2000 ರೂಪಾಯಿ ನೋಟು
ವಾಣಿಜ್ಯ
12 ಸಾವಿರ ಕೋಟಿ ರೂ ಮೌಲ್ಯದ 2000 ರೂ ಮುಖಬೆಲೆ ನೋಟುಗಳು ವಾಪಸ್ ಬಂದಿಲ್ಲ: ಆರ್ ಬಿಐ
2000 ರೂಪಾಯಿ ಮುಖಬೆಲೆಯ 12 ಸಾವಿರ ಕೋಟಿ ರೂಪಾಯಿ ಮೌಲ್ಯದ ನೋಟುಗಳು ರಿಸರ್ವ್ ಬ್ಯಾಂಕ್ ಗೆ ವಾಪಸ್ ಬರಬೇಕಿವೆ ಎಂದು ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ನವದೆಹಲಿ: 2000 ರೂಪಾಯಿ ಮುಖಬೆಲೆಯ 12 ಸಾವಿರ ಕೋಟಿ ರೂಪಾಯಿ ಮೌಲ್ಯದ ನೋಟುಗಳು ರಿಸರ್ವ್ ಬ್ಯಾಂಕ್ ಗೆ ವಾಪಸ್ ಬರಬೇಕಿವೆ ಎಂದು ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಈ ವರೆಗೂ ಶೇ.87 ರಷ್ಟು 2,000 ರೂ ಮುಖಬೆಲೆಯ ನೋಟುಗಳು ವಾಪಸ್ ಕೇಂದ್ರೀಯ ಬ್ಯಾಂಕ್ ಗೆ ವಾಪಸ್ ಬಂದಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದು ಉಳಿದ ಪ್ರಮಾಣದ ನೋಟುಗಳನ್ನು ಬೇರೆಡೆ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿತ್ತಿಯ ನೀತಿ ಪ್ರಕಟಿಸಿ ಮಾತನಾಡಿದ ಗೌರ್ನರ್ ಶಕ್ತಿಕಾಂತ್ ದಾಸ್, ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ಪೈಕಿ 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ವಾಪಸ್ಸಾಗಿದ್ದು 12,000 ಕೋಟಿ ಮೌಲ್ಯದಷ್ಟು ನೋಟುಗಳು ವಾಪಸ್ಸಾಗಬೇಕಿವೆ. ಇದು ಮೇ.19,2023 ವರೆಗಿನ ಅಂಕಿ-ಅಂಶವಾಗಿದೆ ಎಂದು ಹೇಳಿದ್ದಾರೆ. 2,000 ರೂಪಾಯಿ ಮುಖಬೆಲೆಯ ನೋಟುಗಳ ವಾಪಸಾತಿಗೆ ಕೇಂದ್ರೀಯ ಬ್ಯಾಂಕ್ ಅವಧಿಯನ್ನು ಒಂದು ವಾರದವರೆಗೆ ವಿಸ್ತರಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ