Aadhaar-PAN Linking: ಆಧಾರ್-ಪ್ಯಾನ್ ಕಡ್ಡಾಯ ಜೋಡಣೆಯಿಂದ ಯಾರಿಗೆ ವಿನಾಯಿತಿ? ಇಲ್ಲಿದೆ ಮಾಹಿತಿ...

Aadhar-PAN ಕಾರ್ಡ್ ಜೋಡಣೆಗೆ ಮಾ.31, 2023 ರಂದು ಕೊನೆಯ ದಿನವಾಗಿದ್ದು, ಈ ಅವಧಿಯೊಳಗಾಗಿ ಆಧಾರ್ ಜೊತೆಗೆ ಜೋಡಣೆಯಾಗದ PAN ನಿಷ್ಕ್ರಿಯಗೊಳ್ಳಲಿದೆ. 
ಆಧಾರ್-ಪ್ಯಾನ್ ಜೋಡಣೆ
ಆಧಾರ್-ಪ್ಯಾನ್ ಜೋಡಣೆ
Updated on

ನವದೆಹಲಿ: Aadhar-PAN ಕಾರ್ಡ್ ಜೋಡಣೆಗೆ ಮಾ.31, 2023 ರಂದು ಕೊನೆಯ ದಿನವಾಗಿದ್ದು, ಈ ಅವಧಿಯೊಳಗಾಗಿ ಆಧಾರ್ ಜೊತೆಗೆ ಜೋಡಣೆಯಾಗದ PAN ನಿಷ್ಕ್ರಿಯಗೊಳ್ಳಲಿದೆ. 

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯ ಸುತ್ತೋಲೆಯ ಪ್ರಕಾರ, ಒಮ್ಮೆ ಯಾವುದೇ ವ್ಯಕ್ತಿಯ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡಲ್ಲಿ ಆತ ಐಟಿ ಕಾಯ್ದೆಯಡಿ ಬರುವ ಎಲ್ಲಾ ಪರಿಣಾಮಗಳನ್ನೂ, ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.

ಮೊದಲನೆಯದ್ದಾಗಿ ನಿಷ್ಕ್ರಿಯಗೊಂಡ ಪ್ಯಾನ್ ಇಟ್ಟುಕೊಂಡು ಐಟಿ ರಿಟರ್ನ್ಸ್ ಸಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಬಾಕಿ ಇರುವ ರಿಟನ್ಸ್ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ತತ್ಪರಿಣಾಮವಾಗಿ ಬಾಕಿ ಇರುವ ರೀಫಂಡ್ ಗಳೂ ಲಭ್ಯವಾಗುವುದಿಲ್ಲ. ಇವೆಲ್ಲದರ ಪರಿಣಾಮ ಹೆಚ್ಚಿನ ದರದಲ್ಲಿ ತೆರಿಗೆ ಕಡಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಆಧಾರ್- ಪ್ಯಾನ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ.

ಆದಾಗ್ಯೂ ಕೆಲವು ವರ್ಗದವರಿಗೆ ಪ್ಯಾನ್- ಆಧಾರ್ ಜೋಡಣೆಯಿಂದ ವಿನಾಯಿತಿ ಲಭ್ಯವಿದೆ. ಈ ಕೆಳಕಂಡ ವ್ಯಾಪ್ತಿಗೆ ಒಳಪಡುವವರಿಗೆ ಪ್ಯಾನ್- ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಿರುವುದಿಲ್ಲ.

  • ಸಿಬಿಡಿಟಿಯ 2017 ರ ಅಧಿಸೂಚನೆಯಡಿಯ ಪ್ರಕಾರ ಈ ಕೆಳಕಂಡ ರೀತಿಯ ವ್ಯಕ್ತಿಗಳಿಗೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿರುವುದಿಲ್ಲ.
  • ಅಸ್ಸಾಂ, ಜಮ್ಮು-ಕಾಶ್ಮೀರ, ಮೇಘಾಲಯದ ನಿವಾಸಿಗಳಿಗೆ ಆಧಾರ್- ಪ್ಯಾನ್ ಜೋಡಣೆ ಕಡ್ಡಾಯವಲ್ಲ.
  • 1961 ರ ಆದಾಯ ತೆರಿಗೆ ಇಲಾಖೆಯ ಪ್ರಕಾರ ಅನಿವಾಸಿ ಭಾರತೀಯ(ಎನ್ಆರ್ ಐ) ರಿಗೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ.
  • ಕಳೆದ ವರ್ಷದ ಅವಧಿಯಲ್ಲಿ 80 ವರ್ಷ ಅಥವಾ ಅದಕ್ಕಿಂತಲೂ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ, ಅಂತಹ ವ್ಯಕ್ತಿಗಳ ಆಧಾರ್- ಪ್ಯಾನ್ ಜೋಡಣೆ ಕಡ್ಡಾಯವಾಗಿರುವುದಿಲ್ಲ.
  • ಭಾರತದ ಪ್ರಜೆಯಲ್ಲದ ವ್ಯಕ್ತಿಗೆ ಪ್ಯಾನ್- ಆಧಾರ್ ಜೋಡಣೆ ಕಡ್ಡಾಯವಲ್ಲ.
  • ಮಾ.31, 2022 ರಕ್ಕೂ ಮುನ್ನ ಆಧಾರ್-ಪ್ಯಾನ್ ಜೋಡಣೆ ಉಚಿತವಾಗಿತ್ತು. ಏ.1, 2022 ರಿಂದ 500 ರೂಪಾಯಿಗಳ ದಂಡ ವಿಧಿಸಲಾಗಿತ್ತು ಹಾಗೂ ಜುಲೈ, 1, 2022 ರಿಂದ 1,000 ರೂಪಾಯಿ ದಂಡ ವಿಧಿಸಲಾಗುತ್ತಿದೆ.
     

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com