ನೈರುತ್ಯ ರೈಲ್ವೆ ವಲಯವು ಈ ಆರ್ಥಿಕ ವರ್ಷದಲ್ಲಿ ಮಾರ್ಚ್ 22ರ ಅಂತ್ಯದವರೆಗೆ ಅತಿಹೆಚ್ಚು ಅಂದರೆ ಒಟ್ಟು ರೂ.7,771 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಗೆ ರೂ.6,133 ಕೋಟಿ (2021-22) ಆದಾಯ ಸಂಗ್ರಹವಾಗಿತ್ತು.
ಪ್ರಯಾಣಿಕರ ಆದಾಯ 2019-20ರಲ್ಲಿ ರೂ.2,124 ಕೋಟಿ ಗಳಿಸಿದ್ದು, ಮಾರ್ಚ್ 22, 2023 ರವರೆಗೆ ರೂ.2,686 ಕೋಟಿ ಆದಾಯ ಗಳಿಸುವ ಮೂಲಕ ರೂ.562 ಕೋಟಿ 11.10ರಷ್ಟು ಹೆಚ್ಚು ಗಳಿಕೆ ಮಾಡಿ ಹೊಸ ದಾಖಲೆ ಮಾಡಲಾಗಿದೆ.
2021-22 ರಲ್ಲಿ ನೈರುತ್ಯ ರೈಲ್ವೆಯ ಸರಕು ಸಾಗಣೆ ಆದಾಯದಲ್ಲಿ ರೂ.4,189 ಕೋಟಿ ಆದಾಯ ಗಳಿಸಿತ್ತು. ಮಾರ್ಚ್ 22, 2023 ರವರೆಗಿನ ಈ ಹಣಕಾಸು ವರ್ಷದಲ್ಲಿ ರೂ.4,514 ಕೋಟಿ ಗಳಿಸುವ ಮೂಲಕ ಶೇ. 7.75 ರಷ್ಟು ಹೆಚ್ಚಾಗಿದೆ. 2021-22ರ ಅವಧಿಯಲ್ಲಿ ರೂ.168 ಕೋಟಿ ಇದ್ದ ಆದಾಯ ಈ ವರ್ಷ ರೂ.306 ಕೋಟಿ ಆದಾಯವನ್ನು ಗಳಿಸುವ ಮೂಲಕ ಹೊಸ ದಾಖಲೆ ಮಾಡಲಾಗಿದೆ.
ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್, ಈ ಸಾಧನೆಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಅಭಿನಂದಿಸಿದ್ದಾರೆ. ಜೊತೆಗೆ ರೈಲ್ವೆಯ ಗ್ರಾಹಕರಿಗೂ ಕೂಡಾ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
Advertisement