತು. ದೇಶದಲ್ಲಿ ಜೆಡಿಪಿ ವೇಗವಾಗಿ ಬೆಳೆಯುತ್ತಿರುವುದು ಸಾಲದ ಕುಸಿತಕ್ಕೆ ಪ್ರಮುಖ ಕಾರಣ ಎಂದು ಇತ್ತೀಚಿಗೆ ರೇಟಿಂಗ್ ಏಜೆನ್ಸಿ ಮೂಡೀಸ್ ಹೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com