ಐಟಿ ರಿಟರ್ನ್ಸ್ ಸಲ್ಲಿಕೆ: ತೆರಿಗೆದಾರರು ಗಮನದಲ್ಲಿಡಬೇಕಾದ ಪ್ರಮುಖ ಅಂಶಗಳು.....

ತೆರಿಗೆ ಲೆಕ್ಕಪರಿಶೋಧನೆಗೆ ಒಳಪಡದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಆದ್ದರಿಂದ ಐಟಿಆರ್ ಸಲ್ಲಿಕೆ ಮಾಡದೇ ಇರುವವರು ದಂಡ ಪವಾತಿಸುವುದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಐಟಿ ರಿಟರ್ನ್ಸ್ ಸಲ್ಲಿಕೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗುತ್ತದೆ. 
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ (ಸಂಗ್ರಹ ಚಿತ್ರ)
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ (ಸಂಗ್ರಹ ಚಿತ್ರ)

ತೆರಿಗೆ ಲೆಕ್ಕಪರಿಶೋಧನೆಗೆ ಒಳಪಡದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಆದ್ದರಿಂದ ಐಟಿಆರ್ ಸಲ್ಲಿಕೆ ಮಾಡದೇ ಇರುವವರು ದಂಡ ಪವಾತಿಸುವುದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಐಟಿ ರಿಟರ್ನ್ಸ್ ಸಲ್ಲಿಕೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗುತ್ತದೆ. 

ನೀವು ಐಟಿ ರಿಟರ್ನ್ಸ್ ಸಲ್ಲಿಕೆಗೆ ತೆರಿಗೆ ತಜ್ಞರ ಸಹಾಯ ಪಡೆಯುತ್ತೀರೋ ಇಲ್ಲವೋ ಆದರೆ ರಿಟರ್ನ್ಸ್ ಪ್ರಕ್ರಿಯೆಯ ಮೂಲಭೂತ ಅಂಶಗಳನ್ನು ತಿಳಿದಿರುವುದು ಒಳಿತು.
 
ಮೊದಲನೆಯದ್ದಾಗಿ ವ್ಯಕ್ತಿಯೋರ್ವನಿಗೆ 4 ಐಟಿಆರ್ ಫಾರ್ಮ್ ಗಳು ಅನ್ವಯಿಸುತ್ತದೆ. ಉದಾಹರಣೆಗೆ ವ್ಯಕ್ತಿಯೋರ್ವ ವೇತನ ಪಡೆಯುತ್ತಿದ್ದರೆ ಅಥವಾ ಪಿಂಚಣಿದಾರಾಗಿದ್ದುಕೊಂಡು ಒಂದು ಮನೆಯ ಆಸ್ತಿಯಿಂದ ಆದಾಯ ಹಾಗೂ ವಾರ್ಷಿಕ 50 ಲಕ್ಷ ರೂಪಾಯಿ ಬಡ್ಡಿಯ ಆದಾಯದ ರೀತಿಯ ಮೂಲಗಳನ್ನು ಹೊಂದಿದ್ದರೆ, ಇಂತಹ ವ್ಯಕ್ತಿಗಳಿಗೆ ಫಾರ್ಮ್ 1 ಅನ್ವಯವಾಗಲಿದೆ.

ಒಂದು ವೇಳೆ ವೇತನ, ಪಿಂಚಣಿ ಹಾಗೂ ಇತರ ಮೂಲಗಳಿಂದ ವ್ಯಕ್ತಿಯೋರ್ವನ ಆದಾಯ 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿದ್ದಲ್ಲಿ ಐಟಿಆರ್ ಫಾರ್ಮ್ 2 ಅನ್ವಯವಾಗಲಿದೆ. ಮತ್ತೊಂದೆಡೆ, ಒಬ್ಬ ವ್ಯಕ್ತಿ ತನ್ನ ಆದಾಯದ ಮೂಲವಾಗಿ ವ್ಯಾಪಾರ ಲಾಭದೊಂದಿಗೆ ಸ್ವಯಂ-ಉದ್ಯೋಗಿಯಾಗಿದ್ದರೆ, ಅವನು/ಅವಳು ITR ಫಾರ್ಮ್ 3 ಅನ್ನು ಬಳಸಿಕೊಂಡು ರಿಟರ್ನ್ಸ್ ಸಲ್ಲಿಸಬಹುದಾಗಿದೆ.  ಸಂಬಳ ಪಡೆಯುವ ವ್ಯಕ್ತಿ ಜೊತೆಗೆ ವ್ಯಾಪಾರ ಆದಾಯವನ್ನು ಹೊಂದಿದ್ದರೆ ITR3 ಫಾರ್ಮ್ ಗೆ ಹೋಗಬಹುದಾಗಿದೆ. ಪೂರ್ವಭಾವಿ ತೆರಿಗೆಯನ್ನು ಆಯ್ಕೆ ಮಾಡಿಕೊಳ್ಳುವವರು ಐಟಿಆರ್ 4 ಫಾರ್ಮ್ ನ್ನು ಬಳಕೆ ಮಾಡಬಹುದಾಗಿದೆ.

ಫಾರ್ಮ್ 16/A ಹಾಗೂ 26AS 

ಮೊದಲ ಹಂತವೇನೆಂದರೆ ಅದು ಟಿಡಿಎಸ್ ಪ್ರಮಾಣಪತ್ರ (ಫಾರ್ಮ್ 16/ ಫಾರ್ಮ್ 16A), ಬಡ್ಡಿ ಪ್ರಮಾಣಪತ್ರ (ಪಾವತಿಸಿರುವುದು ಹಾಗೂ ಸ್ವೀಕರಿಸಿರುವುದು), ಗೃಹ ಸಾಲದ ಸ್ಟೇಟ್ ಮೆಂಟ್, ಬ್ಯಾಂಕ್ ಸ್ಟೇಟ್ಮೆಂಟ್, ಫಾರ್ಮ್ 26AS, ಬಂಡವಾಳ ಲಾಭದ ಸ್ಟೇಟ್ ಮೆಂಟ್ ಮತ್ತು ಆಧಾರ್ ಕಾರ್ಡ್ ನಂತಹ ದಾಖಲೆಗಳನ್ನು ಸಿದ್ಧವಾಗಿರಿಸಿಕೊಳ್ಳುವುದು. ಈ ದಾಖಲೆಗಳ ಸಹಾಯದಿಂದ ನೀವು ನಿಮ್ಮ ಒಟ್ಟು ವೇತನ ಹಾಗೂ ಟಿಡಿಎಸ್ ಎಷ್ಟು ಪಾವತಿಸಲಾಗಿದೆ ಎಂಬುದನ್ನು ತಿಳಿಯಬಹುದಾಗಿದೆ.

ಫಾರ್ಮ್ 16 ಟಿಡಿಎಸ್ ಪ್ರಮಾಣಪತ್ರವಾಗಿದ್ದು, ಇದನ್ನು ಉದ್ಯೋಗದ ಸ್ಥಳದಲ್ಲಿ ನೀಡಲಾಗುತ್ತದೆ ಹಾಗೂ ಇದು ನಂತರದ ಹಂತದಲ್ಲಿ ಇದು ತೆರಿಗೆ ಪಾವತಿಗೆ ಪುರಾವೆಯಾಗಿ ಕಾರ್ಯನಿರ್ವಹಿಸಲಿದೆ. ಫಾರ್ಮ್ 16 ನಲ್ಲಿ ಪರ್ಕ್ವಿಸೈಟ್‌ಗಳು, ಮನೆ ಬಾಡಿಗೆ ಭತ್ಯೆ, ವೃತ್ತಿಪರ ತೆರಿಗೆ ಇತ್ಯಾದಿ ಸೇರಿದಂತೆ ಒಟ್ಟು ಸಂಬಳದ ವಿವರಗಳನ್ನು ಒಳಗೊಂಡಿರುತ್ತದೆ. 

ತೆರಿಗೆ ತಜ್ಞರ ಪ್ರಕಾರ, ತೆರಿಗೆದಾರರು ತಮ್ಮ ಸಂಬಳದ ಎಲ್ಲಾ ಅಂಶಗಳಾದ ಮೂಲ ವೇತನ, ಭತ್ಯೆಗಳು, ಪರ್ಕ್ವಿಸೈಟ್‌ಗಳು, ಬೋನಸ್‌ಗಳು ಇತ್ಯಾದಿಗಳನ್ನು ಗಮನಿಸಬೇಕು.

ಫಾರ್ಮ್ 16 A ‘ಸಂಬಳವನ್ನು ಹೊರತುಪಡಿಸಿ ಆದಾಯ’ದ ಮೇಲಿನ ಟಿಡಿಎಸ್ ಗೂ ಅನ್ವಯವಾಗಲಿದ್ದು, ಬ್ಯಾಂಕ್ ಸ್ಥಿರ ಠೇವಣಿಗಳಿಂದ ಬಡ್ಡಿ ಆದಾಯದ ಮೇಲೆ TDS ಕಡಿತಗೊಳಿಸಿದಾಗ, ವಿಮಾ ಕಮಿಷನ್‌ನಲ್ಲಿ ಟಿಡಿಎಸ್ ಕಡಿತಗೊಳಿಸಲಾದಾಗ, ಬಾಡಿಗೆ ರಸೀದಿಗಳಲ್ಲಿ ಟಿಡಿಎಸ್ ಕಡಿತಗೊಳಿಸಲಾದಾಗ ಫಾರ್ಮ್ 16A ನ್ನು ನೀಡಲಾಗುತ್ತದೆ.

"ಮನೆ ಬಾಡಿಗೆ ಭತ್ಯೆ (HRA), ಸ್ಟ್ಯಾಂಡರ್ಡ್ ಡಿಡಕ್ಷನ್, ವೃತ್ತಿಪರ ತೆರಿಗೆ, ಇತ್ಯಾದಿಗಳಂತಹ ಅನ್ವಯವಾಗುವ ಕಡಿತಗಳನ್ನು ಕಳೆದ ನಂತರ, ಒಬ್ಬ ವ್ಯಕ್ತಿಗೆ ತೆರಿಗೆಗೆ ಒಳಪಡುವ ಆದಾಯದ ಲೆಕ್ಕ ಸಿಗುತ್ತದೆ ಎನ್ನುತ್ತಾರೆ ಚಾರ್ಟರ್ಡ್ ಅಕೌಂಟೆಂಟ್ ಅತುಲ್ ಗೋಯೆಲ್. ಬಡ್ಡಿ ಆದಾಯ, ಲಾಭಾಂಶಗಳು ಅಥವಾ ಇತರ ಮೂಲಗಳಿಂದ ಬರುವ ಆದಾಯವನ್ನು ಸೇರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಇನ್ನು 26AS ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಿಂದ ಪಡೆಯಬಹುದಾಗಿದೆ. ಇದು ವ್ಯಕ್ತಿಯ PAN (ಶಾಶ್ವತ ಖಾತೆ ಸಂಖ್ಯೆ) ಗೆ ಸಂಬಂಧಿಸಿದಂತೆ ಕಡಿತಗೊಳಿಸಿದ ಮತ್ತು ಠೇವಣಿ ಮಾಡಿದ ಎಲ್ಲಾ ತೆರಿಗೆಗಳ ಏಕೀಕೃತ ಸ್ಟೇಟ್ಮೆಂಟ್ ಆಗಿದೆ. ತೆರಿಗೆದಾರ ತನ್ನ ಒಟ್ಟು ವೇತನ, ಫಾರ್ಮ್ 16 ನಲ್ಲಿ ಉಲ್ಲೇಖಗೊಂಡಿರುವ ಟಿಡಿಎಸ್ ಗಳು 26AS ಜೊತೆಗೆ ಹೊಂದಾಣಿಕೆಯಾಗಬೇಕು. ಮತ್ತೆ ಮುಂದಿನ ಹಂತಕ್ಕೆ ಹೋಗುವ ಮೊದಲು ಇದು ವಾರ್ಷಿಕ ಮಾಹಿತಿ ಸ್ಟೇಟ್ ಮೆಂಟ್ ಜೊತೆಗೂ ಹೊಂದಾಣಿಕೆಯಾಗಬೇಕಾಗುತ್ತದೆ. 

ತೆರಿಗೆ ಸಲ್ಲಿಸುವಿಕೆ ವೇಳೆ ಅರ್ಥಮಾಡಿಕೊಳ್ಳಬೇಕಿರುವ ಅಂಶಗಳು 

  • ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೂಳ್ಳುವವರು ರಿಟರ್ನ್ಸ್ ನ್ನು ಜುಲೈ 31, 2023 ರ ವೇಳೆಗೆ ಸಲ್ಲಿಸಬೇಕಾಗುತ್ತದೆ. 
  • ವ್ಯಾಪಾರದ ಆದಾಯವು ಅನ್ವಯವಾಗುವ ಸ್ಲ್ಯಾಬ್ ದರಗಳಲ್ಲಿ ತೆರಿಗೆಗೆ ಒಳಪಡುತ್ತದೆ ಮತ್ತು ಅಲ್ಪಾವಧಿಯ ಬಂಡವಾಳ ಲಾಭಗಳು 15% ತೆರಿಗೆಗೆ ಒಳಪಡುತ್ತವೆ.
  • ಫಾರ್ಮ್ 26AS, ತೆರಿಗೆ ಕಡಿತಗೊಂಡಿರುವ ಹಾಗೂ ಜಮಾ ಆಗಿರುವ ಏಕೀಕೃತ ಸ್ಟೇಟ್ ಮೆಂಟ್ ಆಗಿದೆ. 
  • ಸ್ಥಿರ ಠೇವಣಿಗಳಿಂದ ಬಡ್ಡಿ ಆದಾಯದ ಮೇಲೆ ಬ್ಯಾಂಕ್ TDS ಕಡಿತಗೊಳಿಸಿದಾಗ ಫಾರ್ಮ್ 16A ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com