ಹಬ್ಬದ ಅವಧಿಯಲ್ಲಿ ಆಟೋಮೊಬೈಲ್ ಮಾರಾಟ ದಾಖಲೆಯ ಏರಿಕೆ: ಎಫ್ಎಡಿಎ

ಆಟೋಮೊಬೈಲ್ ಮಾರಾಟದಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಹಬ್ಬದ ಅವಧಿಯಲ್ಲಿ ಪ್ರಯಾಣಿಕ ವಿಭಾಗದ ಆಟೋಮೊಬೈಲ್ ಗಳಿಗೆ ಭಾರಿ ಬೇಡಿಕೆ ಬಂದಿತ್ತು ಎಂದು ಡೀಲರ್ಸ್ ಸಂಸ್ಥೆ ಎಫ್ಎಡಿಎ ಹೇಳಿದೆ. 
ಆಟೋಮೊಬೈಲ್
ಆಟೋಮೊಬೈಲ್

ನವದೆಹಲಿ: ಆಟೋಮೊಬೈಲ್ ಮಾರಾಟದಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಹಬ್ಬದ ಅವಧಿಯಲ್ಲಿ ಪ್ರಯಾಣಿಕ ವಿಭಾಗದ ಆಟೋಮೊಬೈಲ್ ಗಳಿಗೆ ಭಾರಿ ಬೇಡಿಕೆ ಬಂದಿತ್ತು ಎಂದು ಡೀಲರ್ಸ್ ಸಂಸ್ಥೆ ಎಫ್ಎಡಿಎ ಹೇಳಿದೆ. 

ಒಟ್ಟಾರೆ ಆಟೋಮೊಬೈಲ್ ಮಾರಾಟ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.19 ರಷ್ಟು ಏರಿಕೆಯಾಗಿದೆ ಎಂದು ಎಫ್ಎಡಿಎ ಮಾಹಿತಿ ನೀಡಿದೆ. 

ಟ್ರ್ಯಾಕ್ಟರ್ ಗಳನ್ನು ಹೊರತುಪಡಿಸಿ ಎಲ್ಲಾ ವಿಭಾಗಗಳ ಆಟೋಮೊಬೈಲ್ ಗಳ ಖರೀದಿ ಈ ಅವಧಿಯಲ್ಲಿ ಹೆಚ್ಚಾಗಿದೆ. ಕಳೆದ ವರ್ಷ 37, 93,584 ಯುನಿಟ್ ಗಳು ಮಾರಾಟವಾಗಿದ್ದರೆ, ಈ ವರ್ಷ 31,95,213 ಯುನಿಟ್ ಗಳು ಮಾರಾಟವಾಗಿದೆ. ಪ್ರಮುಖವಾಗಿ ದಸರಾದಿಂದ ಧಾಂತೆರಸ್ ಅವಧಿಯ 42 ದಿನಗಳ ಹಬ್ಬದ ಋತುವಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಕಳೆದ ವರ್ಷದ ಇದೇ ಅವಧಿ ಹೋಲಿಸಿದರೆ, ಶೇ.10 ರಷ್ಟು ಹೆಚ್ಚು ಅಂದರೆ 4,96,047 ಯುನಿಟ್ ಗಳಿಂದ 5,47,246 ಯುನಿಟ್ ಗಳಿಗೆ ಹೆಚ್ಚಳವಾಗಿದೆ.

"ನವರಾತ್ರಿ ಸಮಯದಲ್ಲಿ ಆರಂಭಿಕ ಕಳಪೆ ಪ್ರತಿಕ್ರಿಯೆಯ ಹೊರತಾಗಿಯೂ, ವಿಶೇಷವಾಗಿ ಪ್ರಯಾಣಿಕ ವಾಹನ ವಲಯದಲ್ಲಿ, ದೀಪಾವಳಿಯ ವೇಳೆಗೆ ಪರಿಸ್ಥಿತಿ ಸುಧಾರಿಸಿ ಶೇಕಡಾ 10 ರಷ್ಟು ಬೆಳವಣಿಗೆ ದರದೊಂದಿಗೆ ಕೊನೆಗೊಂಡಿದೆ" ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಎಡಿಎ) ಅಧ್ಯಕ್ಷ ಮನೀಶ್ ರಾಜ್ ಸಿಂಘಾನಿಯಾ ಹೇಳಿದ್ದಾರೆ. ಹಬ್ಬದ ಅವಧಿಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದ ಪಟ್ಟಿಯಲ್ಲಿ ಪ್ರಯಾಣಿಕ ವಿಭಾಗದ ವಾಹನಗಳ ನಂತರದ ಸ್ಥಾನದಲ್ಲಿ ಎಸ್ ಯುವಿಗಳಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಅದೇ ರೀತಿ, ದ್ವಿಚಕ್ರ ವಾಹನ ನೋಂದಣಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 21 ರಷ್ಟು ಏರಿಕೆಯಾಗಿದ್ದು, 20222 ರಲ್ಲಿ 23,96,665 ಯುನಿಟ್‌ಗಳಿಂದ ಈ ವರ್ಷ 28,93,107 ಯುನಿಟ್‌ಗಳಿಗೆ ಏರಿಕೆಯಾಗಿದೆ. "ಹಲವಾರು ವಿಭಾಗಗಳಲ್ಲಿ ದಾಖಲೆ ಮುರಿಯುವ ಮಾರಾಟ ವರದಿಯಾಗಿದೆ, ಗ್ರಾಮೀಣ ಪ್ರದೇಶಗಳು ವಿಶೇಷವಾಗಿ ದ್ವಿಚಕ್ರ ವಾಹನ ಖರೀದಿಯಲ್ಲಿ ಹೆಚ್ಚಳವಾಗಿದೆ" ಎಂದು ಸಿಂಘಾನಿಯಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com