
ನವದೆಹಲಿ: ಹಲವು ವಾಟ್ಸಾಪ್ ಬಳಕೆದಾರರು ಅಪರಿಚಿತ ಅಂತರಾಷ್ಟ್ರೀಯ ನಂಬರ್ ನಿಂದ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಸ್ವೀಕರಿಸುತ್ತಿರುವುದಾಗಿ ವರದಿ ಮಾಡಿದ್ದಾರೆ. ಸ್ಕಾಮರ್ ಗಳು ಹೇಗೆ ತಮ್ಮ ಫೋನ್ ನಂಬರ್ ಪಡೆದುಕೊಂಡಿದ್ದಾರೆ ಎಂಬುದರ ಕುರಿತ ಬಳಕೆದಾರರಿಗೆ ಅರ್ಥವಾಗುತ್ತಿಲ್ಲ.
ಆಡಿಯೋ ಮತ್ತು ವೀಡಿಯೋ ಇರುವ ಈ ಕರೆಗಳು ಹೆಚ್ಚಾಗಿ ಇಥಿಯೋಪಿಯಾ (+251), ಮಲೇಷ್ಯಾ (+60), ಇಂಡೋನೇಷ್ಯಾ (+62), ಕೀನ್ಯಾ (+254), ವಿಯೆಟ್ನಾಂ (+84) ಮತ್ತು ಇತರ ದೇಶಗಳಾಗಿವೆ. ಆದರೆ ಈ ವಾಟ್ಸಾಪ್ ಕರೆಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುವುದರಿಂದ ಆ ದೇಶದವು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈ ಅಂತರಾಷ್ಟ್ರೀಯ ಸಂಖ್ಯೆಗಳನ್ನು ಏಜೆನ್ಸಿಗಳು ಆ ದೇಶದಲ್ಲಿ ಸ್ಕ್ಯಾಮರ್‌ಗಳಿಗೆ ಮಾರಾಟ ಮಾಡುತ್ತವೆ ಎಂದು ವರದಿಯಾಗಿದೆ.
ವಾಟ್ಸಾಪ್ ನಿಂದ ಅಂತಾರಾಷ್ಟ್ರೀಯ ಮಿಸ್ಡ್ ಕಾಲ್ ಬಂದಿದ್ದು, ಇದು ಹೊಸ ಹಗರಣವೇ? ಎಂದು ಟ್ವಿಟ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ವಾಟ್ಸಾಪ್ ಸಂದೇಶ ಮೂಲಕ ಜಾಬ್ ಆಫರ್ ಪಡೆದಿದ್ದಾರೆ. ಸ್ಕಾಮರ್ ಪ್ರತಿಷ್ಟಿತ ಕಂಪನಿಯೊಂದರ ಪ್ರತಿನಿಧಿಯಂತೆ ಫೋಸ್ ನೀಡಿದ್ದು, ಫಾರ್ಟ್ ಟೈಮ್ ವರ್ಕ್ ಆಫರ್ ನೀಡಿದ್ದು, ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಹೇಳಿದ್ದಾರೆ.
ಈ ಸ್ಕ್ಯಾಮರ್‌ಗಳು ಆರಂಭದಲ್ಲಿ ಬಳಕೆದಾರರಿಗೆ ನೋಂದಣಿ ಶುಲ್ಕವಾಗಿ ಸಣ್ಣ ಮೊತ್ತವನ್ನು ಪಾವತಿಸಲು ಕೇಳುತ್ತಾರೆ. ನಂತರ ನೀಡಿದ ಕೆಲಸ ಪೂರ್ಣಗೊಳಿಸಿದ್ದಕ್ಕಾಗಿ ಸ್ಕ್ಯಾಮರ್‌ಗಳು ಒಂದು ಸಣ್ಣ ಬಹುಮಾನವನ್ನು ಕ್ರೆಡಿಟ್ ಮಾಡುತ್ತಾರೆ, ಇದು ಬಳಕೆದಾರರನ್ನು ನಂಬುವಂತೆ ಮಾಡುವುದಲ್ಲದೇ ದೊಡ್ಡ ಹಗರಣದಲ್ಲಿ ತಮ್ಮನ್ನು ತಾವು ಸಿಲುಕಿಕೊಳ್ಳುವಂತೆ ಮಾಡುತ್ತದೆ.
ಹಲವಾರು ಟ್ವಿಟರ್ ಬಳಕೆದಾರರು ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಸುರಕ್ಷಿತವಾಗಿರಲು ವಾಟ್ಸಾಪ್ ಬಳಕೆದಾರರು ಏನು ಮಾಡಬಹುದು?
ಸ್ಕಾಮರ್ ಗಳ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಅಪರಿಚಿತ ಅಂತರರಾಷ್ಟ್ರೀಯ ಸಂಖ್ಯೆಗಳಿಗೆ ಪ್ರತಿಕ್ರಿಯಿಸದಿರುವುದು, ಕರೆಗಳನ್ನು ನಿರ್ಲಕ್ಷಿಸುವುದು ಮತ್ತು ಸಂಖ್ಯೆಗಳನ್ನು ನಿರ್ಬಂಧಿಸಬೇಕು.
Advertisement