ವಿದೇಶಿ ವಿನಿಮಯ ಮೀಸಲು
ವಾಣಿಜ್ಯ
ವಿದೇಶಿ ವಿನಿಮಯ 4.03 ಬಿಲಿಯನ್ ಡಾಲರ್ ನಿಂದ 598.89 ಬಿಲಿಯನ್ ಡಾಲರ್ ಗೆ ಏರಿಕೆ
ಭಾರತದ ವಿದೇಶಿ ವಿನಿಮಯ 4.03 ಬಿಲಿಯನ್ ಡಾಲರ್ ನಿಂದ 598.89 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಮುಂಬೈ: ಭಾರತದ ವಿದೇಶಿ ವಿನಿಮಯ 4.03 ಬಿಲಿಯನ್ ಡಾಲರ್ ನಿಂದ 598.89 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಸೆ.01 ರಂದು ಅಂತ್ಯಗೊಂಡ ವಾರದಲ್ಲಿ 598.89 ಬಿಲಿಯನ್ ಡಾಲರ್ ಗೆ ವಿದೇಶಿ ವಿನಿಮಯ ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಕಳೆದ ವಾರದಲ್ಲಿ ಒಟ್ಟಾರೆ ಮೀಸಲು 30 ಮಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ. ಅಕ್ಟೋಬರ್ 2021 ರಲ್ಲಿ, ದೇಶದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ $645 ಬಿಲಿಯನ್ ತಲುಪಿತ್ತು. ಕಳೆದ ವರ್ಷದಿಂದ ಪ್ರಮುಖವಾಗಿ ಜಾಗತಿಕ ಬೆಳವಣಿಗೆಗಳಿಂದ ಉಂಟಾದ ಒತ್ತಡಗಳ ನಡುವೆ ರೂಪಾಯಿಯ ಮೌಲ್ಯವನ್ನು ರಕ್ಷಿಸಲು ಕೇಂದ್ರೀಯ ಬ್ಯಾಂಕ್ ಮೀಸಲನ್ನು ಬಳಸಿದ್ದರಿಂದ ಮೀಸಲು ಕುಸಿದಿದೆ.
ಐಎಂಎಫ್ ನಲ್ಲಿ ದೇಶದ ಮೀಸಲು ಸ್ಥಿತಿ 5.07 ಬಿಲಿಯನ್ ಡಾಲರ್ ನಿಂದ 12 ಮಿಲಿಯನ್ ಡಾಲರ್ ಗೆ ಏರಿಕೆಯಾಗಿದೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ