ಆರು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ 'ಮೇರಾ ಬಿಲ್ ಮೇರಾ ಅಧಿಕಾರ್' ಜಿಎಸ್‌ಟಿ ಬಹುಮಾನ ಯೋಜನೆ ಪ್ರಾರಂಭ: 30 ಕೋಟಿ ರೂ. ಮೀಸಲು

ಜಿಎಸ್‌ಟಿ ಲಕ್ಕಿ ಡ್ರಾ 'ಮೇರಾ ಬಿಲ್ ಮೇರಾ ಅಧಿಕಾರ್' ಯೋಜನೆಯನ್ನು ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶುಕ್ರವಾರ ಪ್ರಾರಂಭಿಸಲಾಗಿದ್ದು, ಈ ಬಹುಮಾನ ಯೋಜನೆಗಾಗಿ ಕೇಂದ್ರ ಮತ್ತು ರಾಜ್ಯಗಳು ಈ ಹಣಕಾಸು ವರ್ಷಕ್ಕೆ 30 ಕೋಟಿ ರೂಪಾಯಿಯನ್ನು ಮೀಸಲಿಟ್ಟಿವೆ.
ಜಿಎಸ್ ಟಿ ಸಾಂದರ್ಭಿಕ ಚಿತ್ರ
ಜಿಎಸ್ ಟಿ ಸಾಂದರ್ಭಿಕ ಚಿತ್ರ

ಗುರುಗ್ರಾಮ: ಜಿಎಸ್‌ಟಿ ಲಕ್ಕಿ ಡ್ರಾ 'ಮೇರಾ ಬಿಲ್ ಮೇರಾ ಅಧಿಕಾರ್' ಯೋಜನೆಯನ್ನು ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶುಕ್ರವಾರ ಪ್ರಾರಂಭಿಸಲಾಗಿದ್ದು, ಈ ಬಹುಮಾನ ಯೋಜನೆಗಾಗಿ ಕೇಂದ್ರ ಮತ್ತು ರಾಜ್ಯಗಳು ಈ ಹಣಕಾಸು ವರ್ಷಕ್ಕೆ 30 ಕೋಟಿ ರೂಪಾಯಿಯನ್ನು ಮೀಸಲಿಟ್ಟಿವೆ.

ಈ ಯೋಜನೆಯ ಆ್ಯಪ್ ನ್ನು ಇಲ್ಲಿಯವರೆಗೂ 50,000 ಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಹರಿಯಾಣ ಉಪ ಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಹೇಳಿದ್ದಾರೆ. 

'ಮೇರಾ ಬಿಲ್ ಮೇರಾ ಅಧಿಕಾರ್' ಜಿಎಸ್‌ಟಿ ಲಕ್ಕಿ ಡ್ರಾ ಯೋಜನೆಯನ್ನು ಪ್ರಾಯೋಗಿಕವಾಗಿ ಆರು ರಾಜ್ಯಗಳಲ್ಲಿ ಪ್ರಾರಂಭಿಸಲಾಗುತ್ತಿದ್ದು, ಬಹುಮಾನದ ಹಣವನ್ನು ಕೇಂದ್ರ ಮತ್ತು ರಾಜ್ಯಗಳು ಸಮಾನವಾಗಿ ನೀಡಲಿವೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ಜಿಎಸ್‌ಟಿಯು ನಾಗರಿಕರು, ಗ್ರಾಹಕರು ಮತ್ತು ಸರ್ಕಾರಗಳಿಗೆ ಪ್ರಯೋಜನಕಾರಿಯಾಗಿದೆ. ಆದಾಯವು ಪ್ರತಿ ತಿಂಗಳು ಹೆಚ್ಚುತ್ತಿದೆ ಮತ್ತು ಜಿಎಸ್‌ಟಿಯಡಿ ತೆರಿಗೆ ದರ ಕಡಿಮೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳು ಒಗ್ಗೂಡಿವೆ ಎಂದು ಅವರು ತಿಳಿಸಿದ್ದಾರೆ. 

ಈ ಹಣಕಾಸು ವರ್ಷದಲ್ಲಿ ಪ್ರತಿ ತಿಂಗಳು ಸರಾಸರಿ ಜಿಎಸ್‌ಟಿ ಸಂಗ್ರಹ 1.60 ಲಕ್ಷ ಕೋಟಿ ರೂ. ಆಗಿದ್ದು, ಅಸ್ಸಾಂ, ಗುಜರಾತ್ ಮತ್ತು ಹರಿಯಾಣ ಮತ್ತು ಪುದುಚೇರಿ, ದಾದ್ರಾ ನಗರ ಹವೇಲಿ, ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದಿನಿಂದ ಪ್ರಾಯೋಗಿಕ ಆಧಾರದ ಮೇಲೆ ಮೇರಾ ಬಿಲ್ ಮೇರಾ ಅಧಿಕಾರ್ ಯೋಜನೆಯನ್ನು ಸರ್ಕಾರ ಶುಕ್ರವಾರ ಪ್ರಾರಂಭಿಸಿದೆ. ಪ್ರತಿ ತಿಂಗಳು 810 ಲಕ್ಕಿ ಡ್ರಾಗಳು ನಡೆಯುತ್ತವೆ. ಪ್ರತಿ ತ್ರೈಮಾಸಿಕದಲ್ಲಿ 2 ಬಂಪರ್ ಲಕ್ಕಿ ಡ್ರಾಗಳು ಇರುತ್ತವೆ.

ಮಾಸಿಕ ಡ್ರಾಗಳಲ್ಲಿ ತಲಾ 10,000 ರೂಪಾಯಿಗಳ ಮೌಲ್ಯದ ಜಿಎಸ್‌ಟಿ ಇನ್‌ವಾಯ್ಸ್‌ಗಳ 800 ಲಕ್ಕಿ ಡ್ರಾಗಳು ಮತ್ತು ತಲಾ 10 ಲಕ್ಷ ರೂ. ಬಹುಮಾನಗಳೊಂದಿಗೆ 10 ಡ್ರಾಗಳು ಸೇರಿವೆ. ಪ್ರತಿ ತ್ರೈಮಾಸಿಕದಲ್ಲಿ ತಲಾ 1 ಕೋಟಿ ರೂ. ಬಂಪರ್ ಡ್ರಾ ಸಿಗಲಿದೆ.  ಜಿಎಸ್‌ಟಿ ಇನ್ ವಾಯ್ಸ್  ತಮ್ಮ ಹಕ್ಕು ಎಂದು ಜನರು ತಿಳಿದಿರಬೇಕು, ಮಾರಾಟದ ನಂತರದ ಸೇವೆಗೆ ಇದು ಅಗತ್ಯವಿದೆ ಮತ್ತು ಜನರಿಗೆ ಅರಿವು ಮೂಡಿಸಲು ನಾವು ಈ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಎಂದು ಮಲ್ಹೋತ್ರಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com