ಉತ್ತರಾಖಂಡ ಸುರಂಗ ನಿರ್ಮಾಣ ಸಂಸ್ಥೆಯೊಂದಿಗೆ ನಂಟು ನಿರಾಕರಿಸಿದ ಅದಾನಿ ಗ್ರೂಪ್

ಕಳೆದ 16 ದಿನಗಳಿಂದ 41 ಕಾರ್ಮಿಕರು ಸಿಕ್ಕಿಬಿದ್ದಿರುವ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ನಿರ್ಮಾಣದಲ್ಲಿ ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿಲ್ಲ ಎಂದು ಬಿಲಿಯನೇರ್ ಗೌತಮ್ ಅದಾನಿ ಅವರ ದಾನಿ ಗ್ರೂಪ್ ಸೋಮವಾರ ಸ್ಪಷ್ಟಪಡಿಸಿದೆ.
ಸಿಲ್ಕ್ಯಾರಾ ಸುರಂಗ ಕುಸಿತ
ಸಿಲ್ಕ್ಯಾರಾ ಸುರಂಗ ಕುಸಿತ

ನವದೆಹಲಿ: ಕಳೆದ 16 ದಿನಗಳಿಂದ 41 ಕಾರ್ಮಿಕರು ಸಿಕ್ಕಿಬಿದ್ದಿರುವ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ನಿರ್ಮಾಣದಲ್ಲಿ ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿಲ್ಲ ಎಂದು ಬಿಲಿಯನೇರ್ ಗೌತಮ್ ಅದಾನಿ ಅವರ ದಾನಿ ಗ್ರೂಪ್ ಸೋಮವಾರ ಸ್ಪಷ್ಟಪಡಿಸಿದೆ.

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕಂಪನಿಯಲ್ಲಿ ದಾನಿ ಗ್ರೂಪ್ ಯಾವುದೇ ಪಾಲನ್ನು ಹೊಂದಿಲ್ಲ ಅಥವಾ ಹೊಂದುವುದಿಲ್ಲ ಅದಾನಿ ಸಮೂಹದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಅದಾನಿ ಸಮೂಹ ಅಥವಾ ಅದರ ಯಾವುದೇ ಅಂಗಸಂಸ್ಥೆಗಳು ಸುರಂಗ ನಿರ್ಮಾಣದಲ್ಲಿ ಯಾವುದೇ ರೀತಿಯ ನೇರ ಅಥವಾ ಪರೋಕ್ಷವಾಗಿ ಭಾಗಿಯಾಗಿಲ್ಲ" ಎಂದು ಅದಾನಿ ಗ್ರೂಪ್ ಹೇಳಿದೆ.

ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಸುರಂಗದ ನಿರ್ಮಾಣ ಕಾರ್ಯವನ್ನು ನೋಡಿಕೊಳ್ಳುತ್ತಿದೆ. ಸುರಂಗ ನಿರ್ಮಾಣದಲ್ಲಿ ತೊಡಗಿರುವ ಆ ಕಂಪನಿಯಲ್ಲಿ ನಾವು ಯಾವುದೇ ಷೇರುಗಳನ್ನು ಹೊಂದಿಲ್ಲ ಅಥವಾ ಹೊಂದುವುದಿಲ್ಲ ಎಂದು ಅದಾನಿ ಗ್ರೂಪ್ ಸ್ಪಷ್ಪಪಡಿಸಿದೆ.

ನಮ್ಮ ಕಂಪನಿ ಹೆಸರನ್ನು ಸುರಂಗ ಕುಸಿತಕ್ಕೆ ಲಿಂಕ್ ಯಾವುದೇ "ನೀಚ ಪ್ರಯತ್ನಗಳನ್ನು" ನಾವು ಬಲವಾಗಿ ಖಂಡಿಸುತ್ತೇವೆ. "ಈ ಕಠಿಣ ಸಮಯದಲ್ಲಿ, ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಿಕ್ಕಿಬಿದ್ದ ಕಾರ್ಮಿಕರು ಮತ್ತು ಅವರ ಕುಟುಂದೊಂದಿಗೆ ಇವೆ" ಎಂದು ಅದಾನಿ ಗ್ರೂಪ್ ಹೇಳಿದೆ.

ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ನಿರ್ಮಿಸುತ್ತಿರುವ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗದ ಒಂದು ಭಾಗ, ನವೆಂಬರ್ 12 ರಂದು ಭೂಕುಸಿತದಿಂದ ಕುಸಿದು ಬಿದ್ದಿದ್ದು, ಪರಿಣಾಮ 41 ಕಾರ್ಮಿಕರು 260 ಮೀಟರ್‌ಗಳೊಳಗೆ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣೆಗಾಗಿ ಕಳೆದ 16 ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com