ಐಟಿ ನೇಮಕಾತಿ ಕುಸಿತ; ಪ್ರವೇಶ ಮಟ್ಟದ ಉದ್ಯೋಗಗಳಲ್ಲಿ ಶೇ.30 ರಷ್ಟು ಇಳಿಕೆ!

2023-24 ನೇ ಸಾಲಿನಲ್ಲಿ ಐಟಿ ನೇಮಕಾತಿ ಕುಸಿತ ಕಂಡಿದ್ದು, ಪ್ರವೇಶ ಮಟ್ಟದ ಉದ್ಯೋಗಗಳಲ್ಲಿ ಶೇ.30 ರಷ್ಟು ಇಳಿಕೆ ದಾಖಲಾಗಿದೆ. 
ಐಟಿ ನೇಮಕಾತಿ (ಸಾಂಕೇತಿಕ ಚಿತ್ರ)
ಐಟಿ ನೇಮಕಾತಿ (ಸಾಂಕೇತಿಕ ಚಿತ್ರ)

ಬೆಂಗಳೂರು: 2023-24 ನೇ ಸಾಲಿನಲ್ಲಿ ಐಟಿ ನೇಮಕಾತಿ ಕುಸಿತ ಕಂಡಿದ್ದು, ಪ್ರವೇಶ ಮಟ್ಟದ ಉದ್ಯೋಗಗಳಲ್ಲಿ ಶೇ.30 ರಷ್ಟು ಇಳಿಕೆ ದಾಖಲಾಗಿದೆ. ಈಗಷ್ಟೇ ಕೋರ್ಸ್ ಗಳನ್ನು ಮುಗಿಸಿರುವವರನ್ನು ನೇಮಕ ಮಾಡಿಕೊಳ್ಳುವುದನ್ನು ಐಟಿ ಸಂಸ್ಥೆಗಳು ನಿಧಾನಗೊಳಿಸಿವೆ.  

ಪ್ರಸ್ತುತ ಸ್ಥೂಲ ಅನಿಶ್ಚಿತತೆಯನ್ನು ಪರಿಗಣಿಸಿದರೆ, 2024 ನೇ ಆರ್ಥಿಕ ವರ್ಷದ ದ್ವಿತೀಯಾರ್ಧ ಸಾರ್ವಕಾಲಿಕ ಕಡಿಮೆ ನೇಮಕಾತಿಗೆ ಸಾಕ್ಷಿಯಾಗುವ ಸಾಧ್ಯತೆಗಳಿವೆ. ಇದೇ ವೇಳೆ ಕಂಪನಿಗಳು ಹೆಚ್ಚಿನ ಖರ್ಚುಗಳಿಗೆ ಕತ್ತರಿ ಹಾಕಲು ಮುಂದಾಗಿದ್ದು, ಈಗಿರುವ ಮಾನವ ಸಂಪನ್ಮೂಲದ ಶಕ್ತಿಯ ಬಳಕೆಯನ್ನು ಹೆಚ್ಚಿಸಲು ಮುಂದಾಗುತ್ತಿವೆ.
 
ಹಲವು ಐಟಿ ಕಂಪನಿಗಳು ಯಾವುದೇ ಕ್ಯಾಂಪಸ್ ನೇಮಕಾತಿ ಗುರಿಯನ್ನು ನಿಗದಿಪಡಿಸಿಲ್ಲ. ಅಷ್ಟೇ ಅಲ್ಲದೇ ಇನ್ಫೋಸಿಸ್ ಕಂಪನಿ, ತನ್ನೊಂದಿಗೆ ಇನ್ನೂ ಮಹತ್ವದ ಫ್ರೆಶರ್ ಬೆಂಚ್ ಇದೆ  ಎಂದು ಹೇಳಿದೆ. ಈ ಸಮಯದಲ್ಲಿ, ನಾವು ಇನ್ನೂ ಕ್ಯಾಂಪಸ್‌ಗಳಿಗೆ ಹೋಗುತ್ತಿಲ್ಲ" ಎಂದು ಕಂಪನಿಯ Q2 ಗಳಿಕೆಯ ಸಮ್ಮೇಳನದಲ್ಲಿ ಇನ್ಫೋಸಿಸ್‌ನ CFO ನಿಲಂಜನ್ ರಾಯ್ ಹೇಳಿದ್ದಾರೆ. ಕಂಪನಿ ಕಳೆದ ವರ್ಷ ಸುಮಾರು 50,000 ಫ್ರೆಶರ್‌ಗಳನ್ನು ನೇಮಿಸಿಕೊಂಡಿತ್ತು.

ವಿಪ್ರೋ, ಈಗಾಗಲೇ ತಾನು ನೇಮಕ ಮಾಡಿಕೊಂಡಿರುವವರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದೆ.

2023 ರ ಮಾರ್ಚ್ ನಲ್ಲಿ 6.6 ಮಿಲಿಯನ್ ಇದ್ದ ಐಟಿ ಸೆಕ್ಟರ್ ಸಂಖ್ಯೆ 6.8 ಮಿಲಿಯನ್ ಗಿಂತ ಕಡಿಮೆಯಾಗಲಿದೆ ಎಂದು ಸ್ಟಾಫಿಂಗ್ ಸಂಸ್ಥೆ ಎಕ್ಸ್‌ಫೀನೋ ಹೇಳಿದೆ. 

ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಭಾರತದ ಐಟಿ ಸಂಸ್ಥೆಗಳು ತಮ್ಮ ಮಾನವಶಕ್ತಿಯನ್ನು ಕಡಿಮೆ ಮಾಡಲು 38,950 ಉದ್ಯೋಗಿಗಳನ್ನು ನೌಕರಿಯಿಂದ ಕೈಬಿಟ್ಟಿದೆ. 2023 ರಲ್ಲಿ ಟಾಪ್ 5 ಐಟಿ ಸಂಸ್ಥೆಗಳ ಉದ್ಯೋಗಿಗಳ ನೇಮಕಾತಿ ಶೇ.69 ರಷ್ಟು ಕುಸಿತ ಕಂಡಿದೆ. 2022 ರಲ್ಲಿ 2,73,377 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು ಆದರೆ ಇದು 2023 ರಲ್ಲಿ 83,906 ಉದ್ಯೋಗಿಗಳಿಗೆ ಕುಸಿತ ಕಂಡಿದೆ. 

ಪ್ರಾಥಮಿಕ ಹಂತದ ನೌಕರಿಯ ಬೇಡಿಕೆ ಶೇ.25-30 ರಷ್ಟು ಕುಸಿತ ಕಂಡಿದ್ದು, ಐಟಿ ಕ್ಷೇತ್ರ ಗಮನಾರ್ಹ ರೂಪಾಂತರಕ್ಕೆ ಒಳಗಾಗಿದೆ ಎಂದು ಸಿಐಇಎಲ್ ಹೆಚ್ ಆರ್ ಸೇವೆಗಳ ಎಂಡಿ, ಸಿಇಒ ಆದಿತ್ಯ ನಾರಾಯಣ್ ಮಿಶ್ರಾ ಹೇಳಿದ್ದಾರೆ.

"ತಾಜಾ ಪ್ರತಿಭೆಗಳನ್ನು ನೇಮಿಸಿಕೊಳ್ಳುವಲ್ಲಿನ ಈ ಕುಸಿತವು ಹಲವಾರು ಅಂಶಗಳಿಗೆ ಕಾರಣವೆಂದು ಹೇಳಬಹುದಾಗಿದೆ. ಯಾಂತ್ರೀಕೃತಗೊಂಡ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿನ ತ್ವರಿತ ಪ್ರಗತಿಯು ಉದ್ಯೋಗಿಗಳನ್ನು ಉತ್ತಮಗೊಳಿಸಲು ಕಾರಣವಾಗಿದೆ ಮತ್ತು ಆದ್ದರಿಂದ ಬೇಡಿಕೆಯಲ್ಲಿ ಇಳಿಕೆಯಾಗಿದೆ, ”ಎಂದು ಆದಿತ್ಯ ನಾರಾಯಣ್ ಹೇಳಿದ್ದಾರೆ. ಹೊಸಬರ ವ್ಯಾಪಕ ನೇಮಕಾತಿಯಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ವೃತ್ತಿಪರರ ಹುಡುಕಾಟದಲ್ಲಿ ಸಂಸ್ಥೆಗಳು ತೊಡಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com