5G ಪ್ರಯಾಣದಲ್ಲಿ ವೊಡಾಫೋನ್, ಬಿಎಸ್‌ಎನ್‌ಎಲ್ ಹಿಂದೆ; ಜಿಯೋ, ಏರ್‌ಟೆಲ್ ತುಂಬಾ ಮುಂದೆ!

ಟೆಲಿಕಾಂ ಸೇವಾ ಪೂರೈಕೆದಾರರು ಜುಲೈ 7, 2023ರ ವರೆಗೆ ದೇಶದಾದ್ಯಂತ ಸುಮಾರು 2,81,948 5G ಟವರ್‌ಗಳನ್ನು ಸ್ಥಾಪಿಸಿವೆ. ಆದರೆ ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ಮಾತ್ರ ಈ 5ಜಿ ಸೇವೆಯಿಂದ ಇನ್ನೂ ದೂರವೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರರು ಜುಲೈ 7, 2023ರ ವರೆಗೆ ದೇಶದಾದ್ಯಂತ ಸುಮಾರು 2,81,948 5G ಟವರ್‌ಗಳನ್ನು ಸ್ಥಾಪಿಸಿವೆ. ಆದರೆ ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ಮಾತ್ರ ಈ 5ಜಿ ಸೇವೆಯಿಂದ ಇನ್ನೂ ದೂರವೇ ಉಳಿದಿವೆ.

ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ(ವಿಐಎಲ್) ಮತ್ತು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್‌ಎನ್‌ಎಲ್) 5G ವ್ಯವಸ್ಥೆಯಿಂದ ಬಹುತೇಕ ದೂರ ಉಳಿದಿವೆ.

ದೇಶದ ಅತಿದೊಡ್ಡ ಟೆಲಿಕಾಂ ರಿಲಯನ್ಸ್ ಜಿಯೋ 228,689 BTS ಘಟಕಗಳೊಂದಿಗೆ ಗರಿಷ್ಠ ಸಂಖ್ಯೆಯ ಟವರ್‌ಗಳನ್ನು ನಿಯೋಜಿಸಿದೆ. ನಂತರ ಭಾರ್ತಿ ಏರ್‌ಟೆಲ್ 53,223 ಟವರ್‌ಗಳನ್ನು ಹೊಂದಿದೆ. VIL ಕೇವಲ 36 5G ಟವರ್‌ಗಳನ್ನು ದೆಹಲಿ ಮತ್ತು ಪುಣೆಯಲ್ಲಿ, ಅದು ಪ್ರಾಯೋಗಿಕ ಆಧಾರದ ಮೇಲೆ ನಿಯೋಜಿಸಿದೆ.

ಅಕ್ಟೋಬರ್ 2022 ರಿಂದ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಮತ್ತು ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್ ದೇಶದಲ್ಲಿ ತಮ್ಮ 5G ನೆಟ್‌ವರ್ಕ್‌ಗಳನ್ನು ಅತ್ಯಂತ ವೇಗವಾಗಿ ಸ್ಥಾಪಿಸುತ್ತಿವೆ. ಆದರೆ ವಿಐಎಲ್ 5G ರೇಸ್‌ನಿಂದ ಬಹುತೇಕ ಕಾಣೆಯಾಗಿದೆ.

ಹಣದ ಕೊರತೆ ಮತ್ತು ಹಲವಾರು ಇತರ ಸಮಸ್ಯೆಗಳನ್ನು ವಿಐಎಲ್ ಉಲ್ಲೇಖಿಸಿದ್ದು, 5G ರೋಲ್‌ಔಟ್‌ಗಾಗಿ ಮಾರಾಟಗಾರರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದೆ. 

ಅದೇ ರೀತಿ, ಸರ್ಕಾರಿ ಸ್ವಾಮ್ಯದ ಟೆಲಿಕಾಂ BSNL ತನ್ನ 4G ನೆಟ್‌ವರ್ಕ್‌ಗಾಗಿ ಇನ್ನೂ ಪ್ರಯೋಗಗಳನ್ನು ನಡೆಸುತ್ತಿದೆ. ಬಿಎಸ್ಎನ್ಎಲ್ ಇನ್ನೂ ವಾಣಿಜ್ಯ 4G ಸೇವೆಗಳನ್ನು ಪ್ರಾರಂಭಿಸಿಲ್ಲ. ಆದಾಗ್ಯೂ, ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು, BSNL ತನ್ನ 4G ಸೇವೆಯನ್ನು ಪ್ರಾರಂಭಿಸಿದ ತಕ್ಷಣವೇ 5G ನೆಟ್‌ವರ್ಕ್‌ಗೆ ಬದಲಾಯಿಸುತ್ತದೆ ಎಂದು ಈ ಹಿಂದೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com