ಹಕ್ಕಿಯಿಂದ ಮಿನುಗುತ್ತಿರುವ x ಗೆ ಬದಲಾದ ಟ್ವಿಟರ್ ಲೋಗೋ
ಹಕ್ಕಿಯಿಂದ ಮಿನುಗುತ್ತಿರುವ x ಗೆ ಬದಲಾದ ಟ್ವಿಟರ್ ಲೋಗೋ

ಟ್ವಿಟರ್ ಲೋಗೋ ಬದಲಾವಣೆ, ನೀಲಿ ಹಕ್ಕಿ ಬದಲಾಗಿ ಬಂತು 'X' ಹೊಸ ಲೋಗೊ!

ಸುಪ್ರಸಿದ್ಧ ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಟ್ವಿಟರ್ ನ 'ನೀಲಿ ಹಕ್ಕಿಯ ಲೋಗೋ ಬದಲಾಗಿದ್ದು, X ಹೊಸ ಲೋಗೋ ಕಾಣಿಸಿಕೊಳ್ಳುತ್ತಿದೆ.

ನವದೆಹಲಿ: ಸುಪ್ರಸಿದ್ಧ ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಟ್ವಿಟರ್ ನ 'ನೀಲಿ ಹಕ್ಕಿಯ ಲೋಗೋ ಬದಲಾಗಿದ್ದು, X ಹೊಸ ಲೋಗೋ ಕಾಣಿಸಿಕೊಳ್ಳುತ್ತಿದೆ. ಈ ಸಂಬಂಧ ಭಾನುವಾರ ತಡರಾತ್ರಿಯೇ ಟ್ವೀಟ್ ಮಾಡಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್  ಮಿನುಗುತ್ತಿರುವ X ಚಿತ್ರವನ್ನು  ಫೋಸ್ಟ್ ಮಾಡಿದ್ದರು. 

ಕಳೆದ ವರ್ಷವಷ್ಟೇ ಟ್ವಿಟರ್ ನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಎಲಾನ್ ಮಸ್ಕ್, ಪ್ಲಾಟ್ ಫಾರ್ಮ್ ನಲ್ಲಿ ಹಲವು ಬದಲಾವಣೆ ಮಾಡುತ್ತಿದ್ದು, 1999ರಲ್ಲಿ ಸ್ಥಾಪಿಸಲಾದ X. COM ಕಂಪನಿಯ ಹೆಸರನ್ನು ಉಲ್ಲೇಖಿಸಿ, ಶೀಘ್ರದಲ್ಲಿಯೇ ಟ್ವಿಟರ್ ಲೋಗೋ ಬದಲಾಗಲಿದೆ ಎಂದು ಹೇಳಿದ್ದರು.

ಶೀಘ್ರದಲ್ಲೇ ನಾವು ಟ್ವಿಟರ್ ಬ್ರ್ಯಾಂಡ್ ಮತ್ತು ಎಲ್ಲಾ ಹಕ್ಕಿಗಳಿಗೆ ವಿದಾಯ ಹೇಳುತ್ತೇವೆ ಎಂದು ಎಲಾನ್ ಮಸ್ಕ್ ಇತ್ತೀಚಿಗೆ ಮಾಡಿದ್ದ ಟ್ಲೀಟ್ ಗೆ ಅನೇಕರು ಲೋಗೋವನ್ನು ಬದಲಾಯಿಸಬೇಡಿ ಎಂದು ಕೇಳಿಕೊಂಡಿದ್ದರು. 

Related Stories

No stories found.

Advertisement

X
Kannada Prabha
www.kannadaprabha.com