ಯುಪಿಐ ವಹಿವಾಟು ಗಾತ್ರ 4.6 ಬಿಲಿಯನ್ ನಿಂದ 9.3 ಬಿಲಿಯನ್ ಗೆ ಏರಿಕೆ

ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ದೇಶದ ಪ್ರಬಲ ಪೇಮೆಂಟ್ ಮಾಧ್ಯಮವಾಗಿ ಮುಂದುವರೆದಿದ್ದು, 2022 ರ ಜನವರಿಯಲ್ಲಿ 4.6 ಬಿಲಿಯನ್ ಗಳಷ್ಟಿದ್ದ ವಹಿವಾಟು, ಈಗ 2023 ರ ಜೂನ್ ನಲ್ಲಿ 9.3 ಬಿಲಿಯನ್ ಗಳಿಗೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ದೇಶದ ಪ್ರಬಲ ಪೇಮೆಂಟ್ ಮಾಧ್ಯಮವಾಗಿ ಮುಂದುವರೆದಿದ್ದು, 2022 ರ ಜನವರಿಯಲ್ಲಿ 4.6 ಬಿಲಿಯನ್ ಗಳಷ್ಟಿದ್ದ ವಹಿವಾಟು, ಈಗ 2023 ರ ಜೂನ್ ನಲ್ಲಿ 9.3 ಬಿಲಿಯನ್ ಗಳಿಗೆ ಏರಿಕೆಯಾಗಿದೆ. 

ವಹಿವಾಟು ಮೌಲ್ಯವೂ ಹೆಚ್ಚಳವಾಗಿದ್ದು,  8.3 ಲಕ್ಷ ಕೋಟಿಯಿಂದ 14.7 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಹೆಚ್ 1 2023 ರ ಸಾಲಿನ ವರ್ಲ್ಡ್ ಲೈನ್ ಡಿಜಿಟಲ್ ಪೇಮೆಂಟ್ ವರದಿ ಹೇಳಿದೆ. 

ಕಳೆದ ವರ್ಷ ಇದೇ ಅವಧಿಯಲ್ಲಿ 33.55 ಶತಕೋಟಿಗೆ ಹೋಲಿಸಿದರೆ ಈ ವರ್ಷದ ಮೊದಲಾರ್ಧದಲ್ಲಿ ಮೊಬೈಲ್ ವಹಿವಾಟುಗಳ ಸಂಖ್ಯೆ 52.15 ಶತಕೋಟಿ ಆಗಿರುವುದರಿಂದ ಮೊಬೈಲ್ ಫೋನ್‌ಗಳು ಡಿಜಿಟಲ್ ವಹಿವಾಟುಗಳನ್ನು ಮುಂದುವರೆಸುತ್ತಿವೆ ಎಂದು ಮಂಗಳವಾರ ಬಿಡುಗಡೆಯಾದ ವರದಿ ಬಿಡುಗಡೆ ಮಾಡಿದೆ.

ಆದರೆ 2022ರ ಹೆಚ್ 1 ರಲ್ಲಿ ಸರಾಸರಿ ವ್ಯಕ್ತಿಯೋರ್ವ ಒಂದು ಬಳಕೆಯಲ್ಲಿ ಮಾಡುವ ವಹಿವಾಟು (ಟಿಕೆಟ್ ಗಾತ್ರ) ಶೇ.10 ರಷ್ಟು ಅಂದರೆ 1,774 ರೂಪಾಯಿಗಳಿಂದ 1,604 ರೂಪಾಯಿಗಳಿಗೆ ಇಳಿಕೆಯಾಗಿದೆ. ಈ ಇಳಿಕೆಯು UPI ಅನ್ನು ಸಣ್ಣ ಅಥವಾ ಸೂಕ್ಷ್ಮ ವಹಿವಾಟುಗಳ ಬಳಕೆ ಆವರಿಸಿರುವುದು ಸೂಚಿಸುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ವಹಿವಾಟು ಹಾಗೂ ವ್ಯಕ್ತಿಯಿಂದ ವ್ಯಾಪಾರಿಗಳಿಗೆ ನಡೆಯುವ ಉತ್ತಮ ಬೆಳವಣಿಗೆ ಕಂಡಿದೆ ಎಂದು ವರದಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com